ಜನಸ್ಪಂದನ ನ್ಯೂಸ್, ಮಡಿಕೇರಿ : ಕೊಡಗು ಜಿಲ್ಲೆಯ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿಯನ್ನು, ಮರುದಿನ ಸಾಕು ನಾಯಿ (Dog) ಯ ಬುದ್ಧಿವಂತಿಕೆಯೊಂದು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ಶನಿವಾರ ಮಧ್ಯಾಹ್ನ ಕಾಣೆಯಾಗಿದ್ದ ಮಗು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಂಯುಕ್ತ ಹುಡುಕಾಟದ ನಂತರ ಪೋಷಕರ ಮಡಿಲಿಗೆ ಮರಳಿದ್ದು ಘಟನೆಯ ಅಂತ್ಯ ಸಂತೋಷದಲ್ಲಿ ಕೊನೆಗೊಂಡಿದೆ.
ಇಡೀ ರಾತ್ರಿ ಕತ್ತಲಾದ ತೋಟದಲ್ಲಿ ಒಂಟಿಯಾಗಿ ಕಳೆದಿದ್ದ ಮಗು, ಮರುದಿನ ಬೆಳಿಗ್ಗೆ ಹುಡುಕಾಟ ನಡೆಸಿದ ಸಂದರ್ಭದಲ್ಲಿ ನಾಯಿ (Dog) ಯೊಂದು ಪತ್ತೆಹಚ್ಚಿ ತಾಯಿಯ ಮಡಿಲಿಗೆ ತಲುಪಿಸಿದೆ.
ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.
ನಾಪತ್ತೆಯಾಗಿದ್ದ ಮಗು :
ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದ ದಂಪತಿ ಒಬ್ಬರ 2 ವರ್ಷದ ಮಗು ಸುನನ್ಯಾ, ಶನಿವಾರ ಮಧ್ಯಾಹ್ನ ಕಾಫಿ ತೋಟದಲ್ಲಿ ಕಾಣೆಯಾಗಿತ್ತು. ಮಗು ಆಕೆಯ ಪೋಷಕರೊಂದಿಗೆ ಶರಿ ಗಣಪತಿ ಎಂಬವರ ತೋಟಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.
ಮೊಬೈಲ್ ನೋಡುತ್ತಿದ್ದಾಗ ಮಗು ನಾಪತ್ತೆ :
ಶನಿವಾರ ಮಧ್ಯಾಹ್ನ ತೋಟದಲ್ಲಿ ನೆಟ್ವರ್ಕ್ ಸಿಗುವ ಜಾಗದಲ್ಲಿ ಸುನನ್ಯಾ ತಾಯಿ ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದೇ ವೇಳೆ ಮಗು ಶೌಚಕ್ಕೆಂದು ಹತ್ತಿರದ ಕಾಫಿ ಗಿಡಗಳ ಕಡೆಗೆ ಹೋಗಿತ್ತು. ನಂತರ ಮಗು ಹಿಂದಿರುಗದೆ ತೋಟದ ಒಳಭಾಗದಲ್ಲಿ ದಾರಿ ತಪ್ಪಿ ನಡೆದುಕೊಂಡು ಹೋಗಿದೆ ಎಂದು ಶಂಕಿಸಲಾಗಿದೆ.
ಇದನ್ನು ಓದಿ : ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.
ರಾತ್ರಿ ತುಂಬಾ ಹುಡುಕಾಟ — ಸಿಗದ ಸುಳಿವು :
ಮಗು ನಾಪತ್ತೆಯಾಗುತ್ತಿದ್ದಂತೇ ಪೋಷಕರು, ಸ್ಥಳೀಯರು, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಹುಡುಕಾಟ ನಡೆಸಿದರೂ ಸುಳಿವೂ ಸಿಗಲಿಲ್ಲ. ಮಗು ಅಳದೇ ಇದ್ದದ್ದರಿಂದ ಹುಡುಕುವುದು ಇನ್ನಷ್ಟು ಕಷ್ಟವಾಗಿತ್ತು ಎನ್ನಲಾಗಿದೆ. ಹುಲಿ ದಾಳಿ ಕೂಡ ಸಂಭವಿಸಿರಬಹುದೆಂಬ ಭಯದಿಂದ ಅರಣ್ಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದರು.
ಅರಣ್ಯ ಇಲಾಖೆ, ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಸುಮಾರು 70–80 ಸದಸ್ಯರ ತಂಡ ರಾತ್ರಿ ಹೊತ್ತಿಗೂ ಹುಡುಕಾಟ ಮುಂದುವರೆಸಿದರು.
ಮರುದಿನ ನಾಯಿ (Dog) ಯೊಂದು ಪತ್ತೆ ಮಾಡಿ ಜೀವ ಉಳಿಸಿದ ಕ್ಷಣ :
ಭಾನುವಾರ ಬೆಳಿಗ್ಗೆ, ಸುನನ್ಯಾ ಇರುವ ಸ್ಥಳದಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಅನಿಲ್ ಕಾಳಪ್ಪ ಅವರ ತೋಟದಲ್ಲಿ ಸಾಕಲಾದ ‘ಓರಿಯೋ’ ಎಂಬ ನಾಯಿ (Dog) ಏಕಾಏಕಿ ಬೊಗಳಲಾರಂಭಿಸಿತು. ಅನುಮಾನಗೊಂಡ ತೋಟದ ಮಾಲೀಕರು ಅಲ್ಲಿಗೆ ಹೋಗಿ ನೋಡಿದಾಗ, ಮಗು ಕಾಫಿ ಗಿಡಗಳ ಮಧ್ಯದಲ್ಲಿ ಕುಳಿತಿರುವುದು ಕಂಡುಬಂದಿದೆ.
ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್ : ಚಲಿಸಿದ ಗೂಡ್ಸ್ ರೈಲು ; ಮುಂದೆನಾಯ್ತು? Video ನೋಡಿ.
ನಾಯಿ (Dog) ಪತ್ತೆ ಹಚ್ಚಿದ ಮಗು ಅಳದೆ, ಕೇವಲ ಆಯಾಸಗೊಂಡ ಸ್ಥಿತಿಯಲ್ಲಿ ಮಾತ್ರ ಕಂಡುಬಂತು. ನಂತರ ಸ್ಥಳೀಯರು ಮಗುವನ್ನು ಎತ್ತಿಕೊಂಡು ಪೋಷಕರ ಬಳಿ ತಲುಪಿಸಿದರು. ಮಗಳನ್ನ ಮತ್ತೆ ನೋಡಿದ ಪೋಷಕರು ಭಾವೋದ್ರಿಕ್ತರಾದರು.
ಸ್ಥಳೀಯರ ಧೈರ್ಯ ಮತ್ತು ನಾಯಿಯ ಜಾಣ್ಮೆಗೆ ಪ್ರಶಂಸೆ :
ಸುನನ್ಯಾ ಪತ್ತೆಯಾದ ಸುದ್ದಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಾಯಿ (Dog) ಯ ಜಾಣ್ಮೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಳದೆ, ಶಾಂತವಾಗಿದ್ದ ಮಗುವನ್ನು ಪತ್ತೆ ಮಾಡುವುದು ಕಷ್ಟಕರವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಆರೋಗ್ಯ ಸ್ಥಿತಿ :
ನಾಯಿ (Dog) ಪತ್ತೆ ಹಚ್ಚಿದ ಮಗು ಸದ್ಯ ಸುರಕ್ಷಿತವಾಗಿದೆ ಮತ್ತು ವೈದ್ಯಕೀಯ ತಪಾಸಣೆಯ ನಂತರ ಮನೆಗೆ ಕರೆದೊಯ್ಯಲಾಗಿದೆ. ಯಾವುದೇ ಗಂಭೀರ ಗಾಯಗಳಿಲ್ಲ.
ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!

ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಅಂಗಗಳಲ್ಲಿ ಲಿವರ್ (Liver) ಕೂಡ ಒಂದು. ಲಿವರ್ ಸರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಜೀರ್ಣಕ್ರಿಯೆ, ವಿಷಹರಣ, ರಕ್ತ ಶುದ್ಧೀಕರಣ ಸೇರಿದಂತೆ ಹಲವು ಪ್ರಕ್ರಿಯೆಗಳು ಸಮನ್ವಯವಾಗಿ ನಡೆಯುತ್ತವೆ. ಲಿವರ್ ಶುಷ್ಟವಾಗಿರಲು ಜೀವನಶೈಲಿ ಮತ್ತು ಆಹಾರದ ಪದ್ಧತಿ ಮಹತ್ವದ್ದಾಗಿದೆ. ತಪ್ಪು ಆಹಾರ ಅಭ್ಯಾಸಗಳು ಈ ಅಂಗದ ಮೇಲೆ ನೇರವಾಗಿ ಹಾನಿ ಉಂಟುಮಾಡುವ ಸಾಧ್ಯತೆಯಿದೆ.
ಮದ್ಯ ಮತ್ತು ಸಕ್ಕರೆಯ ಅತಿಯಾದ ಸೇವನೆ – ಲಿವರ್ (Liver) ಗೆ ದೊಡ್ಡ ಅಪಾಯ :
ಆರೋಗ್ಯ ತಜ್ಞರ ಪ್ರಕಾರ, ಮದ್ಯದ ಅತಿಸೇವನೆ ಲಿವರ್ ಸುತ್ತಮುತ್ತಲಿನ ಕೊಬ್ಬಿನ ಪದರವನ್ನು ಹೆಚ್ಚಿಸಿ ಫ್ಯಾಟಿ ಲಿವರ್ (Liver) ಸಮಸ್ಯೆಗೆ ಕಾರಣವಾಗುತ್ತದೆ. ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಇದು ಲಿವರ್ ಸಿರೋಸಿಸ್ ಎನ್ನುವ ಗಂಭೀರ ಸ್ಥಿತಿಗೆ ತಲುಪಬಹುದು.
ಇದನ್ನು ಓದಿ : Urine ಬಣ್ಣವೇ ಹೇಳುತ್ತದೆ ನಮ್ಮ ಆರೋಗ್ಯದ ಮುಖ್ಯ ಎಚ್ಚರಿಕೆ ಸೂಚನೆಗಳನ್ನ.!
ಈ ಹಂತದಲ್ಲಿ ಲಿವರ್ನ ಕಾರ್ಯ ನಿಧಾನಗೊಳ್ಳುವುದರಿಂದ ಕ್ಯಾನ್ಸರ್ ಹಾಗೂ ಲಿವರ್ ವೈಫಲ್ಯದ ಅಪಾಯ ಹೆಚ್ಚುತ್ತದೆ.
ಅದೇ ರೀತಿಯಲ್ಲಿ, ದಿನನಿತ್ಯ ನಾವು ತೆಗೆದುಕೊಳ್ಳುವ ಸಕ್ಕರೆಗೂ ಹೆಚ್ಚು ಪ್ರಮಾಣದ ಫ್ರಕ್ಟೋಸ್ ಇರುತ್ತದೆ. ಮದ್ಯಪಾನ ಮಾಡದವರಿಗೂ ಸಕ್ಕರೆಯ ಅತಿಯಾದ ಸೇವನೆ ಲಿವರ್ಗೆ ಹಾನಿಕಾರಕ. ಇದು ದೇಹದಲ್ಲಿ ಕೊಬ್ಬು ಹೆಚ್ಚಿಸುವುದರ ಜೊತೆಗೆ ಟೈಪ್ 2 ಮಧುಮೇಹ ಅಪಾಯವನ್ನೂ ಹೆಚ್ಚಿಸುತ್ತದೆ.
ಮದ್ಯ ಮತ್ತು ಸಕ್ಕರೆಯನ್ನು ಒಟ್ಟಿಗೆ ಸೇವಿಸುವುದರಿಂದ ಲಿವರ್ (Liver) ಗೆ ಉರಿಯೂತ ಉಂಟಾಗುವ ಸಾಧ್ಯತೆ ಹೆಚ್ಚಿನುದು. ಇದರಿಂದ ಬೊಜ್ಜು, ಮಧುಮೇಹ ಮತ್ತು ಹಾರ್ಮೋನ್ ಅಸಮತೋಲನದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಇದನ್ನು ಓದಿ : ಚಳಿಗಾಲದಲ್ಲಿ Geyser ಬಳಸಿ ಸ್ನಾನ ಮಾಡ್ತೀರಾ? ತಪ್ಪಾಗಿ ಬಳಸಿದರೆ ಅಪಾಯ ತಪ್ಪದು ; ಓದಿ.!
ಫಾಸ್ಟ್ ಫುಡ್ ಮತ್ತು ಪ್ಯಾಕ್ ಆಹಾರಗಳು – ಮರೆಮಾಡಿದ ಅಪಾಯ :
ಇಂದಿನ ಪ್ಯಾಕ್ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಅನಾರೋಗ್ಯಕರ ಕೊಬ್ಬು ಮತ್ತು ಅತಿಯಾದ ಸಕ್ಕರೆ ಸೇರಿರುತ್ತದೆ. ಫ್ರೈಡ್ ಐಟಂಗಳು, ಫಾಸ್ಟ್ ಫುಡ್ಗಳು ಮತ್ತು ತಕ್ಷಣ ತಯಾರಾಗುವ ಪ್ಯಾಕ್ ಸ್ನ್ಯಾಕ್ಸ್ ನಿಯಮಿತವಾಗಿ ಸೇವಿಸುವವರಿಗೆ ಫ್ಯಾಟಿ ಲಿವರ್ನ ಅಪಾಯ ಹೆಚ್ಚು.
ಲಿವರ್ (Liver) ಆರೋಗ್ಯಕ್ಕೆ ನೆರವಾಗುವ ಆಹಾರಗಳು :
ತಜ್ಞರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಆಹಾರದಲ್ಲಿ ಲಿವರ್ ಶುದ್ಧೀಕರಣ (ಡಿಟಾಕ್ಸ್) ಮಾಡುವ ಕೆಲವು ಆಹಾರಗಳನ್ನು ಸೇರಿಸುವುದು ಒಳಿತು. ಇವು ಜೀರ್ಣಕ್ರಿಯೆಯನ್ನು ಸುಧಾರಿಸಿ ಲಿವರ್ (Liver) ನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ.
- ಹಸಿರು ಎಲೆ ತರಕಾರಿಗಳು.
- ಅರಿಶಿನ.
- ಬೆಳ್ಳುಳ್ಳಿ.
- ನಿಂಬೆ ಮತ್ತು ಸಿಟ್ರಸ್ ಹಣ್ಣುಗಳು.
- ಹೆಚ್ಚಿನ ಪ್ರಮಾಣದ ನೀರು.
- ನೈಸರ್ಗಿಕ ಸಿಹಿ ಪದಾರ್ಥಗಳು – ಬೆಲ್ಲ, ಖರ್ಜೂರ.
ಇದನ್ನು ಓದಿ : ಪಾರ್ಶ್ವವಾಯು (Stroke) ಬರುವ ಮುನ್ನವೇ ದೇಹ ನೀಡುತ್ತೆ ಎಚ್ಚರಿಕೆ ; ತಡೆಗಟ್ಟುವ ಸಲಹೆಗಳು.
ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ, ಸಂಪೂರ್ಣವಾಗಿ ಬಿಡಲು ಸಾಧ್ಯವಿಲ್ಲದಿದ್ದರೆ, ಈ ನೈಸರ್ಗಿಕ ಪರ್ಯಾಯಗಳನ್ನು ಬಳಸಬಹುದು.
ಮದ್ಯ ಸೇವಿಸುವ ಅಭ್ಯಾಸವಿರುವವರು ಸೇವನೆಯನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು ಲಿವರ್ ರಕ್ಷಣೆಗೆ ಅತ್ಯುತ್ತಮ.
Disclaimer : ಮೇಲಿನ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಲಿವರ್ (Liver) ಸಂಬಂಧಿತ ಲಕ್ಷಣಗಳು ಕಂಡುಬಂದಲ್ಲಿ, ಅಥವಾ ಹೊಸ ಆಹಾರ ಅಭ್ಯಾಸಗಳನ್ನು ಅನುಸರಿಸುವುದಕ್ಕೆ ಯೋಚಿಸುತ್ತಿದ್ದರೆ, ವೈದ್ಯರು ಅಥವಾ ಪೌಷ್ಠಿಕ ತಜ್ಞರ ಸಲಹೆ ಪಡೆಯುವುದು ಅನಿವಾರ್ಯ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ





