Thursday, September 19, 2024
spot_img
spot_img
spot_img
spot_img
spot_img
spot_img
spot_img

ಲೋನ್‌ಗೆಂದು ಬಂದು ಬ್ಯಾಂಕ್ CEOನನ್ನೇ ದಿವಾಳಿ ಮಾಡಿದ ಕಿಲಾಡಿ ಮಹಿಳೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಬೇಕು ಎಂದರೆ ಅನೇಕ ಕಾಗದ ಪತ್ರಗಳು ಬೇಕು. ಒಂದು ವೇಳೆ ಕಾಗದ ಪತ್ರಗಳು ಸರಿಯಾಗಿದ್ದರೂ ಸಹ ಹಲವು ನೆಪ ಹೇಳಿ ಬ್ಯಾಂಕ್ ಸಿಬ್ಬಂದಿ ಜನಸಾಮಾನ್ಯರನ್ನು ಸಾಕಷ್ಟು ಅಲೆದಾಡಿಸುವುದನ್ನು ನೀವು – ನಾವು ನೋಡಿದ್ದೇವೆ.

ಆದರೆ ಇಲ್ಲೊಬ್ಬಳು ಮಹಿಳೆ ಮನೆ ದಾಖಲೆಗಳು ಸರಿ ಇಲ್ಲ ಎಂದು ಸಾಲ ನೀಡಲು ನಿರಾಕರಿಸಿದ ಬ್ಯಾಂಕ್ ಸಿಇಒನನ್ನೇ ದಿವಾಳಿಯಾಗುವಂತೆ ಮಾಡಿದ್ದಾಳೆ ಎಂದರೆ ನೀವೂ ನಂಬಲೇ ಬೇಕು.

ಅಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ, 66 ವರ್ಷದ ನವೀ ಮುಂಬೈನ ನಿವಾಸಿಯಾದ ಕಾಪರೇಟಿವ್ ಬ್ಯಾಂಕೊಂದರ ಸಿಇಒ ಎಲ್ಲವನ್ನು ಕಳೆದುಕೊಂಡವರು.

ಇದನ್ನು ಓದಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ : 10/12 ನೇ ತರಗತಿ ಪಾಸಾದವರಿಗೆ 19900 ರೂ. ವೇತನ.!

ಬ್ಯಾಂಕ್‌ನ ನಿವೃತ್ತ ಸಿಇಒ ಹೇಳುವ ಪ್ರಕಾರ, ಪ್ರಾರಂಭದಲ್ಲಿ ಮಹಿಳೆ ತಾನು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ತನಗೆ ಲೋನ್ ಬೇಕು ಎಂದು ಮನವಿ ಮಾಡಿದ್ದಾಳೆ. ಆದರೆ ಲೋನ್ ಪ್ರಕ್ರಿಯೆಯ ವೇಳೆ ಆಕೆ ನೀಡಿದ ಡಾಕ್ಯುಮೆಂಟುಗಳು ಸರಿ ಇಲ್ಲ ಎಂಬುದು ಬ್ಯಾಂಕ್ ಸಿಬ್ಬಂದಿ ಅರಿವಿಗೆ ಬಂದಿದ್ದು, ಅವರು ಆಕೆಯ ಮನೆಯನ್ನು ಸರ್ವೇ ಮಾಡಲು ಮುಂದಾಗಿದ್ದಾರೆ. ಅದರಂತೆ ಥಾಣೆಯ ಕೊಪ್ರಿ ಬಳಿ ಇರುವ ಆನಂದ್ ನಗರ ಪ್ರದೇಶದಲ್ಲಿರುವ ಮನೆಗೆ ಮನೆ ಸಮೀಕ್ಷೆಗಾಗಿ ಸಿಇಒ ಒಬ್ಬರೇ ಬಂದಿದ್ದಾರೆ.

ಈ ವೇಳೆ ಮಹಿಳೆ ದಾಖಲೆಗಳ ಪರಿಶೀಲನೆಗಾಗಿ ಮನೆಗೆ ಬಂದ ಬ್ಯಾಂಕ್ ಸಿಇಒಗೆ ತನ್ನ ಮೈಮಾಟ ತೋರಿಸಿ ಬಲೆಗೆ ಬೀಳುವಂತೆ ಮಾಡಿ ಮಂಚಕ್ಕೆ ಕರೆದಿದ್ದಾಳೆ. ಇದಾದ ನಂತರ ಆಕೆಗೆ ಪ್ರತಿ ತಿಂಗಳು 7,300 ರೂ ಇಎಂಐ ಕಟ್ಟುವಂತೆ 3 ಲಕ್ಷ ರೂಪಾಯಿ ಸಾಲ ನೀಡಲಾಗಿದೆ.

ಒಂದು ತಿಂಗಳ ನಂತರ ಮಹಿಳೆ ಬ್ಯಾಂಕ್ ಸಿಇಒನನ್ನು ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದ್ದಾಳೆ. ಬ್ಯಾಂಕ್ ಸಿಇಒ ಆಕೆಯ ಮೊಬೈಲ್ ಫೋನ್‌ಗೆ ಕಳುಹಿಸಿದ ಬೆತ್ತಲೆ ಫೋಟೋಗಳನ್ನು ಆತನ ಕುಟುಂಬ ಹಾಗೂ ಸಹೋದ್ಯೋಗಿಗಳಿಗೆ ಕಳುಹಿಸುವುದಾಗಿ ಬೆದರಿಸಿ, ತನಗೆ 8 ಕೋಟಿ ಹಣ ಪಾವತಿ ಮಾಡುವಂತೆ ಹೇಳಿದ್ದಾಳೆ.

ಇದನ್ನು ಓದಿ : ಪ್ರತಿದಿನ ಬೆಳಿಗ್ಗೆ 3 ಬಾದಾಮಿಯನ್ನು ತಿನ್ನುವುದರಿಂದ ಎಷ್ಟೇಲ್ಲಾ ಪ್ರಯೋಜನಗಳಿವೇ ಗೋತ್ತಾ.?

ಇತ್ತ ಮರ್ಯಾದೆಗೆ ಅಂಜಿದ ಬ್ಯಾಂಕ್ ಸಿಇಒ ಮೊದಲಿಗೆ 5 ಲಕ್ಷ ರೂಪಾಯಿಯನ್ನು ನೀಡಿದ್ದಾನೆ. ಇದಾದ ನಂತರ ನಿರಂತರವಾಗಿ ಬ್ಲಾಕ್‌ಮೇಲ್‌ಗಳು ನಡೆಯುತ್ತಲೇ ಇದ್ದು, ಅಂದಹಾಗೆ ಈ ನಿವೃತ್ತ ಬ್ಯಾಂಕ್ ಸಿಇಒ ಈಕೆಯ ಜೊತೆ ಕಳೆದ ಕೆಲ ಕ್ಷಣಗಳಿಗಾಗಿ ಕಳೆದುಕೊಂಡಿದ್ದು ಒಟ್ಟು 108 ಇನ್ಸ್ಟಾಲ್‌ಮೆಂಟ್‌ನಲ್ಲಿ 4 ಕೋಟಿ 39 ಲಕ್ಷ ರೂಪಾಯಿ. ಇಷ್ಟಾದರು ಈ ಧನದಾಹಿ ಹೆಣ್ಣಿನ ಆಸೆ ತೀರದೇ ಹೋದಾಗ ನಿಧಾನವಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಮಹಿಳೆಗೆ ಒಂದು ಲಕ್ಷ ಸದ್ಯಕ್ಕೆ ನೀಡುವುದಾಗಿ ಬ್ಯಾಂಕ್ ಸಿಇಒ ಮೂಲಕವೇ ಆಕೆಯನ್ನು ಕರೆಸಿಕೊಂಡ ಪೊಲೀಸರು ಥಾಣೆ ಮೂಲದ 45 ವರ್ಷದ ಮಹಿಳೆಯನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ. (ಎಜೇನ್ಸಿಸ್)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img