ಶನಿವಾರ, ನವೆಂಬರ್ 1, 2025

Janaspandhan News

HomeGeneral NewsRules ಉಲ್ಲಂಘನೆ ಮಾಡಿದ ವಿದ್ಯಾರ್ಥಿಗೆ ದಂಡ ವಿಧಿಸಿ, ತಾವೇ ನಿಯಮ ಮುರಿದ ಟ್ರಾಫಿಕ್ ಪೊಲೀಸ್ ;...
spot_img
spot_img
spot_img

Rules ಉಲ್ಲಂಘನೆ ಮಾಡಿದ ವಿದ್ಯಾರ್ಥಿಗೆ ದಂಡ ವಿಧಿಸಿ, ತಾವೇ ನಿಯಮ ಮುರಿದ ಟ್ರಾಫಿಕ್ ಪೊಲೀಸ್ ; ವಿಡಿಯೋ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಥಾಣೆ (ಮಹಾರಾಷ್ಟ್ರ) : ಸಂಚಾರ ನಿಯಮ (Rules) ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುವುದು ಪೊಲೀಸ್ ಇಲಾಖೆಯ ನಿತ್ಯದ ಕೆಲಸ. ಆದರೆ ಈ ಬಾರಿ ಅದೇ ಟ್ರಾಫಿಕ್ ಪೊಲೀಸರ ವರ್ತನೆ ಈಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಸಂಚಾರ ನಿಯಮ (Traffic Rules) ಉಲ್ಲಂಘಿಸಿದ್ದಕ್ಕಾಗಿ ವಿದ್ಯಾರ್ಥಿಗೆ ದಂಡ ವಿಧಿಸಿದ ಕೆಲವೇ ಗಂಟೆಗಳ ಬಳಿಕ, ಅದೇ ಪೊಲೀಸರು ನಿಯಮ ಉಲ್ಲಂಘಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Marriage : ಮಹಿಳೆಗೆ ಬೇರೆ ಗಂಡಸಿನೊಂದಿಗೆ ನಂಟು ಇದೆಯೇ? ಈ ನಡವಳಿಕೆಗಳಿಂದಲೇ ತಿಳಿದುಕೊಳ್ಳಬಹುದು.!

ಘಟನೆ ಥಾಣೆ ನಗರದಲ್ಲಿನ ವಾಗ್ಲೆ ಎಸ್ಟೇಟ್ ಪ್ರದೇಶದಲ್ಲಿ ನಡೆದಿದೆ. ವಿದ್ಯಾರ್ಥಿಯೊಬ್ಬನು ಟ್ರಾಫಿಕ್ ಪೊಲೀಸರ ಸಂಚಾರ ನಿಯಮ (Rules) ಉಲ್ಲಂಘನೆಯನ್ನು ಗಮನಿಸಿ ಪ್ರಶ್ನೆ ಮಾಡಿದ ವಿಡಿಯೋ ಇದೀಗ ವ್ಯಾಪಕವಾಗಿ ಹರಿದಾಡುತ್ತಿದೆ. ಯುವಕನ ಧೈರ್ಯಶಾಲಿ ನಡೆಗೆ ಹಲವರು ಪ್ರಶಂಸೆಯ ಸುರಿಮಳೆ ಸುರಿಸಿದ್ದಾರೆ.

ವಿದ್ಯಾರ್ಥಿಗೆ ದಂಡ ವಿಧಿಸಿದ ಪೊಲೀಸರೇ ನಿಯಮ ಉಲ್ಲಂಘನೆ :

ಘಟನೆಯ ಪ್ರಕಾರ, ವಿದ್ಯಾರ್ಥಿಯೊಬ್ಬನಿಗೆ ಹೆಲ್ಮೆಟ್ ಧರಿಸದೇ ಸ್ಕೂಟರ್ ಚಲಾಯಿಸಿದ್ದಕ್ಕಾಗಿ ಟ್ರಾಫಿಕ್ ಪೊಲೀಸರೊಬ್ಬರು ರೂ. 2000 ದಂಡ ವಿಧಿಸಿದ್ದರು. ಕೆಲವೇ ಗಂಟೆಗಳ ಬಳಿಕ, ಅದೇ ಪೊಲೀಸರು ಹೆಲ್ಮೆಟ್ ಧರಿಸದೇ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿರುವುದು ಯುವಕನ ಕಣ್ಣಿಗೆ ಬಿತ್ತು. ಯುವಕ ತಕ್ಷಣವೇ ಅವರನ್ನು ಹಿಂಬಾಲಿಸಿ ವಾಹನವನ್ನು ತಡೆದು ಪ್ರಶ್ನಿಸಿದನು.

ಅಪ್ಪಿತಪ್ಪಿಯೂ ಈ ಜನರು Papaya ತಿನ್ನಲೇ ಬೇಡಿ ; ತಿಂದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುಟ್ಟಿ.!

ವಿಡಿಯೋ ದೃಶ್ಯದಲ್ಲಿ ವಿದ್ಯಾರ್ಥಿ, “ನೀವು ನಂಬರ್ ಪ್ಲೇಟ್ ಸರಿಯಾಗಿ ಇರಿಸಿಲ್ಲ, ಹೆಲ್ಮೆಟ್ ಧರಿಸಿಲ್ಲ. ಹಾಗಾದರೆ ನನಗೆ ಹೇಗೆ ದಂಡ ವಿಧಿಸಿದ್ದೀರಿ?” ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಟ್ರಾಫಿಕ್ ಪೊಲೀಸರು, “ಈ ವಾಹನ ನಮ್ಮದೇ ಅಲ್ಲ, ಮುಟ್ಟುಗೋಲು ಹಾಕಿಕೊಳ್ಳಲು ತರಲಾಗಿದೆ” ಎಂದು ಹೇಳುವ ದೃಶ್ಯ ಕಂಡುಬರುತ್ತದೆ.

ಆದರೆ ಬೈಕ್‌ನಲ್ಲಿ ಪೊಲೀಸ್‌ ಎಂಬ ಸ್ಟಿಕ್ಕರ್‌ ಇರುವುದನ್ನು ತೋರಿಸಿ ಬೈಕ್‌ ನಿಮ್ಮದೇ ಎಂದು ವಾದಿಸಿದ ಯುವಕರು ಪೊಲೀಸರಿಗೆ ನೀವೇ ನಿಯಮ ಪಾಲಿಸದ ಮೇಲೆ ನಮ್ಮ ಮೇಲೆ ದಂಡ ವಿಧಿಸುವ ಹಕ್ಕು ನಿಮಗೆ ಎಲ್ಲಿಂದ ಬರಬೇಕು ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ವೀಡಿಯೋ ವೈರಲ್ ಆಗಿ ಚರ್ಚೆಗೆ ಗ್ರಾಸ :

ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೇಗದಲ್ಲಿ ಹರಿದಾಡಿತು. ವಿಡಿಯೋದಲ್ಲಿ ಇಬ್ಬರ ನಡುವೆ ನಡೆದ ವಾಕ್ಸಮರವನ್ನು ಪಾದಚಾರಿಗಳು ಹಾಗೂ ಇತರ ವಾಹನ ಚಾಲಕರು ರೆಕಾರ್ಡ್ ಮಾಡಿದರು. ಅನೇಕರು ಯುವಕನ ಧೈರ್ಯಕ್ಕೆ ಶ್ಲಾಘನೆ ಸಲ್ಲಿಸಿದ್ದು, “ಎಲ್ಲರಿಗೂ ನಿಯಮ (Rules) ಒಂದೇ ಆಗಿರಬೇಕು” ಎಂಬ ಕಾಮೆಂಟ್‌ಗಳು ಹರಿದುಬಂದಿವೆ.

RRB : ರೈಲ್ವೆ ಇಲಾಖೆಯಿಂದ ಗುಡ್‌ ನ್ಯೂಸ್‌ ; 5,810 ಹುದ್ದೆಗಳ ಭರ್ತಿ ಅರ್ಜಿ ಆಹ್ವಾನ.!
ಪೊಲೀಸರ ಸ್ಪಷ್ಟನೆ : ಇಬ್ಬರ ಮೇಲೂ ಕ್ರಮ :

ಘಟನೆಯ ಕುರಿತು ಪ್ರತಿಕ್ರಿಯಿಸಿದ ಥಾಣೆ ಪೊಲೀಸರು, “ವಿಡಿಯೋದಲ್ಲಿ ತೋರಿಸಲಾದ ಇಬ್ಬರ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೂ ನಿಯಮ (Rules) ಉಲ್ಲಂಘನೆಗಾಗಿ ರೂ. 2000 ದಂಡ ವಿಧಿಸಲಾಗಿದೆ,” ಎಂದು ತಿಳಿಸಿದ್ದಾರೆ.

ಅವರು ಮುಂದೆ, “ಈ ವಿಡಿಯೋ ಸ್ವಲ್ಪ ಮಿಸ್‌ಲೀಡಿಂಗ್ ಆಗಿದೆ. ವಿದ್ಯಾರ್ಥಿಯು ಸಹ ನಿಯಮ (Rules) ಉಲ್ಲಂಘನೆ ಮಾಡಿದ ಕಾರಣ, ಇಬ್ಬರ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಂಚಾರ ನಿಯಮ ಪಾಲನೆಗೆ ಸಹಕರಿಸಬೇಕು,” ಎಂದು ಟ್ವಿಟ್ಟರ್ (X) ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

Teacher : ಶಿಕ್ಷಕಿಯ ಮೇಲೆ ಅಮಾನವೀಯ ಕೃತ್ಯ : ಆರೋಪಿ ಪೊಲೀಸ್‌ ವಶಕ್ಕೆ.!
ನೆಟ್ಟಿಗರ ಪ್ರತಿಕ್ರಿಯೆ :

ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಅನೇಕರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. “ಪೊಲೀಸರಿಗೂ ರೂಲ್ಸ್ ಒಂದೇ ಆಗಿರಬೇಕು” ಎಂಬ ಅಭಿಪ್ರಾಯ ಹಂಚಿಕೊಂಡಿರುವರು. ಮತ್ತೊಬ್ಬರು “ಮೈಮುರಿದು ದುಡಿದ ವಿದ್ಯಾರ್ಥಿಯ ಧೈರ್ಯ ಪ್ರಶಂಸನೀಯ” ಎಂದು ಹೇಳಿದ್ದಾರೆ.

 ‌ಟ್ರಾಫಿಕ್‌ ನಿಯಮ (Rules) ಮುರಿದ ಪೊಲೀಸ್ ವಿಡಿಯೋ :

 

View this post on Instagram

 

A post shared by Mews.in (@mewsinsta)


ರೆಸ್ಟೋರೆಂಟ್‌ನಲ್ಲಿ ಅಣ್ಣ-ತಂಗಿಯ ಮೇಲೆ Police ದರ್ಪ ; ಸಿಸಿಟಿವಿ ವಿಡಿಯೋ ವೈರಲ್.!

Police

ಜನಸ್ಪಂದನ ನ್ಯೂಸ್‌, ಪಟನಾ : ಬಿಹಾರ ರಾಜ್ಯದ ಕತಿಹಾರ್ ಜಿಲ್ಲೆಯಲ್ಲಿ ನಡೆದ ಪೊಲೀಸ್‌ (Police) ದರ್ಪದ ಘಟನೆತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬರ್ಸೋಯ್ ಪೊಲೀಸ್ (Police) ಠಾಣೆಯ ಇನ್‌ಚಾರ್ಜ್ ಅಧಿಕಾರಿಯೋರ್ವ ರೆಸ್ಟೋರೆಂಟ್‌ನಲ್ಲಿ ಸಹೋದರ ಮತ್ತು ಸಹೋದರಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಬಹಿರಂಗವಾದ ಹಿನ್ನಲೆಯಲ್ಲಿ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಘಟನೆ ಅಕ್ಟೋಬರ್ 24 ರಂದು ಕತಿಹಾರ್ ಜಿಲ್ಲೆಯ ಬರ್ಸೋಯ್ ಪ್ರದೇಶದಲ್ಲಿರುವ ಬಿಆರ್–11 ರೆಸ್ಟೋರೆಂಟ್‌ನಲ್ಲಿ ನಡೆದಿದೆ.

ಘಟನೆಯ ವಿಡಿಯೋ ವೈರಲ್ ಆದ ಬಳಿಕ, ಕತಿಹಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಶಿಖರ್ ಚೌಧರಿ ಅವರು ಬರ್ಸೋಯ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ರಾಮಚಂದ್ರ ಮಂಡಲ್ ಅವರನ್ನು ಅಮಾನತು ಮಾಡುವ ಆದೇಶ ಹೊರಡಿಸಿದರು.

ಪೊಲೀಸ್ (Police) ಇಲಾಖೆಯ ಪ್ರಕಾರ, SHO ರಾಮಚಂದ್ರ ಮಂಡಲ್ ಅವರು ಚುನಾವಣಾ ಪರಿಶೀಲನೆಗಾಗಿ ಸ್ಥಳೀಯ ರೆಸ್ಟೋರೆಂಟ್‌ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅವರು ರೆಸ್ಟೋರೆಂಟ್‌ಗೆ ಇತರ ಪೊಲೀಸ್ ಸಿಬ್ಬಂದಿಗಳೊಂದಿಗೆ ಪ್ರವೇಶಿಸಿ ಅಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿಯ ಬಳಿ ತೆರಳಿ ಪ್ರಶ್ನೆ ಮಾಡಿದ್ದಾರೆ.

ಯುವಕ ತನ್ನ ಜೊತೆ ಕುಳಿತಿದ್ದವರು ತಂಗಿಯೇ ಎಂದು ಸ್ಪಷ್ಟಪಡಿಸಿದರೂ, SHO ಆ ವಿವರಣೆಯನ್ನು ನಂಬದೇ ಅತಿಯಾದ ಶಬ್ದದಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಸಮಯದಲ್ಲಿ ರೆಸ್ಟೋರೆಂಟ್‌ನಲ್ಲಿ ಇದ್ದ ಗ್ರಾಹಕರು ಅಸಹಜ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಬಳಿಕ ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾನೆ ಎಂದು ಸಾಕ್ಷಿಗಳು ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಸ್ಥಳೀಯ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ಕತಿಹಾರ್ ಪೊಲೀಸ್ (Police) ಇಲಾಖೆ ಪ್ರಕಟಿಸಿದ ಅಧಿಕೃತ ಪ್ರಕಟಣೆಯಲ್ಲಿ, “ತನಿಖೆಯ ವೇಳೆ SHO ರಾಮಚಂದ್ರ ಮಂಡಲ್ ಅವರು ಕರ್ತವ್ಯ ನಿರ್ಲಕ್ಷ್ಯ ಮತ್ತು ಅಸಭ್ಯ ನಡವಳಿಕೆಗೆ ಒಳಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ. ಇಂತಹ ವರ್ತನೆ ಪೊಲೀಸರ ಶಿಸ್ತು ಮತ್ತು ಗೌರವಕ್ಕೆ ಧಕ್ಕೆ ತರುತ್ತದೆ” ಎಂದು ತಿಳಿಸಲಾಗಿದೆ.

ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಕತಿಹಾರ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಪ್ರಧಾನ ಕಚೇರಿ) ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಬಳಿಕ ಪೂರ್ಣ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸ್ (Police) ಇಲಾಖೆ ಎಲ್ಲ ಅಧಿಕಾರಿಗಳಿಗೆ ಕರ್ತವ್ಯ ಸಮಯದಲ್ಲಿ ಶಿಸ್ತು, ನೈತಿಕತೆ ಮತ್ತು ಸಾರ್ವಜನಿಕರೊಂದಿಗೆ ಗೌರವಯುತ ನಡವಳಿಕೆಯನ್ನು ಪಾಲಿಸುವಂತೆ ಸೂಚಿಸಿದೆ.

ಪೊಲೀಸ್‌ (Police) ದರ್ಪದ ವಿಡಿಯೋ :

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments