ಸೋಮವಾರ, ಫೆಬ್ರವರಿ 2, 2026

Janaspandhan News

HomeCrime Newsಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!
spot_img
spot_img

ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!

ಜನಸ್ಪಂದನ ನ್ಯೂಸ್‌, ಗದಗ : ಗದಗ ಜಿಲ್ಲೆಯ ಸೊರಟೂರ ಗ್ರಾಮದ ಬಳಿ ಪೊಲೀಸ್ ಜೀಪ್ ಪಲ್ಟಿಯಾದ ಪರಿಣಾಮ ಓರ್ವ ಎಎಸ್‌ಐ ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಬೇಟಗೇರಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ASI ಕಾಸಿಂ ಸಾಬ್ ಹರಿವಾಣ ಅವರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಮಾಹಿತಿ ಪ್ರಕಾರ, ಲಕ್ಷ್ಮೇಶ್ವರದಿಂದ ಕರ್ತವ್ಯ ಮುಗಿಸಿಕೊಂಡು ಗದಗ ಕಡೆಗೆ ಜೀಪ್ ಬರುತ್ತಿದ್ದ ವೇಳೆ, ಕತ್ತೆಕಿರುಬ ಒಂದು ಏಕಾಏಕಿ ರಸ್ತೆ ದಾಟಿದ ಪರಿಣಾಮ ಪೊಲೀಸ್ ಜೀಪ್ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಂದಕಕ್ಕೆ ಉರುಳಿದೆ.

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!

ಕತ್ತೆಕಿರುಬ ಸ್ಥಳದಲ್ಲೇ ಸತ್ತು ಹೋಗಿದ್ದು, ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ASI ಕಾಸಿಂ ಸಾಬ್ ಅವರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಬೆಳಗಿನ ಜಾವವೇ ASI ಕೊನೆಯುಸಿರೆಳೆದಿದ್ದಾರೆ.

ಇದೇ ವೇಳೆ ASI ಜೊತೆಗಿದ್ದ ಇನ್ನಿಬ್ಬರು ಪೊಲೀಸರಿಗೆ ಗಾಯಗಳಾಗಿದ್ದು, ವೈರ್‌ಲೆಸ್ ವಿಭಾಗದ ಇನ್ಸ್‌ಪೆಕ್ಟರ್ ಉಮೇಶಗೌಡ ಪಾಟೀಲ್ ಮತ್ತು ಜೀಪ್ ಚಾಲಕ ಓಂ ನಾಥ್ ಅವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

15 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ : Swamiji ವಿರುದ್ಧ FIR ದಾಖಲು.!

ಕಪ್ಪತ್ತಗುಡ್ಡ ಪ್ರದೇಶವು ವನ್ಯಜೀವಿಗಳ ತಾಣವಾಗಿದ್ದರೂ, ಸರಿಯಾದ ಸಂರಕ್ಷಣೆ ಕೊರತೆಯಿಂದ ಕಾಡು ಪ್ರಾಣಿಗಳು ಊರುಗಳಿಗೆ ಬಂದು ಅಪಾಯಕ್ಕೆ ಒಳಗಾಗುತ್ತಿರುವುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.


Meal : ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಕುಳಿತ ಕ್ಷಣವೇ ಹೃದಯಾಘಾತ ; ವ್ಯಕ್ತಿ ಸಾವನ್ನಪ್ಪಿದ ದೃಶ್ಯ ವೈರಲ್.!

Meal

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಸಾಕ್ಷಿಯಾಗುವಂತೆ, ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ರೆಸ್ಟೋರೆಂಟ್‌ ಒಂದರಲ್ಲಿ ಊಟಕ್ಕೆ (Meal) ಕುಳಿತ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ನಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಆಘಾತಕ್ಕೊಳಗಾಗಿದ್ದಾರೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ರೆಸ್ಟೋರೆಂಟ್‌ನಲ್ಲಿ ಜನರು ಸಾಮಾನ್ಯವಾಗಿ ಊಟ (Meal) ಮಾಡುತ್ತಿದ್ದರು. ಅಷ್ಟರಲ್ಲೇ, ಕನ್ನಡಕ ಧರಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಕುರ್ಚಿಯಲ್ಲಿ ಕುಳಿತು ಫೋನ್ ನೋಡುತ್ತಾ ಇದ್ದರು.

Heart Attack ಬರುವ ಮುನ್ನ ಕಾಣಿಸುವ 7 ಪ್ರಮುಖ ಎಚ್ಚರಿಕೆ ಲಕ್ಷಣಗಳು.!

ಕೆಲವೇ ಕ್ಷಣಗಳಲ್ಲಿ ಅವರು ತೀವ್ರ ಅಸ್ವಸ್ಥತೆಯಿಂದ ಎದೆ ಹಿಡಿದುಊಟ (Meal) ದ ಮೇಜಿನ ಮೇಲೆ ಬಿದ್ದು ಬಿಟ್ಟಿದ್ದಾರೆ. ಕುಟುಂಬ ಸದಸ್ಯರು ಹಾಗೂ ಹತ್ತಿರ ಕುಳಿತವರು ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳದೆ ಪ್ರಜ್ಞಾಹೀನಗೊಂಡಿದ್ದರು. ಬಳಿಕ ಅವರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಹಲವರು ಈ ರೀತಿಯ ಹಠಾತ್ ಸಾವುಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

LIC : 5 ವರ್ಷ ಹೂಡಿದ್ರೆ ಸಾಕು, ಜೀವನಪರ್ಯಂತ ತಿಂಗಳಿಗೆ 15 ಸಾವಿರ ರೂ. ಲಭ್ಯ.

ಕೆಲವು ಬಳಕೆದಾರರು, “ಇತ್ತೀಚೆಗೆ ಹೃದಯಾಘಾತದಿಂದ ಹಠಾತ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಿಜವಾದ ಕಾರಣ ಪತ್ತೆಹಚ್ಚಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವೈದ್ಯರ ಪ್ರಕಾರ, ಅನಿಯಮಿತ ಜೀವನಶೈಲಿ, ಒತ್ತಡ, ಒಳ್ಳೆಯ ಊಟ (Meal)ದ ಬದಲಾಗಿ ಅತಿಯಾದ ಫಾಸ್ಟ್ ಫುಡ್ ಸೇವನೆ ಹಾಗೂ ವ್ಯಾಯಾಮದ ಕೊರತೆ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಬಹುದು. ತೀವ್ರ ಎದೆನೋವು, ಉಸಿರಾಟದ ತೊಂದರೆ, ಬೆವರು ಇವು ಹೃದಯಾಘಾತದ ಆರಂಭಿಕ ಎಚ್ಚರಿಕೆ ಲಕ್ಷಣಗಳಾಗಿದ್ದು, ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಜೀವ ಉಳಿಸಲು ಸಹಾಯಕ.

ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!
ಊಟಕ್ಕೆ (Meal) ಕುಳಿತ ವ್ಯಕ್ತಿಯ ಹೃದಯಾಘಾತದ ವಿಡಿಯೋ :

https://twitter.com/i/status/1969954884234662335

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments