Sunday, September 8, 2024
spot_img
spot_img
spot_img
spot_img
spot_img
spot_img
spot_img

ಮಹಿಳೆ ಜೊತೆ Police ಕಾನ್ಸ್​ಟೇಬಲ್ ಆ*ತ್ಮಹ*ತ್ಯೆಗೆ ಶರಣು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಹುಬ್ಬಳ್ಳಿ : ಪೊಲೀಸ್ ಕಾನ್ಸ್​​ಟೇಬಲ್ ಒಬ್ಬರು ಮಹಿಳೆಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಪೊಲೀಸ್ ಕಾನ್ಸ್​​ಟೇಬಲ್ ಧಾರವಾಡದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಓರ್ವ ಮಹಿಳೆಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಮನಗಟ್ಟಿಯಲ್ಲಿ ನಡೆದಿದೆ.

SSLCಯಲ್ಲಿ 625ಕ್ಕೆ 623 ಅಂಕ : ಕೋರ್ಟ್‌ನಲ್ಲಿ ಕೆಲಸ ; ಓದಕ್ಕೂ ಬರೆಯಕ್ಕೂ ಬರೊಲ್ಲ.!

ನೇಣು ಬೀಗಿದು ಆತ್ಮಹತ್ಯೆಗೆ ಶರಣಾದವರನ್ನು ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್ ಮಹೇಶ ಹೆಸರೂರು ಮತ್ತು ಹುಬ್ಬಳ್ಳಿಯ ಗಾಮನಗಟ್ಟಿಯ ಮಹಿಳೆ ಎಂದು ತಿಳಿದು ಬಂದಿದೆ. ಇಲ್ಲಿ ಮಹೇಶ ಜೊತೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮಹೇಶ ಹೆಸರೂರು ಹಾಗೂ ಮಹಿಳೆ ಇಬ್ಬರೂ ಎರಡು ದಿನಗಳ ಹಿಂದೆನೇ ನೇಣಿಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Belagavi : ಬಾಯ್ಲರ್ ಸ್ಪೋಟ ; ಮಹಿಳೆ ಸಾವು, ಇಬ್ಬರು ಗಂಭೀರ.!

ವಿಷಯ ತಿಳಿದು ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಆಗಮಿಸಿ ಬಾಗಿಲು ಒಡೆದು ನೋಡಿದಾಗ ಮಹಿಳೆ ಮತ್ತು ಕಾನ್ಸ್​ಟೇಬಲ್​ ಮಹೇಶ್ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.

ಇವರಿಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಬಗ್ಗೆ ಮಾಹಿತಿ ಮತ್ತು ಆತ್ಮಹತ್ಯೆಗೆ ಕಾರಣ ಏನು ಎನ್ನುವುದನ್ನು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img