ಜನಸ್ಪಂದನ ನ್ಯೂಸ್, ಡೆಸ್ಕ್ : ನಮಗೆ ಸ್ಮಾರ್ಟ್ಫೋನ್ (Smartphone) ಹೇಗೆ ಅಗತ್ಯವಾಗಿದೆಯೋ, ಅದನ್ನು ಬಳಕೆ ಮಾಡುವ ವಿಧಾನ ಸಹ ಬಹಳ ಮುಖ್ಯವಾಗಿರುತ್ತದೆ.
ಆದ್ರೆ ಸ್ಮಾರ್ಟ್ಫೋನ್ ಬಳಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೀಗಿದ್ರೆ ಮಾತ್ರ ನಿಮ್ಮ ಸ್ಮಾರ್ಟ್ಫೋನ್ ಸುರಕ್ಷಿತವಾಗಿರುತ್ತದೆ (Safety).
ಇದನ್ನು ಓದಿ : Special news : ಮದುವೆಯಾಗದೇ ಏಕಾಂಗಿ ಜೀವನ ನಡೆಸಲು ಇಷ್ಟ ಪಡುತ್ತಾರೆ ಈ 4 ರಾಶಿಯವರು.!
ಕೆಲವರು ತಮ್ಮ ಸ್ಮಾರ್ಟ್ಫೋನ್ಗಳ ಚಾರ್ಜ್ ಬೇಗ ಖಾಲಿಯಾಗುತ್ತೆ, ಸ್ಪೀಡ್ ಚಾರ್ಜ್ ಆಗೋದೆ ಇಲ್ಲ ಎಂದು ಚಿಂತಿಸುತ್ತಾರೆ. ಅದಕ್ಕಾಗಿ ಈ ಟಿಪ್ಸ್ ಫಾಲೋ (Follow) ಮಾಡಿದ್ರೆ ನಿಮ್ಮ ಸ್ಮಾರ್ಟ್ಫೋನ್ ಸ್ಪೀಡ್ ಚಾರ್ಜ್ ಆಗುತ್ತೆ.
ಸ್ಮಾರ್ಟ್ಫೋನ್ ಚಾರ್ಜ್ನಲ್ಲಿಡುವಾಗ ಕೆಲವರು ಬ್ಲೂಟೂತ್ ಆನ್ (Bluetooth) ಮಾಡಿ ಇಡುತ್ತಾರೆ. ಯಾಕಂದ್ರೆ ಕೆಲವರು ಸ್ಮಾರ್ಟ್ವಾಚ್, ಇಯರ್ಬಡ್ಸ್ ಈ ರೀತಿಯ ಸಾಧನಗಳಿಗೆ ಕನೆಕ್ಟ್ (Connect) ಮಾಡಿರುತ್ತಾರೆ. ಅದಕ್ಕಾಗಿ ಬ್ಲೂಟೂತ್ ಆಫ್ ಮಾಡಲು ಮರೆತೇ ಬಿಡುತ್ತಾರೆ. ಆದ್ರೆ ಬ್ಲೂಟೂತ್ ಆಫ್ ಮಾಡಿ ಮೊಬೈಲ್ ಚಾರ್ಜ್ಗೆ ಇಟ್ರೆ ಚಾರ್ಜಿಂಗ್ ಸ್ಪೀಡ್ ಆಗುತ್ತದೆ.
ಇನ್ನು ಕೆಲವರು ಸ್ಮಾರ್ಟ್ಫೋನ್ ಚಾರ್ಜ್ನಲ್ಲಿಡುವಾಗ ಲ್ಯಾಪ್ಟಾಪ್ ಕೇಬಲ್, ಪವರ್ ಬ್ಯಾಂಕ್ ಬಳಸುತ್ತಾರೆ. ಆದರೆ ವಾಲ್ ಚಾರ್ಜರ್ ಇಟ್ಟು ಚಾರ್ಜ್ (Charge) ಮಾಡಿದ್ರೆ ಸ್ಪೀಡ್ ಆಗಿ ಚಾರ್ಜ್ ಆಗುತ್ತದೆ.
ಇನ್ನು ನೀವು ಸ್ಮಾರ್ಟ್ಫೋನ್ಗಳನ್ನು ಚಾರ್ಜ್ನಲ್ಲಿಡುವಾಗ ಮೊದಲು ನಿಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ (Switch off) ಮಾಡಿ. ಇದರಿಂದ ನಿಮ್ಮ ಸ್ಮಾರ್ಟ್ಫೋನ್ ವೇಗವಾಗಿ ಚಾರ್ಜ್ ಆಗುತ್ತೆ.
ಕೆಲವರಂತೂ ವೈರ್ಲೆಸ್ ಚಾರ್ಜರ್ ಅನ್ನು ಬಳಸುತ್ತಾರೆ. ಆದ್ರೆ ಇದು ವಾಲ್ ಚಾರ್ಜರ್ಗಿಂತ ಸ್ಪೀಡ್ ಆಗಿ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡೋದಿಲ್ಲ. ಆದ್ದರಿಂದ ವೈರ್ಲೆಸ್ ಚಾರ್ಜರ್ ಅನ್ನು ಬಳಸಬಾರದು.
ಮೊಬೈಲ್ ಚಾರ್ಜ್ನಲ್ಲಿಟ್ಟಾಗ ಚಾರ್ಜ್ ಸ್ಲೋ ಆಗ್ತಿದೆ ಅಂದ್ರೆ ಮೊಬೈಲ್ನಲ್ಲಿ ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡ್ಬಹುದು. ಇನ್ನು ಇದರಿಂದ ನಿಮ್ಮ ಸ್ಮಾರ್ಟ್ಫೋನ್ ಬಹಳ ಬೇಗನೆ ಚಾರ್ಜ್ ಸಹ ಆಗುತ್ತದೆ.
ಹೆಚ್ಚಿನವರು ಮೊಬೈಲ್ಗಳಲ್ಲಿ ಹಲವಾರು ಅಪ್ಲಿಕೇಶನ್ ಅನ್ನು ಬಳಸ್ತಾರೆ. ಆದ್ರೆ ಬಳಸಿದ ನಂತರ ಅದರಿಂದ ಡೈರೆಕ್ಟ್ ಆಗಿ ಬ್ಯಾಕ್ ಬರ್ತಾರೆ. ಆದ್ರೆ ಕ್ಲಿಯರ್ ಮಾಡಲು ಹೋಗಲ್ಲ.
ಇದರಿಂದ ಬ್ಯಾಗ್ರೌಂಡ್ನಲ್ಲಿ (Background) ಆ ಆ್ಯಪ್ಗಳು ರನ್ ಆಗುತ್ತಿರುತ್ತದೆ. ಇದರಿಂದ ಫೋನ್ ಚಾರ್ಜಿಂಗ್ ಸ್ಲೋ ಆಗಬಹುದು. ಆದ್ರೆ ಆ್ಯಪ್ಗಳನ್ನು ಬಳಸಿ ಕ್ಲಿಯರ್ ಮಾಡಿದ್ರೆ ಚಾರ್ಜಿಂಗ್ ಸ್ಪೀಡ್ ಆಗುತ್ತೆ.
ಇನ್ನೂ ಬ್ಯಾಟರಿ ಬೇಗನೆ ಖಾಲಿಯಾಗುತ್ತಿದ್ದರೆ, ಆಂಡ್ರಾಯ್ಡ್ ಫೋನ್ನಲ್ಲಿ ನೀವು ಸೆಟ್ಟಿಂಗ್ಗಳು > ಬ್ಯಾಟರಿ > ಬ್ಯಾಟರಿ ಬಳಕೆಗೆ ಹೋಗಬೇಕು. ನೀವು iOS ಬಳಕೆದಾರರಾಗಿದ್ದರೆ ಸೆಟ್ಟಿಂಗ್ಗಳು > ಬ್ಯಾಟರಿ ಆಯ್ಕೆಗೆ ಹೋಗಿ. ಬ್ಯಾಟರಿ ಸೇವರ್ ಮೋಡ್ ಅನ್ನು ಆನ್ ಮಾಡಿ.
ಇದು ನಿಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ಸೇವರ್ ಅಥವಾ ಪವರ್ ಸೇವಿಂಗ್ ಮೋಡ್ನೊಂದಿಗೆ ಬರುತ್ತದೆ. ಇದರಿಂದ ನಿಮ್ಮ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಬಹುದು.
ಇದನ್ನು ಓದಿ : ಅಂಜಲಿ ಅಂಬಿಗೇರ ಮರ್ಡರ್ ಕೇಸ್ ; DCP ಸಸ್ಪೆಂಡ್.!
ನಿಮ್ಮ ಫೋನ್ನ ಬ್ಯಾಟರಿ ಮಟ್ಟವನ್ನು 20-80% ನಡುವೆ ಇರಿಸುವುದರಿಂದ ಬ್ಯಾಟರಿ ಉತ್ತಮವಾಗಿರುತ್ತದೆ. ನಿಮ್ಮ ಬ್ಯಾಟರಿ 20% ತಲುಪಿದಾಗ ಚಾರ್ಜ್ಗೆ ಹಾಕಿ.
ಅಲ್ಲದೇ ಬ್ಯಾಟರಿಗೆ ಹಾನಿಯಾಗುವುದನ್ನು ತಪ್ಪಿಸಲು, ಅದನ್ನು 80% ವರೆಗೆ ಮಾತ್ರ ಚಾರ್ಜ್ ಮಾಡಿ. ರಾತ್ರಿ ಪೂರ್ತಿ ಮೊಬೈಲ್ ಅನ್ನು ಚಾರ್ಜ್ಗೆ ಹಾಕುವುದು ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯ.