ಜನಸ್ಪಂದನ ನ್ಯೂಸ್, ಡೆಸ್ಕ್ : ಬೊಲೆರೊ (bolero) ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿದ ಹಿನ್ನಲೆಯಲ್ಲಿ ರಸ್ತೆಯ ಬದಿ ನಿಂತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ 5 ಜನರು ಗಾಯಗೊಂಡಿದ್ದಾರೆ.
ರಾಜಸ್ಥಾನದ ಬಾರಾ ಜಿಲ್ಲೆಯ ಮೆಲ್ಖೇಡಿ ರಸ್ತೆ ಬಿಪಾಸಿನಲ್ಲಿ ಭಾನುವಾರ ಮೈಜುಂ ಎನಿಸುವ ರಸ್ತೆ ಅಪಘಾತವೊಂದು ನಡೆದಿದೆ. ನಿಯಂತ್ರಣ ತಪ್ಪಿದ ಬೊಲೆರೊ (bolero) ಕಾರು ರಸ್ತೆಬದಿ ನಿಂತಿದ್ದ ಜನರು, ಬೈಕ್ ಹಾಗೂ ಸೈಕಲ್ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ.
ಇದನ್ನು ಓದಿ : KFD : “ಕರ್ನಾಟಕ ಅರಣ್ಯ ಇಲಾಖೆಯಲ್ಲಿ 6,000 ಹೊಸ ಹುದ್ದೆಗಳ ನೇಮಕಾತಿಗೆ ಸಿದ್ಧತೆ”.!
ಈ ಬೊಲೆರೊ (bolero) ವಾಹನ ಅಪಘಾತದ ದೃಶ್ಯಾವಳಿಗಳು ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ನಂತರ ಕಾರು ಚಾಲಕ bolero ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕೊತ್ವಾಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯೋಗೇಶ್ ಚೌಹಾಣ್ ಅವರು, “ಬೊಲೆರೊ (bolero) ಕಾರು ಪೆಟ್ರೋಲ್ ಪಂಪ್ ಬಳಿ ನಿಯಂತ್ರಣ ತಪ್ಪಿ, ಸೈಕಲ್, ಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಕಾರು ಡಿವೈಡರ್ ಮೇಲೆ ಹಾರಿ ನಂತರ ರಸ್ತೆಯಿಂದ ಬದಿಗೆ ಜಾರಿದೆ. ಘಟನೆಯ ನಂತರ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದಾನೆ,” ಎಂದು ತಿಳಿಸಿದ್ದಾರೆ.
ಇದನ್ನು ಓದಿ : Itching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!
ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಲಿಖಿತ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಇನ್ನು ವಾಹನದ ಮಾಲೀಕರ ವಿವರಗಳನ್ನು ಆರ್‌ಟಿಓ ಅಧಿಕಾರಿಗಳಿಂದ ಪಡೆದು ಚಾಲಕನನ್ನು ಗುರುತಿಸಲು ಯತ್ನಿಸಲಾಗುತ್ತಿದೆ.
ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಾಲಕ ಮದ್ಯಪಾನ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆಯಾದಾಗ ಜನರು ಬೈಕ್ ರಿಪೇರಿ ಅಂಗಡಿಯ ಮುಂದೆ ನಿಂತಿದ್ದರು ಹಾಗೂ ಕೆಲವರು ದನಗಳ ಜೊತೆ ರಸ್ತೆಬದಿಯಲ್ಲಿ ಕುಳಿತಿದ್ದರು. ಬೊಲೆರೊ ಡಿಕ್ಕಿಯಿಂದ ಕ್ಷಣ ಕಾಲ ಆತಂಕ ವಾತಾವರಣ ನಿರ್ಮಾಣವಾಗಿತ್ತು.
ಇದನ್ನು ಓದಿ : Love-Case : ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ murder.!
ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಬೊಲೆರೊ ಚಾಲಕನ ಬಂಧನಕ್ಕಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಅಪಘಾತಕ್ಕಿಡಾದಬೊಲೆರೊ (bolero) ವಾಹನದ ವಿಡಿಯೋ :
राजस्थान के बारां मे दिल दहला देने वाला सड़क हादसा , तेज रफ़्तार बोलेरो ने मारी बाईक को टक्कर, साईकिल सवार व्यक्ति को भी गाडी से उड़ा दिया .#Nagarjuna #CoolieTrailer #INDvsEND #ABDevilliers #wclfinal pic.twitter.com/c9ocH9PgDL
— Nidhi Malik (@drnidhimalik) August 2, 2025
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
ಬೆಳಗಾವಿಯಲ್ಲಿ ಹೈಟೆಕ್ Black-magic : ಜಮೀನಿನಲ್ಲಿ ಸ್ಮಾರ್ಟ್‌ಫೋನ್ ಸಹಿತ ವಾಮಾಚಾರದ ವಸ್ತುಗಳು ಪತ್ತೆ!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದಲ್ಲಿ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಲಿಂಬೆಹಣ್ಣು, ಅರಿಶಿಣ, ಕುಂಕುಮ ಮುಂತಾದ ವಸ್ತುಗಳನ್ನು ಬಳಸುವ ಮೂಲಕ ವಾಮಾಚಾರ (Black-magic) ವನ್ನು ಮಾಡುವುದುಂಟು, ಆದರೆ ಇಲ್ಲಿ ಜಮೀನಿನಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯ ಮಾಡಿರುವುದು ಕಂಡುಬಂದಿದೆ.
ಗ್ರಾಮದ ರೈತ ದೇಸಾಯಿ ಅವರ ಜಮೀನಿನಲ್ಲಿ ಲಿಂಬೆಹಣ್ಣು, ಮೊಸರು, ತೆಂಗಿನಕಾಯಿ, ಎಲೆ-ಅಡಿಕೆ, ಕ್ಯಾರ್ ಬೀಜಗಳ ಜೊತೆಗೆ ಸ್ಮಾರ್ಟ್‌ಫೋನ್‌ನೂ ಇರಿಸಿ Black-magic ಮಾಡಲಾಗಿದೆ. ಈ ವಸ್ತುಗಳನ್ನು ಗಿಡಕ್ಕೆ ಗಂಟು ಕಟ್ಟಿ ಜಮೀನಿನಲ್ಲಿಟ್ಟು ಹೋಗಿರುವುದು ಗಮನ ಸೆಳೆದಿದ್ದು, ಘಟನೆ ಹೈಟೆಕ್ ವಾಮಾಚಾರದ ಅಂಗವಾಗಿದೆ ಎಂದು ಊಹಿಸಲಾಗುತ್ತಿದೆ.
ಇದನ್ನು ಓದಿ : Girlfriend ಜೊತೆ ಪತಿಯನ್ನು ರೆಸ್ಟೋರೆಂಟ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ : ಮುಂದೆ ಏನಾಯಿತು.?
ಗ್ರಾಮಸ್ಥರು ಈ ಘಟನೆ ನೋಡಿ ಆತಂಕ ವ್ಯಕ್ತಪಡಿಸಿದ್ದು, ಸ್ಥಳೀಯ ರೈತ ಮುಖಂಡ ರಾಜು ಅವರಿಗೆ ಕರೆ ಮಾಡಿ ವಾಮಾಚಾರ (Black-magic) ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆಯೂ ಸಹ ಕೆಲವು ತಿಂಗಳಲ್ಲಿಯೂ ಈ ಜಮೀನಿನಲ್ಲಿ ಅನಾಮಿಕ ವಸ್ತುಗಳು ಕಂಡು ಬಂದಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದಿದೆ.
ಇದನ್ನು ಓದಿ : Rape ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಬೇಲ್ ಮೇಲೆ ಹೊರ ಬಂದ ಆರೋಪಿ.!
“ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ತಂತ್ರಜ್ಞಾನದ ಟಚ್ ನೀಡಿ ವಾಮಾಚಾರ (Black-magic) ಮಾಡಿರುವುದು ಒಂದು ರೀತಿಯ ಆಶ್ಚರ್ಯಕರವಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ ಸತ್ಯ ಬಹಿರಂಗಪಡಿಸಬೇಕಿದೆ” ಎಂದು ಗ್ರಾಮಸ್ಥರ ಅಭಿಪ್ರಾಯವಾಗಿದೆ.





