ಜನಸ್ಪಂದನ ನ್ಯೂಸ್, ಡೆಸ್ಕ್ : ಮುದ್ದಾದ ಸಂಸಾರ ಆರಂಭಿಸಬೇಕು ಎಂಬ ಆಸೆ ಹೊತ್ತು ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿಗಳು ತಮ್ಮ ಅಂತ್ಯ ಇಷ್ಟು ಭೀಕರವಾಗಿರುತ್ತೇ ಅಂತ ಅಂದುಕೊಂಡಿರದೇ ಇರಬಹುದು. ಆದರೆ ಮರ್ಯಾದ ಹತ್ಯೆ (honor-killing) ಅಥವಾ ಕುಟುಂಬದ ಗೌರವ ಎಂಬ ಹೆಸರಿನಲ್ಲಿ ಈ ನವ ಜೋಡಿಯ ಅಂತ್ಯ ಮಾತ್ರ ಭೀಕರವಾಗಿತ್ತು.
ಮದುವೆ ಬೇಡ ಎಂದವರನ್ನೆಲ್ಲ ದಿಕ್ಕರಿಸಿ, ಪ್ರೀತಿಸಿ ತಮ್ಮದೇ ಆದ ನಿಯಮಗಳ ಮೂಲಕ ಮದುವೆಯಾಗಿ ಸಂಸಾರ ಕಟ್ಟಿಕೊಳ್ಳಲು ಮುಂದಾಗಿದ್ದರು. ಆದರೆ ಮರ್ಯಾದ ಹತ್ಯೆ (honor-killing) ಎಂಬ ಹೆಸರಿನಲ್ಲಿ ಪ್ರಾಣ ಕಳೆದುಕೊಳ್ಳುವ ಅಂದಾಜೆ ಆ ಜೋಡಿಗೆ ಇರಲಿಲ್ಲ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ಹೌದು, ಪಾಕಿಸ್ತಾನದಲ್ಲೊಂದು ಇಂತಹ ಮರ್ಯಾದ ಹತ್ಯೆ (honor-killing) ಎಂಬ ಘಟನೆ ನಡೆದಿರುವುದು ಅಘಾತವನ್ನುಂಟು ಮಾಡಿದೆ. ಅವಮಾನ ಎಂಬ ಹೆಸರಲ್ಲಿ ಇತ್ತೀಚೆಗೆ ಮದುವೆಯಾಗಿದ್ದ ನವದಂಪತಿಗಳನ್ನು ಆಕೆಯ ಕುಟುಂಬಸ್ಥರು ಬಲೂಚಿಸ್ತಾನ್ ಪ್ರಾಂತ್ಯದ ದೇಘರಿ (Deghari, Balochistan Province) ಜಿಲ್ಲೆಯಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ.
ಮರ್ಯಾದ ಹತ್ಯೆ (honor-killing) ಎಂಬ ಹೆಸರಿನಲ್ಲಿ ನಡೆದ ಈ ಘಟನೆಯು ಈದ್-ಉಲ್-ಅಝ್ಹಾ ಹಬ್ಬದ ಮೂರು ದಿನಗಳ ಮೊದಲು ನಡೆದಿದೆ ಎನ್ನಲಾಗಿದ್ದು, ಹೀಗೆ ಮರ್ಯಾದ ಹತ್ಯೆ ಎಂಬ ಹೆಸರಿನಲ್ಲಿ ಹತ್ಯೆಗೊಳಗಾದ ನವಜೋಡಿಯನ್ನು ಬಾನೋ ಬಿಬಿ ಮತ್ತು ಅಹ್ಸಾನ್ ಉಲ್ಲಾ ಎಂದು ಗುರುತಿಸಲಾಗಿದೆ.
ಬಾನೋ ಬಿಬಿಯ ಕುಟುಂಬಕ್ಕೆ ಅಹ್ಸಾನ್ ಉಲ್ಲಾನನ್ನು ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ. ಹೀಗಾಗಿ ಆಕೆಯ ಮದುವೆಯನ್ನು ವಿರೋಧಿಸುತ್ತಲೇ ಬಂದಿದ್ದರು.ಆದರೆ, ಯಾರಿಗೂ ಹೆದರದ ಬಾನೋ ಬಿಬಿ, ಅಹ್ಸಾನ್ ಉಲ್ಲಾನನ್ನು ಮದುವೆಯಾಗೆ ಬಿಟ್ಟಿದ್ದಳು.
ಇದನ್ನು ಓದಿ : Health : 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ವರ್ಷಕ್ಕೊಮ್ಮೆ ಈ ಆರೋಗ್ಯ ತಪಾಸಣೆಗಳನ್ನು ಮಾಡಿಸಲೇಬೇಕು.!
ಬಾನೋ ಬಿಬಿ, ಅಹ್ಸಾನ್ ಉಲ್ಲಾನನ್ನು ಮದುವೆ ಪರಿಣಾಮವಾಗಿ ಸಿಟ್ಟಾಗಿದ್ದ ಯುವತಿಯ ಕುಟುಂಬವೂ ಆಕೆ (ಬಾನೋ ಬಿಬಿ) ಯನ್ನು ಮರ್ಯಾದ ಹತ್ಯೆ (honor-killing) ಹೆಸರಲ್ಲಿ ಗುಂಡೇಟಿನಿಂದ ಹತ್ಯೆ ಮಾಡಿ ಸಂಭ್ರಮಿಸಿರುವ ವಿಡಿಯೋ ಸದ್ಯ ಸದ್ದು ಮಾಡುತ್ತಿದೆ.
ಕುಟುಂಬದ ವಿರೋಧದ ನಡುವೆಯೂ ಜೀವನವನ್ನು ಕಟ್ಟಿಕೊಳ್ಳಲು ಯತ್ನಿಸಿದ ಬಾನೋ ಬಿಬಿ ಮತ್ತು ಅಹ್ಸಾನ್ ಉಲ್ಲಾ ಎಂಬ ನವದಂಪತಿಗಳನ್ನು, ಬಾನೋ ಬಿಬಿ ಕುಟುಂಬದವರು ಮರ್ಯಾದೆ ಹೆಸರಿನಲ್ಲಿ ಹತ್ಯೆ ಮಾಡಿರುವ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ಈ ಭಯಾನಕ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳಿಂದ ಖಂಡನೆ ವ್ಯಕ್ತವಾಗಿದೆ.
ಇದನ್ನು ಓದಿ : IBPS ನಲ್ಲಿ ಖಾಲಿ ಇರುವ 1,007 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಭೀಕರ ಹತ್ಯೆ (honor-killing) ನಡೆದದ್ದು ಹೇಗೆ.?
ವೈರಲ್ ವಿಡಿಯೋದಲ್ಲಿ ನವದಂಪತಿಗಳನ್ನು ವಾಹನಗಳಲ್ಲಿ ಮರುಭೂಮಿ ಪ್ರದೇಶಕ್ಕೆ ಕರೆತರಲಾಗಿದೆ. ಈ ವೇಳೆ ಬಾನೋ ಬಿಬಿ ತನ್ನ ಮದುವೆ ಕಾನೂನುಬದ್ಧವಾಗಿದೆ ಎಂದು ಕುಟುಂಬಸ್ಥರ ಎದುರು ಹೇಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಅವರು ಮಹಿಳೆಗೆ ಶಾಲು ಹೊದಿಸಿ, ಕೈಯಲ್ಲಿ ಕುರಾನ್ ಹಿಡಿಸಿ, ಗುಂಡು ಹಾರಿಸುತ್ತಾರೆ. ಆಕೆ ನೆಲಕ್ಕೆ ಕುಸಿದು ಬೀಳುತ್ತಿದ್ದಂತೆಯೇ ಆಕೆಯ ಪತಿಯನ್ನೂ ಗುಂಡಿಕ್ಕಿ ಕೊಲ್ಲುತ್ತಾರೆ.
ಸ್ಥಳೀಯ ಭಾಷೆ ಬ್ರಾಹ್ವಿಯಲ್ಲಿ ಬಾನೋ ಕೊನೆ ಕ್ಷಣದಲ್ಲಿ ಹೇಳಿದ್ದ ಮಾತು, “ನೀವು ನನ್ನ ಮೇಲೆ ಮಾತ್ರ ಗುಂಡು ಹಾರಿಸಲು ಅನುಮತಿ ಇದೆ, ಬೇರೆ ಏನು ಇಲ್ಲ” ಎಂದಿದ್ದಾರೆ. ಈ ವಿಡಿಯೋ ಅಂತ್ಯದಲ್ಲಿ ಇಬ್ಬರೂ ರಕ್ತಸಿಕ್ತವಾಗಿ ನೆಲದ ಮೇಲೆ ಬಿದ್ದಿರುವ ಭೀಕರ ದೃಶ್ಯವಿದೆ.
13 ಜನರ ಬಂಧನ :
ಈ ಮಧ್ಯ ಬಾನೋ ಬಿಬಿಯ ಸಹೋದರ ತನ್ನ ಅನುಮತಿಯಿಲ್ಲದೇ ಆಕೆ ಮದುವೆಯಾಗಿದ್ದಾಳೆ ಎಂದು ದೂರು ನೀಡಿದ್ದನು. ಪೊಲೀಸರು ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿ, ಬುಡಕಟ್ಟು ಮುಖಂಡ, ಆಕೆಯ ಸಹೋದರ ಸೇರಿದಂತೆ 13 ಜನರನ್ನು ಬಂಧಿಸಿದ್ದಾರೆ. ಕ್ವೆಟ್ಟಾದ ಹನ್ನಾ-ಉರಾಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ವಿಡಿಯೋ :
Pakistan: A horrifying video from KPK shows the honor killing by an Islamic mob for marrying by choice out of tribe , the killing was carried out by active support from Pakistan authorities
Please REPOST pic.twitter.com/3rVqb6aXi6
— Abdul Kitabi عبد (@KitabiAbdul) July 20, 2025
ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆಗಳ ಭಯಾನಕ ಅಂಕಿ :
ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ (HRCP) ಪ್ರಕಾರ, ಕೇವಲ 2024ರಲ್ಲಿಯೇ 405 ಮರ್ಯಾದಾ ಹತ್ಯೆಗಳ (honor-killing) ಪ್ರಕರಣಗಳು ದಾಖಲಾಗಿವೆ. ಈ ಸಂಖ್ಯೆ ಲಿಂಗಸಮತೆ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗುತ್ತಿರುವ ಗಂಭೀರ ಸವಾಲನ್ನು ತೋರಿಸುತ್ತದೆ.
Underage girl : ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿದ ಯುವಕ ; ಮುಂದೆನಾಯ್ತು.?
ಜನಸ್ಪಂದನ ನ್ಯೂಸ್, ಡೆಸ್ಕ್ : ಅಪ್ರಾಪ್ತ ಬಾಲಕಿ (Underage girl) ಯೊಬ್ಬಳಿಗೆ ಯುವಕನೊಬ್ಬ ಕತ್ತಿಗೆ ಚಾಕು ಹಿಡಿದು ಬೆದರಿಕೆ ಹಾಕುತ್ತಿರುವ ಭಯಾನಕ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಅದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಬಸಪ್ಪ ಪೇಠ ಕರಂಜೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯಿಂದ ಈ ಪ್ರದೇಶದ ಜನತೆ ಬೆಚ್ಚಿಬಿದ್ದುಿದ್ದಾರೆ. ಸದ್ಯ ಅದರ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನು ಓದಿ : Schoolgirl : ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟ ಶಾಲಾ ವಿದ್ಯಾರ್ಥಿನಿ.!
ಸಂಜೆ 4 ಗಂಟೆಯ ಸುಮಾರಿಗೆ, ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಬಾಲಕಿ (Underage girl) ಯನ್ನು ಈ ಯುವಕ ರಸ್ತೆಮಧ್ಯೆ ಅಡ್ಡಗಟ್ಟಿದ್ದಾನೆ. ವಿಡಿಯೋ ದೃಶ್ಯಗಳಲ್ಲಿ ಕಾಣಿಸುತ್ತಿರುವಂತೆ, ಆತ ಆಕೆಯ (Underage girl) ಕುತ್ತಿಗೆಗೆ ಚಾಕು ತೋರಿಸಿ ಬೆದರಿಕೆ ಹಾಕುತ್ತಿದ್ದು, ಸುತ್ತಮುತ್ತ ಜನರು ಆತಂಕದಿಂದ ಕೂಗುತ್ತಿದ್ದರೂ ಕೂಡ ಯುವಕ ಯಾರ ಮಾತಿಗೂ ಕಿವಿಗೊಡದೆ ಬಾಲಕಿ (Underage girl) ಗೆ ಬೆದರಿಕೆ ಮುಂದುವರೆಸಿದ್ದಾನೆ.
ಘಟನೆಯ ಸಂದರ್ಭದಲ್ಲಿಯೇ ಸ್ಥಳೀಯ ಯುವಕನೋರ್ವ ಧೈರ್ಯ ತೋರಿ, ಸಮೀಪದ ಗೋಡೆಯೊಂದರ ಮೇಲೇರಿ ಹಿಂದಿನಿಂದ ಬಂದು ಆರೋಪಿಯನ್ನು ಹಿಡಿದು ಆಗಬಹುದಾದ ದುರ್ಘಟನೆಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ.
ತಕ್ಷಣ ಸ್ಥಳದಲ್ಲಿದ್ದ ಜನರು ಆತನ ಕೈಯಿಂದ ಚಾಕು ಕಿತ್ತುಕೊಂಡು ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಗೆ ಯಾವುದೇ ದೈಹಿಕ ಗಾಯವಾಗದಿರುವುದು ಸಹ ಶ್ಲಾಘನೀಯ.
ಆರೋಪಿ ಹಾಗೂ ಬಾಲಕಿ (Underage girl) ಒಂದೇ ಪ್ರದೇಶದವರು :
ಪ್ರಾಥಮಿಕ ವರದಿಗಳ ಪ್ರಕಾರ, ಆರೋಪಿ ಹಾಗೂ ಬಾಲಕಿ ಒಂದೇ ಪ್ರದೇಶದವರಾಗಿದ್ದು, ಈ ಘಟನೆಯ ಹಿಂದೆ ಏನು ಕಾರಣ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇದನ್ನು ಓದಿ :SWR : ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಖಾಲಿ ಇರುವ 904 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಈ ಬಾಲಕಿ (Underage girl) ಯನ್ನು ಕಳೆದ ಕೆಲವು ದಿನಗಳಿಂದ ಬೆನ್ನಟ್ಟುವುದು, ಬೆದರಿಕೆ ಹಾಗೂ ಕಿರುಕುಳ ನೀಡುತ್ತಾ ಬಂದಿದ್ದಾನೆ ಎನ್ನಲಾಗುತ್ತಿದೆ. ಈ ನಡುವೆ ಆರೋಪಿಯೂ ಸಹ ಅಪ್ರಾಪ್ತ ಎಂದು ಹೇಳಲಾಗುತ್ತಿದೆ.
ವಿಡಿಯೋ :
महाराष्ट्र में सतारा में नाबालिग छात्रा को चाकू दिखाकर धमकाने का वीडियो वायरल, आरोपी भी नाबालिग#Maharashtra | #ViralVideo pic.twitter.com/YY9nVwiqFh
— NDTV India (@ndtvindia) July 21, 2025