ಜನಸ್ಪಂದನ ನ್ಯೂಸ್, ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ನಸುಕಿನ ವೇಳೆಯಲ್ಲಿ ಬಸ್ (Bus) ಅಪಘಾತಕ್ಕಿಡಾಗಿದೆ.
ಈ ದುರ್ಘಟನೆಯಲ್ಲಿ (Bus accident) ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, 18 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : brain tumor : ಯಾರಿಗೆ ಬರುವ ಸಾಧ್ಯತೆ? ಈ ಲಕ್ಷಣಗಳಿದ್ದರೆ ಎಚ್ಚರಿಕೆಯಾಗಿರಿ.!
ಅಪಘಾತಕ್ಕೆ ಒಳಗಾದ ವಾಹನ ಬೆಳಗಾವಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ (Bus) ಆಗಿದೆ.
ಬಸ್ (Bus) ಅಗಸೂರು ಬಳಿ ಇರುವ ಜಗದೀಶ ಡಾಬಾ ಎದುರುದಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿದ ಘಟನೆ ಸೋಮವಾರ ಬೆಳಗಿನ 3 ಗಂಟೆ ಸುಮಾರಿಗೆ ಸಂಭವಿಸಿದೆ.
ಅಪಘಾತ ಸಂಭವಿಸುವ ವೇಳೆಗೆ ಬಹುತೇಕ ಪ್ರಯಾಣಿಕರು ನಿದ್ರಿಸುತ್ತಿದ್ದರು. ಬಸ್ (Bus) ಉರುಳಿದ ಶಬ್ದದಿಂದ ಪ್ರಯಾಣಿಕರು ಬೆಚ್ಚಿಬಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯರು ಹಾಗೂ ಅಂಕೋಲಾ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಸ್ (Bus) ಮೇಲಕ್ಕೆತ್ತುವ ಸಂದರ್ಭದಲ್ಲಿ ಅದರೊಳಗೆ ಸಿಲುಕಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಯಿತು.
ಇದನ್ನು ಓದಿ : Schoolgirl : ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲಿ ಧರ್ಮದೇಟು ಕೊಟ್ಟ ಶಾಲಾ ವಿದ್ಯಾರ್ಥಿನಿ.!
ಗಾಯಾಳುಗಳನ್ನು ತಕ್ಷಣವೇ ಅಂಕೋಲಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. Bus ಅಪಘಾತದ ದೃಶ್ಯವನ್ನು ನೋಡಿದರೆ ಇನ್ನು ಹೆಚ್ಚಿನ ಪ್ರಾಣಾಪಾಯ ಸಂಭವಿಸಿರಬಹುದೆಂಬ ಭಾವನೆ ಬರುತ್ತಿದೆ. ಆದರೆ ಅದೃಷ್ಟವಶಾತ್ ಅಂತ ಘಟನೆ ಸಂಭವಿಸಿಲ್ಲ ಎನ್ನಲಾಗುತ್ತಿದೆ.
Bus ಅಪಘಾತದ ವಿಡಿಯೋ :
ಅಂಕೋಲಾ: ಬೆಳಗಾವಿಯಿಂದ ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ಪ್ರಯಾಣಿಕರನ್ನು ಕರೆದುಕೊಂಡು ಸಾಗುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕಿರು ಸೇತುವೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಘಟನೆ ತಾಲ್ಲೂಕಿನ ಅಗಸೂರಿನ ಸಮೀಪ ಸೋಮವಾರ ನಸುಕಿನ ಜಾವ ಸಂಭವಿಸಿದೆ.#ankola #busaccident pic.twitter.com/UL1Wf4KIY0
— Prajavani (@prajavani) July 21, 2025
brain tumor : ಯಾರಿಗೆ ಬರುವ ಸಾಧ್ಯತೆ? ಈ ಲಕ್ಷಣಗಳಿದ್ದರೆ ಎಚ್ಚರಿಕೆಯಾಗಿರಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಬ್ರೈನ್ ಟ್ಯೂಮರ್ (brain tumor) ಅಥವಾ ಮೆದುಳಿನ ಗೆಡ್ಡೆ ಎಂದು ಕರೆಯುವ ಈ ರೋಗ ಯಾರಿಗೆ ಬರುವ ಸಾಧ್ಯತೆ ಹೆಚ್ಚು.! ಒಂದು ವೇಳೆ ಈ ಲಕ್ಷಣಗಳಿದ್ದರೆ ಎಚ್ಚರಿಕೆಯಾಗಿರಿ, ಏಕೆಂದರೆ ಇದು ಬ್ರೈನ್ ಟ್ಯೂಮರ್ (brain tumor) ಆಗಿರಬಹುದು.
ವಿಶ್ವದಾದ್ಯಂತ ಆರೋಗ್ಯ ಸಮಸ್ಯೆಗಳ ಪೈಕಿ ಅತ್ಯಂತ ಗಂಭೀರ ಮತ್ತು ಜೀವಘಾತಕವಾದವುಗಳಲ್ಲಿ ಮೆದುಳಿನ ಗೆಡ್ಡೆ (brain tumor) ನ್ನು ಒಂದು ಎಂದು ಪರಿಗಣಿಸಲಾಗಿದೆ. ಮೆದುಳಿನ ಜೀವಕೋಶಗಳು ನಿಯಂತ್ರಣವಿಲ್ಲದಂತೆ ಬೆಳೆಯಲು ಪ್ರಾರಂಭವಾದಾಗ ಈ ರೋಗ ರೂಪುಗೊಳ್ಳುತ್ತದೆ. ತಕ್ಷಣ ಪತ್ತೆಯಾಗದಿದ್ದರೆ ಇದು ಜೀವಕ್ಕೆ ತುಂಬಾ ಅಪಾಯಕಾರಿ. ಆದುದ್ದರಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ಅತ್ಯಾವಶ್ಯಕ.
ಹೆಚ್ಚುತ್ತಿರುವ ನರ ರೋಗಗಳ ಪ್ರಮಾಣ :
ಇತ್ತೀಚಿನ ವರ್ಷಗಳಲ್ಲಿ ಬ್ರೈನ್ ಟ್ಯೂಮರ್, ಬ್ರೈನ್ ಸ್ಟ್ರೋಕ್, ಡಿಮೆಂಚಿಯಾ, ಆಲ್ಝೈಮರ್ (Brain tumor, brain stroke, dementia, Alzheimer’s) ನಂತಹ ಮುಂತಾದ ನರವೈಜ್ಞಾನಿಕ (Neurological) ಕಾಯಿಲೆಗಳ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಮೆದುಳು (brain) ನಮ್ಮ ದೇಹದ ಕಂಟ್ರೋಲ್ ಸೆಂಟರ್ (Control Center) ಆಗಿರುವುದರಿಂದ, ಇದಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡುವುದು ಖಂಡಿತಾ ತಪ್ಪು.
ಬ್ರೈನ್ ಟ್ಯೂಮರ್ (brain tumor) ಲಕ್ಷಣಗಳೆವು?
ಹೆಚ್ಚಾಗಿ ಕಂಡುಬರುವ ಪ್ರಮುಖ ಲಕ್ಷಣಗಳು ಇಂತಿವೆ :
- ನಿರಂತರ ತಲೆನೋವು.
- ತೀವ್ರವಾದ ಸ್ಮರಣಶಕ್ತಿ ನಷ್ಟ.
- ತಲೆಯ ಗಾತ್ರದಲ್ಲಿ ಅನಿಯಮಿತ ಬದಲಾವಣೆ.
- ಅಪಘಾತದಿಂದ ತಲೆಗೆ ಗಾಯ ಅಥವಾ ಗೊಂದಲ.
- ವಾಕ್ ತೊಂದರೆ, ದೃಷ್ಟಿದೋಷಗಳು.
ಈ ರೀತಿಯ ಲಕ್ಷಣಗಳು ಕಂಡುಬಂದಾಗ ವೈದ್ಯಕೀಯ ತಪಾಸಣೆ ಮತ್ತು ಸಕಾಲಿಕ ಚಿಕಿತ್ಸೆ ಅತ್ಯಗತ್ಯ.
ಯಾರಿಗೆ ಹೆಚ್ಚು ಬರಬಹುದು.?
-
ಆನುವಂಶಿಕತೆಯ ಪ್ರಭಾವ : ಕುಟುಂಬದಲ್ಲಿ ಯಾರಿಗಾದರೂ ಈ ಕಾಯಿಲೆ ಇದ್ದಿದ್ದರೆ, ಇತರ ಸದಸ್ಯರಿಗೂ ಇದರ ಅಪಾಯ ಹೆಚ್ಚಿರುತ್ತದೆ.
-
ವಿಕಿರಣ ಚಿಕಿತ್ಸೆಯ ಇತಿಹಾಸ : ದೀರ್ಘಕಾಲದವರೆಗೆ ರೇಡಿಯೇಶನ್ ಅಥವಾ ಕ್ಯಾನ್ಸರ್ ಚಿಕಿತ್ಸೆಗೆ ಒಳಪಟ್ಟವರು ಅಪಾಯಕ್ಕೆ ಗುರಿಯಾಗಬಹುದು.
-
ರಾಸಾಯನಿಕದ ಒಡಕು : ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸಮಾಡುವವರು, ಅದರಲ್ಲೂ ವಿಶೇಷವಾಗಿ ಕೀಟನಾಶಕ, ರಬ್ಬರ್, ತೈಲ ಉತ್ಪನ್ನಗಳ ಸಂಪರ್ಕದಲ್ಲಿರುವವರು ಈ ರೋಗದ ಅಪಾಯದ ವಲಯದಲ್ಲಿರುತ್ತಾರೆ.
-
ಅನಾರೋಗ್ಯಕರ ಜೀವನಶೈಲಿ : ಹೆಚ್ಚು ಕೊಬ್ಬಿರುವ ಆಹಾರ, ವ್ಯಾಯಾಮದ ಕೊರತೆ, ಧೂಮಪಾನ, ನಿಯಮಿತ ಆಹಾರಪದ್ಧತಿಯ ಕೊರತೆ.
-
ಆನುವಂಶಿಕ ಅಸ್ವಸ್ಥತೆಗಳು : ಲಿ-ಫ್ರಾಮಿನಿ ಸಿಂಡ್ರೋಮ್, ನ್ಯೂರೋಫೈಬ್ರೊಮಾಟೋಸಿಸ್, ಟ್ಯೂಬರ್ ಸ್ಕ್ಲೆರೋಸಿಸ್ (Li-Framini syndrome, neurofibromatosis, tuberous sclerosis) ಮುಂತಾದ ಜನನಪೂರ್ವ ಸ್ಥಿತಿಗಳು ಕೂಡ ಕಾರಣವಾಗಬಹುದು.
ವಯಸ್ಸು ಮತ್ತು ಲಿಂಗದ ಪ್ರಭಾವ :
ಸಂಶೋಧನೆಗಳ ಪ್ರಕಾರ, ಪುರುಷರಲ್ಲಿ ಮಹಿಳೆಯರಿಗಿಂತ ಈ ಕಾಯಿಲೆಯ ಸಂಭವನೀಯತೆ ಸ್ವಲ್ಪ ಹೆಚ್ಚಾಗಿದೆ. ಹೆಚ್ಚಾಗಿ 15 ರಿಂದ 39 ವರ್ಷದ ನಡುವೆ ಈ ರೋಗ (brain tumor) ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ವಯಸ್ಸು ಹೆಚ್ಚಾದಂತೆ ಅಪಾಯವೂ ಅಧಿಕವಾಗುತ್ತದೆ.
ರಕ್ಷಣೆ ಸಾಧ್ಯ :
ಆರೋಗ್ಯಕರ ಆಹಾರ ಸೇವನೆ, ನಿತ್ಯ ವ್ಯಾಯಾಮ, ಪರಿಸರದ ಮೇಲೆ ಎಚ್ಚರಿಕೆ ಮತ್ತು ಸಮಯಕ್ಕೆ ತಕ್ಕ ವೈದ್ಯಕೀಯ ತಪಾಸಣೆಗಳ ಮೂಲಕ ಮೆದುಳಿನ ಗೆಡ್ಡೆ (brain tumor) ಯ ಅಪಾಯವನ್ನು ತಡೆಯಬಹುದಾಗಿದೆ. ಕುಟುಂಬದ ಇತಿಹಾಸವಿದ್ದರೆ ನಿಯಮಿತವಾಗಿ ತಜ್ಞರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.






