Thursday, September 19, 2024
spot_img
spot_img
spot_img
spot_img
spot_img
spot_img
spot_img

ಹೋಟೆಲ್​ನ ಒಂದೇ ರೂಂನಲ್ಲಿ ಓರ್ವ ಯುವತಿ ಜೊತೆ 6 ಯುವಕರು ; ದಾಳಿ ಮಾಡಿದ ಪೊಲೀಸರಿಗೆ ಶಾಕ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹೋಟೆಲ್​ನ ಕೋಣೆಯೊಂದರಲ್ಲಿ ಆರು ಯುವಕರ ಜತೆ ಯುವತಿಯೊಬ್ಬಳು ಇಡೀ ರಾತ್ರಿ ಉಳಿದುಕೊಂಡ ಆಘಾತಕಾರಿ (shocking) ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ ಮಾಧವ್​ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಈ ಮಾಹಿತಿ ತಿಳಿದು ಹೋಟೆಲ್​ ಮೇಲೆ ದಾಳಿ ನಡೆಸಿದ ಪೊಲೀಸರು ಕೋಣೆಯೊಳಗಿನ ದೃಶ್ಯ ಕಂಡು ಒಂದು ಕ್ಷಣ ದಂಗಾಗಿದ್ದು, ಎಲ್ಲ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

Forecast : ಏಪ್ರಿಲ್ 8ರ ಬಳಿಕ ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ.!

ಝಾನ್ಸಿ ರಸ್ತೆಯಲ್ಲಿರುವ​ ಹೋಟೆಲ್​ವೊಂದರಲ್ಲಿ ಕೊಠಡಿಯಲ್ಲಿನ ಆರೋಪಿಗಳು ಕಾಲ್ ಸೆಂಟರ್ (call center) ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ (arrested).

ಕಾಲ್ ಸೆಂಟರ್ ಸ್ಥಾಪಿಸಿ ಮೈಕ್ರೋಸಾಫ್ಟ್ ಕಂಪನಿಯ ಏಜೆಂಟ್ ರಂತೆ ನಟಿಸಿ, ಕಂಪ್ಯೂಟರ್‌ನಲ್ಲಿ ವೈರಸ್ ಇದೆ ಎಂದು ಬಿಂಬಿಸಿ ವಂಚನೆ (fraud) ಮಾಡುತ್ತಿದ್ದರು ಎಂದು ವರದಿಯಾಗಿದೆ.

ಪೊಲೀಸರು ದಾಳಿ ನಡೆಸಿದ ವೇಳೆ ಕೋಣೆಯೊಳಗೆ 6 ಹುಡುಗರು ಮತ್ತು ಒಬ್ಬಳೇ ಹುಡುಗಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಹೆಡ್‌ಫೋನ್ ಧರಿಸಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ.

ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ASI.!

ಆರೋಪಿಗಳು ತಮ್ಮ ಹೆಸರುಗಳನ್ನು ವಿದೇಶಿ ಹೆಸರುಗಳಾಗಿ ಬದಲಿಸಿ (change) ಜನರನ್ನು ವಂಚಿಸುತ್ತಿದ್ದರು. ತಮ್ಮ ಹೆಸರನ್ನು ಮಿಸ್ಟರ್ ಪಾಲ್ (ಅಭಯ್ ರಾಜಾವತ್), ಮಾರ್ಟಿನ್ (ನಿತೇಶ್), ಜಾನ್ (ಸುರೇಶ್), ರಿಯಾನ್ (ದೀಪಕ್), ಸೈಬರ್ ಎಕ್ಸ್‌ಪರ್ಟ್ (ರಾಜ್), ಡೆವಿಲ್ (ಸುರೇಶ್) ಹಾಗೂ ನ್ಯಾನ್ಸಿ (ಶ್ವೇತಾ) ಮುಂತಾದ ನಕಲಿ ಹೆಸರುಗಳನ್ನು ಬಳಸಿ ಮಾತನಾಡುತ್ತಿದ್ದರು ಎಂದು ವರದಿ ತಿಳಿಸಿದೆ.

ಬಂಧಿತರ ವಿಚಾರಣೆ ವೇಳೆ 7 ದಿನಗಳ ಹಿಂದೆಯಷ್ಟೇ ಗ್ವಾಲಿಯರ್‌ಗೆ ಬಂದಿರುವುದು ಬೆಳಕಿಗೆ ಬಂದಿದೆ. ಈ ಆರೋಪಿಗಳು ಆ ದಿನದಿಂದಲೇ ಕೆಲಸ ಮಾಡುತ್ತಿದ್ದರು. ಸದ್ಯ ಹೋಟೆಲ್‌ನಿಂದ 8 ಲ್ಯಾಪ್‌ಟಾಪ್, ಮೌಸ್, 15 ಮೊಬೈಲ್ ಫೋನ್, ಫೈಬರ್ ಮೋಡೆಮ್-ಅಡಾಪ್ಟರ್, ಕಾಲಿಂಗ್ ಸ್ಕ್ರಿಪ್ಟ್ ಹಾಗೂ ಡೇಟಾ ಸೀಟ್ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img