Wednesday, February 5, 2025
HomeJobಶೀಘ್ರದಲ್ಲಿಯೇ 1200 PSI, 12000 ಪೋಲಿಸ್ ಸಿಬ್ಬಂದಿಗಳ ನೇಮಕ : ಗೃಹ ಸಚಿವ ಜಿ ಪರಮೇಶ್ವರ್.!
spot_img
spot_img
spot_img
spot_img

ಶೀಘ್ರದಲ್ಲಿಯೇ 1200 PSI, 12000 ಪೋಲಿಸ್ ಸಿಬ್ಬಂದಿಗಳ ನೇಮಕ : ಗೃಹ ಸಚಿವ ಜಿ ಪರಮೇಶ್ವರ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಬೆಂಗಳೂರು : ಕಲಬುರ್ಗಿಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್, ಮುಂದಿನ 6-7 ತಿಂಗಳಲ್ಲಿ 1,200 PSI ಹಾಗೂ 10 ರಿಂದ 12 ಸಾವಿರ ಪೋಲಿಸ್ ಸಿಬ್ಬಂದಿಗಳ (police Staff) ಭರ್ತಿ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂಬ ಹೇಳಿಕೆ ನೀಡಿದರು.

ಕರ್ನಾಟಕ ರಾಜ್ಯದಲ್ಲಿ ಸುಮಾರು 10 ರಿಂದ 12 ಸಾವಿರದಷ್ಟು ಪೋಲಿಸ್ ಸಿಬ್ಬಂದಿಗಳ ((police Staff) ) ಕೊರತೆ ಇದ್ದು, ಅದನ್ನು ಭರ್ತಿ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದು ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ (Home Minister) ಜಿ ಪರಮೇಶ್ವರ್ ಹೇಳಿಕೆ ನೀಡಿದರು.

ಇದೇ ವೇಳೆ ಮಾತನಾಡಿ ಪರಮೇಶ್ವರ್‌, ಹಿಂದಿನ ಬಿಜೆಪಿ ಸರ್ಕಾರದವರು ಕಾನೂನು ಸುವ್ಯವಸ್ಥೆ ಹಾಳಾಗಿದೆ (law and order was ruined) ಅಂತಾರೆ, ಅದಕ್ಕೆ ಒಂದು ಉದಾಹರಣೆ ಕೊಡಿ? ಸುಕಾ ಸುಮ್ಮನೆ ಆರೋಪಗಳನ್ನು ಮಾಡಬಾರದು. ಅವರ ಸರ್ಕಾರದ ಕಾಲಾವಧಿಲ್ಲಿ ಎಷ್ಟು ಆಗಿದೆ ಎಂಬುವುದರ ಬಗ್ಗೆ ದಾಖಲೆ ಇದೆ. ಅದನ್ನು ಸಮಯ ಬಂದಾಗ ನಾವು ಬಿಡುಗಡೆ (will release) ಮಾಡುತ್ತೇವೆ ಎಂದು ಅವರು ತಿಳಿಸಿದರು.

ಇನ್ನು ಮಂಗಳೂರು ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ (Kotekar Bank robbery case) ಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 48 ಗಂಟೆಯಲ್ಲಿ ಮಂಗಳೂರು ಕೋಟೆಕಾರ್ ಬ್ಯಾಂಕ್ ದರೋಡೆ ಕೇಸ್ ಬೇಧಿಸಿದ್ದೇವೆ. ಹಾಗೆಯೇ ಬೀದರ್ (Bidar) ಎಟಿಎಂ ದರೋಡೆ ಕೇಸ್ (Bidar ATM robbery case) ಕೂಡ ಕೊನೆಯ ಹಂತದಲ್ಲಿದೆ. ಆದಷ್ಟು ಬೇಗ ನಮ್ಮ ಪೊಲೀಸರು ಅವರನ್ನು ಕೂಡ ಅರೆಸ್ಟ್ ಮಾಡುತ್ತಾರೆ ಎಂದು Home Minister G Parameshwar ಹೇಳಿದ್ದಾರೆ.

ಹಿಂದಿನ ಸುದ್ದಿ : ವೇದಿಕೆ ಮೇಲೆಯೇ ಕುಸಿದು ಬಿದ್ದ ಪೊಲೀಸ್ ಅಧಿಕಾರಿ ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಜನಸಾಮಾನ್ಯರು ಪೊಲೀಸರನ್ನು ಬಾಯಿಗೆ ಬಂದಂತೆ ಬೈಯುವುದು (criticize) ಹೆಚ್ಚು. ಪೊಲೀಸರೆಂದರೆ ರಸ್ತೆ ಬದಿಗಳಲ್ಲಿ ಚಿಕ್ಕಪುಟ್ಟ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವವರಿಂದಲೂ 5-10 ರೂಪಾಯಿ ಚಂದಾ ವಸೂಲಿ ಮಾಡುವ ಅಥವಾ ಬೇಕಾದ  ಬೇಕಾಬಿಟ್ಟೆ ಅಂಗಡಿಗಳಿಗೆ ಹೋಗಿ ಪುಕ್ಕಟೆಯಾಗಿ ತಿನ್ನುವವರೆ (eat indiscriminately.) ಎಂದೆ ಅಂದುಕೊಳ್ಳುತ್ತಾರೆ.

ಯಾರೋ ಒಂದಿಬ್ಬರು ಇಂಥಾ ಕೆಟ್ಟ ಕೆಲಸ ಮಾಡಿದ್ದಕ್ಕೆ ಇಡೀ ಪೊಲೀಸ್ ಇಲಾಖೆ (entire police department) ಯನ್ನೇ ಕೆಟ್ಟ ದೃಷ್ಟಿಯಿಂದ ನೋಡುವ ಒಂದು ದೊಡ್ಡ ವರ್ಗವೇ ಇದೆ. ಆದರೆ ಅದೇ ಪೊಲೀಸರು ಅನೇಕ ಸಂದರ್ಭಗಳಲ್ಲಿ ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು (their lives) ಹೋರಾಡುವುದನ್ನು ಕೂಡ ಯಾರೂ ಮರೆಯಬಾರದು. ಮತ್ತೋಬ್ಬರಿಗಾಗಿ ತಮ್ಮ ಪ್ರಾಣ ಕೊಡುವುದು ಅಷ್ಟು ಸುಲಭ ಮಾತಲ್ಲ ಅಂಥ ಎಲ್ಲರೂ ತಿಳಿಯಲೇ ಬೇಕು.

ಇದನ್ನು ಓದಿ : ರೂ.500 ಕೊಟ್ಟ ಯೂಟ್ಯೂಬರ್ ; ‘ನಾನು ವ್ಯಾಪಾರಿ, ಭಿಕ್ಷುಕನಲ್ಲ’ ಎಂದ ಹಪ್ಪಳ ಮಾರುವ ಹುಡುಗ.!

ಯಾರೋ ಬಿದಿಯಲ್ಲಿ ಜಗಳವಾಡುತ್ತಿದ್ದರೆ (fighting on street) ಅಥವಾ ಅಪಘಾತ (Accident) ದಿಂದ ನರಳುತ್ತಿದಾಗಲೋ ಅಥವಾ ಯಾವುದೇ ಒಂದು ಅಹಿತಕರ ಘಟನೆ (unpleasant incident) ನಡೆದಾಗ ಅದನ್ನು ನೋಡಿ ನೋಡಿಯೋ ನೋಡದ ರೀತಿಯಲ್ಲಿ ಸುಮ್ಮನೇ ಮತ್ತೋಬ್ಬರ ಉಸಾಬರಿ ನಮಗೆಕೈಯಾ ಅಂಥ ಆ ಕಡೆ ನೋಡದೆ ಹೊರಟು ಹೋಗುತ್ತೇವೆ. ಆದರೆ ಪೊಲೀಸರು ಹಾಗಲ್ಲ.

ಎಷ್ಟೋ ಸಂದರ್ಭಗಳಲ್ಲಿ ಪೊಲೀಸರು ಅನ್ನ – ನೀರು (without food or water) ಏನೂ ಇರದೆ ಇರುವ ಸ್ಥಿತಿಯೂ ಬರುತ್ತದೆ. ಎಷ್ಟೇ ಅನಾರೋಗ್ಯವಿದ್ದರೂ, ಅದನ್ನು ಲೆಕ್ಕಿಸದೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ, ಕಾರ್ಯಕ್ರಮ ಮುಗಿಯುವವರೆಗೂ ನಿಂತುಕೊಂಡೇ ಇರುವಂತ ಪರಿಸ್ಥಿತಿಯೂ Police officer ಗಳಿಗೆ ಬರುವುದು ಇದೆ.

ಇದನ್ನು ಓದಿ : Government Job ಸಿಗುತ್ತಿದಂತೆಯೇ ಪತ್ನಿ ಎಸ್ಕೇಪ್ ; ಪತಿಯ ಈ ಕಾರ್ಯಕ್ಕೆ ಕೆಲಸ ಕಳೆದುಕೊಂಡ ಪತ್ನಿ.!

ಇದೀಗ ಅಂಥದ್ದೇ ಒಂದು hocking video viral ಆಗಿದೆ. ನಿನ್ನೆ (ದಿ.26) ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇರಳದ ರಾಜ್ಯಪಾಲರು (Governor) ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಥಾಮ್ಸನ್ ಜೋಸ್ (Thomson Jose) ಕುಸಿದು ಬಿದ್ದಿದ್ದಾರೆ. ಇವರು ನಿಂತಿರುವ ಪರಿ ನೋಡಿದರೆ ತೀರಾ ಬಳಲಿರುವಂತೆ ಕಾಣಿಸುತ್ತಿದೆ.

ರಾಜ್ಯಪಾಲರು ತಿರುವನಂತಪುರಂ ಸೆಂಟ್ರಲ್ ಕ್ರೀಡಾಂಗಣ (Thiruvananthapuram Central Stadium) ದಲ್ಲಿ ಗಣರಾಜ್ಯೋತ್ಸವ ಪರೇಡ್ ಉದ್ದೇಶಿಸಿ ಮಾತನಾಡುತ್ತಿರುವಾಗಲೇ ಥಾಮ್ಸನ್ ಜೋಸ್ ತೀರಾ ಬಳಲಿ, ನಿಂತುಕೊಳ್ಳಲು ಸಾಧ್ಯವಾಗದೇ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಅಲ್ಲಿರುವ ಇತರರು ಕೂಡಲೇ ಅವರನ್ನು ಎತ್ತಿಕೊಂಡು ಹೋಗಿದ್ದಾರೆ.

ಇದನ್ನು ಓದಿ : ‘Pinki is kil*ling me’ ಎಂದು ಪತ್ನಿಯ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾದ ಪತಿ.!

ಸದ್ಯ ಈ ವಿಡಿಯೋ ಅನ್ನು ರಿಪೋರ್ಟರ್​ ಎನ್ನುವ ಇನ್​ಸ್ಟಾಗ್ರಾಮ್​ (Instagram page Reporter) ಪುಟದಲ್ಲಿ ಶೇರ್​ ಮಾಡಲಾಗಿದೆ. ವೈರಲ್ ವಿಡಿಯೋದಲ್ಲಿ, ಅಧಿಕಾರಿ ಕುಸಿದು ಬಿದ್ದರು ಸಹ ರಾಜ್ಯಪಾಲರು ನಿಂತ ಸ್ಥಳದಿಂದ ಅಲ್ಲಾಡದೇ ಇರುವುದು Social media ದಲ್ಲಿ ಟೀಕೆಗೆ ಗ್ರಾಸವಾಗಿದೆ. ಪೊಲೀಸರ ಹಣೆಬರಹವೇ ಅಷ್ಟೇ, ಈ ವಿಐಪಿ (VIP) ಗಳಿಗೆ ಕಾವಲು ಕಾಯಲು ಬೇಕು ಅಷ್ಟೇ. ಆದರೆ ಇಂಥ ಉನ್ನತ ಮಟ್ಟದ ಅಧಿಕಾರಿಗಳಿಗೆ ಹೀಗೆ ಆದರೂ ಅವರಿಗೆ ಸಹಾಯ ಮಾಡಲು ಅವರ ಸ್ಟೇಟಸ್​ ಅಡ್ಡ ಬರುತ್ತದೆ ಎಂದೆಲ್ಲಾ Troll​ ಮಾಡಲಾಗುತ್ತಿದೆ.

ಇನ್ನು Police Commissioner ಅವರನ್ನು ಸಹೋದ್ಯೋಗಿಗಳು ತಕ್ಷಣ ambulance ಗೆ ಸ್ಥಳಾಂತರಿಸಿದರು. ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ (First aid) ನೀಡಲಾಯಿತು. ಚಿಕಿತ್ಸೆ ಪಡೆದು ಪುನಃ ಅವರು ಕರ್ತವ್ಯಕ್ಕೆ ಹಾಜರಾದರು ಎಂದು ಹೇಳಲಾಗುತ್ತಿದೆ.

 

View this post on Instagram

 

A post shared by Reporter Live (@reporterliveofficial)

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!