ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ (Chamundeshwari Nagar, Hubli) ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿ ಪೀಟರ್ ತನ್ನ ಪತ್ನಿ ಪಿಂಕಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನು ಓದಿ : ರೂ.500 ಕೊಟ್ಟ ಯೂಟ್ಯೂಬರ್ ; ‘ನಾನು ವ್ಯಾಪಾರಿ, ಭಿಕ್ಷುಕನಲ್ಲ’ ಎಂದ ಹಪ್ಪಳ ಮಾರುವ ಹುಡುಗ.!
ಪೀಟರ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರು ಮೃತನ ಹೆಂಡತಿ ಪಿಂಕಿ ಮೇಲೆ ಗಂಭೀರ ಆರೋಪವನ್ನು (serious accusation) ಮಾಡಿದ್ದಾರೆ ಎನ್ನಲಾಗಿದೆ.
ಪೀಟರ್ ಡೆತ್‌ನೋಟ್‌ನಲ್ಲಿ, ‘Daddy I am sorry, Pinki is killing me, She want my death’ ಎಂದು ಬರೆದಿದ್ದಾರೆ. ತನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ಸಾವಿಗೆ ಕಾರಣ ಎಂದು ಬರೆಯುವಂತೆ ಮನವಿ ಮಾಡಿದ್ದಾರೆ. ಅಣ್ಣಾ ತಂದೆತಾಯಿಯನ್ನು ಚೆನ್ನಾಗಿ ನೋಡಿಕೋ ಎಂದು ಸಹ ಬರೆದಿದ್ದಾರೆ.
ಇದನ್ನು ಓದಿ : “ಕೋಚಿಂಗ್ ಗುರು” ಫೆಬ್ರವರಿ 1 ಮತ್ತು 2 ರಂದು ನ್ಯೂಸ್ಫಸ್ಟ್ನಿಂದ ಮೆಗಾ Coaching Expo ಆಯೋಜನೆ.!
ಪಿಂಕಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಪ್ರತಿನಿತ್ಯ ದೊಡ್ಡ ರಂಪಾಟವೇ ನಡೆಯುತ್ತಿತ್ತು ಎನ್ನಲಾಗಿದೆ. ಏಳೆಂಟು ತಿಂಗಳುಗಳಿಂದ ಗಂಡ- ಹೆಂಡತಿ ದೂರ ದೂರವೇ ಇದ್ದರು ಎನ್ನಲಾಗಿದೆ.
ಇನ್ನು ಗಂಡ ಪೀಟರ್‌ನಿಂದ ಡಿವೋರ್ಸ್ ಪಡೆಯಲು ಪಿಂಕಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಳು ಎನ್ನಲಾಗಿದೆ. ಅಲ್ಲದೇ ಜೀವನಾಂಶಕ್ಕಾಗಿ 20 ಲಕ್ಷ ಕೊಡುವಂತೆ ಪತ್ನಿ ಪಿಂಕಿ, ಗಂಡನನ್ನು ಪೀಡಿಸುತ್ತಿದ್ದಳು (Wife was pestering him to pay 20 lakhs for maintenance). ಇದೇ ಕಾರಣಕ್ಕೆ ಪೀಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : Government Job ಸಿಗುತ್ತಿದಂತೆಯೇ ಪತ್ನಿ ಎಸ್ಕೇಪ್ ; ಪತಿಯ ಈ ಕಾರ್ಯಕ್ಕೆ ಕೆಲಸ ಕಳೆದುಕೊಂಡ ಪತ್ನಿ.!
ಹಿಂದಿನ ಸುದ್ದಿ : ಸರ್ಕಾರಿ ನೌಕರಿ ಸಿಗುತ್ತಿದಂತೆಯೇ ಕಷ್ಟಪಟ್ಟು ಓದಿಸಿದ ಪತಿ ಬಿಟ್ಟು ಪತ್ನಿ ಎಸ್ಕೇಪ್ ; ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಗಂಡ ; ಏನದು ಗೊತ್ತಾ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಜ್ಯೋತಿ ಮೌರ್ಯ ಪ್ರಕರಣ ಬಹಳಷ್ಟು ಜನರಿಗೆ ಗೊತ್ತಿರಬಹುದು. ಕಷ್ಟ ಪಟ್ಟು ಓದಿಸಿದ (He studied hard) ಗಂಡನನ್ನು ಬಿಟ್ಟು ಪತ್ನಿ ಜ್ಯೋತಿ ಬೇರೊಬ್ಬನನ್ನು ಮದುವೆಯಾದ ಘಟನೆ ನಡೆದಿತ್ತು.
ಇದನ್ನು ಓದಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,036 ವಿವಿಧ ಹುದ್ದೆಗೆ ನೇರ ನೇಮಕಾತಿ.!
ಫ್ಯೂನ್ ಆಗಿದ್ದ ಗಂಡ, ಜ್ಯೋತಿಗೆ ಉನ್ನತ ಶಿಕ್ಷಣ ಕೊಡಿಸಿದ, ಅದು ತುಂಬಾ ಕಷ್ಟಪಟ್ಟು. ಆದರೆ ಪತ್ನಿ ಜ್ಯೋತಿ ಗಂಡನನ್ನು ಬಿಟ್ಟು ಸರ್ಕಾರಿ ನೌಕರಿ ಸಿಕ್ಕ ನಂತರ ಬೇರೆ ಪುರುಷನನ್ನು ಮದುವೆಯಾದಳು. ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಇಂತದ್ದೆ ಮತ್ತೊಂದು ಘಟನೆ ವರದಿಯಾಗಿದ್ದು, ಈ ಬಾರಿ ತನ್ನನ್ನು ತೊರೆದ ಪತ್ನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟು ಹೆಂಡತಿಗೆ ಭರ್ಜರಿ ಶಾಕ್ ನೀಡಿದ್ದಾನೆ.
ಇದನ್ನು ಓದಿ : ಒಂದು ತಿಂಗಳು Tea ಕುಡಿಯುವುದನ್ನು ಬಿಡಬೇಕು ಅಂತ ಅನ್ಕೊಂಡಿದ್ದೀರಾ.? ಅದಕ್ಕೂ ಮುಂಚೆ ಈ ಸುದ್ದಿ ಓದಿ.
ಗಂಡನ ಸಹಾಯ ಮತ್ತು ಸಹಕಾರದಿಂದ ಓದಿ ಉದ್ಯೋಗ (job) ಗಿಟ್ಟಿಸಿದ್ದ ಪತ್ನಿ ಉದ್ಯೋಗ ದೊರೆತ ಬಳಿಕ ಪತಿಯನ್ನೇ ತೊರೆದಿದ್ದು, ಆಕೆ ಮಾಡಿದ ಕೆಲಸಕ್ಕೆ ತಕ್ಕ ಪಾಠ ಕಲಿಸಲು ಪತಿ, ಪತ್ನಿ ಮಾಡಿದ್ದ ಎಡವಟ್ಟನ್ನು ಜಗಜ್ಜಾಹಿರು ಮಾಡಿ ಆಕೆ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಗೆ ತಂದಿದ್ದಾನೆ.
ಘಟನೆಯ ವಿವರ :
ಕೆಲ ವರ್ಷಗಳ ಹಿಂದೆ ರಾಜಸ್ಥಾನದ ಕೋಟಾದ (Khota of Rajasthan) ಮನೀಶ್ ಮೀನಾ ಮತ್ತು ಸಪ್ನಾ ಮೀನಾ ಮದುವೆಯಾಗಿದ್ದರು. ಆದರೆ, ಸಪ್ನಾಗೆ ಓದುವ ಆಸೆ ಇದೆ ಎಂದು ಅರಿತ ಪತಿ ಮನೀಶ್, ಉನ್ನತ ವ್ಯಾಸಂಗ ಮಾಡಲು ನೆರವಾದರು. ಯಾವುದೇ ಬೆಲೆ ತೆತ್ತಾದರೂ ತನ್ನ ಪತ್ನಿಗೆ ಉನ್ನತ ಶಿಕ್ಷಣಕ್ಕೆ (Higher education) ಕೊಡಿಸಲು ಮನೀಶ್ ನಿರ್ಧರಿಸಿದ್ದ. ಆತನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಸಹ ಆತ ಮಾತ್ರ ತನ್ನ ಹೆಂಡತಿಯನ್ನು ಓದಿಸಬೇಕು ಎಂಬ ಸಂಕಲ್ಪ (determination) ಮಾಡಿಕೊಂಡಿದ್ದ.
ಇದನ್ನು ಓದಿ : ಬೆಳಗಾವಿ : ವೇಶ್ಯಾವಾಟಿಕೆ ನಡೆಸುತ್ತಿದ್ದ Spa and Beauty parlour ಮೇಲೆ ಪೊಲೀಸರ ದಾಳಿ.!
ಅದರಂತೆ ಆತನ ಕಷ್ಟಕ್ಕೆ ಪ್ರತಿಫಲವೆಂಬಂತೆ ರೈಲ್ವೆ ಪರೀಕ್ಷೆಯಲ್ಲಿ (Railway exam) ಪತ್ನಿ ಸಪ್ನಾ ಪಾಸ್ ಆದಳು. ಆಕೆಗೆ ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಕೂಡ ಸಿಕ್ಕಿತು. ಆದರೆ ಕೆಲಸ ಸಿಕ್ಕ ಬಳಿಕ ಸಪ್ನಾ ಬದಲಾಗುತ್ತಾ ಹೋದಳು. ಅದರಲ್ಲೂ ಗಂಡನ ಕುರಿತು ಸಪ್ನಾಳ ನಡೆಯೇ ಬದಲಾಗಿತ್ತು. ಗಂಡನನ್ನು ಕೀಳಾಗಿ ಕಂಡು, ಕೊನೆಗೆ ಜಗಳ ಮಾಡಿಕೊಂಡು ಗಂಡನನ್ನೇ ಬಿಟ್ಟಳು.
ಸಪ್ನಾಳ ನಡೆಯಿಂದ ಸಿಟ್ಟಾಗಿದ್ದ ಗಂಡ ಮನೀಶ್ ಆಕೆಗೆ ಬುದ್ಧಿವಾದ ಹೇಳಿದರೂ, ಆತನ ಯಾವುದೇ ಸಂಧಾನಕ್ಕೂ (negotiation) ಒಪ್ಪದ ಸಪ್ನಾ ಆತನಿಂದ ದೂರ ಉಳಿಯಲು ನಿರ್ಧರಿಸಿದಳು.
ಇದನ್ನು ಓದಿ : ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ಬಂದಿದ್ದ ಬಾಲಕರು ನದಿ ನೀರಲ್ಲಿ ಮುಳುಗಿ ಸಾವು.!
ಇದರಿಂದ ಆಕ್ರೋಶಗೊಂಡ ಗಂಡ ಮನೀಶ್ ರೈಲ್ವೆ ಇಲಾಖೆಗೆ ದೂರು ನೀಡಿದ್ದ. ದೂರಿನಲ್ಲಿ ಸಪ್ನಾ ತನ್ನ ಸ್ವಂತ ಪ್ರತಿಭೆಯಿಂದ ಕೆಲಸ ಪಡೆಯಲು ಸಾಧ್ಯವಿಲ್ಲ (sapna cannot get a job by your own talent) ಎಂದು ಆರೋಪಿಸಿ, ಅಧಿಕಾರಿಗಳಿಗೆ ಸಾಕ್ಷ್ಯಾಧಾರಗಳನ್ನು (Evidence) ಸಹ ತೋರಿಸಿದ್ದ.
ತನ್ನ ಪತ್ನಿ ಸಪ್ನಾ, ಇನ್ನೊಬ್ಬ ಅಭ್ಯರ್ಥಿಯ (ಡಮ್ಮಿ ಅಭ್ಯರ್ಥಿ) ಸಹಾಯದಿಂದ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ (Railway Recruitment Board Exam) ಪಾಸ್ ಆಗಿದ್ದಾರೆ ಎಂದು ಪ್ರೂವ್ ಮಾಡಿದ.
ಇದನ್ನು ಓದಿ : Mahakumbha ಮೇಳದಲ್ಲಿ ಭಾರೀ ಅಗ್ನಿ ಅವಘಡ ; ಹೊತ್ತಿ ಉರಿಯುತ್ತಿರುವ ಟೆಂಟ್‌ಗಳು.!
ಈ ವಿಷಯ ಬೆಳಕಿಗೆ ಬಂದ ನಂತರ ಅಧಿಕಾರಿಗಳು ಸಪ್ನಾ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಅಲ್ಲದೆ ಅಂದು ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ (An investigation has been initiated against all the candidates) ಎಂದು ಕೋಟಾ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿ ಸೌರಭ್ ಜೈನ್ (Saurabh Jain, Senior Divisional Commercial Officer, Kota Division) ಮಾಹಿತಿ ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.