ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ (Jalgaon district of Maharashtra) ಪರಾಂಡ ನಿಲ್ದಾಣದ ಸಮೀಪ ಭೀಕರ ರೈಲು ದುರಂತವೊಂದು (Terrible train accident) ಸಂಭವಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂಬ ಸುಳ್ಳು ಸುದ್ದಿಯನ್ನು (A false rumor that the train was on fire) ನಂಬಿದ ಕೆಲ ಪ್ರಯಾಣಿಕರು ಗಾಬರಿಯಲ್ಲಿ ರೈಲಿನ ಚೈನ್ ಎಳೆದ್ದಿದ್ದಾರೆ. ಬಳಿಕ ತಮ್ಮ ಪ್ರಾಣ ಉಳಿಸಿಕೊಳ್ಳಲೆಂದು ಹಳಿ ಮೇಲೆ ಕೆಳಗೆ ಜಿಗಿದಿದ್ದಾರೆ. ಪ್ರಯಾಣಿಕರು ಜಿಗಿದ ಹಳಿಯಲ್ಲಿ ಕರ್ನಾಟಕ ಎಕ್ಸ್ಪ್ರೆಸ್ ರೈಲು (Karnataka Express Train) ಬರುತ್ತಿತ್ತು.
ಇದನ್ನು ಓದಿ : WCD : ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ವೇಳೆ ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಿಂದ ಇಳಿದ ಸುಮಾರು 10 ಜನ ಪ್ರಯಾಣಿಕರ ಮೇಲೆ ಕರ್ನಾಟಕ ಎಕ್ಸ್ಪ್ರೆಸ್ ರೈಲು ಹರಿದಿದೆ. ಪರಿಣಾಮ 10 ಪ್ರಯಾಣಿಕರು ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.
ಪ್ರಯಾಣಿಕರು ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುಳ್ಳು ವದಂತಿಯಿಂದ ಹೆದರಿದ್ದಾರೆ.
ಈ ಸುಳ್ಳು ಸುದ್ದಿಯನ್ನು (fake news) ನಂಬಿದ 30 – 40 ಜನ ತಮ್ಮ ಬೋಗಿಗಳಿಂದ ಕೆಳಗೆ ಹಾರಿದ್ದಾರೆ. ಈ ವೇಳೆ ವೇಗವಾಗಿ ಬಂದ ಕರ್ನಾಟಕ ಎಕ್ಸ್ಪ್ರೆಸ್ ರೈಲು ಹರಿದು 10 ಜನ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ : Super glue ಹಾಕಿ ತುಟಿಗಳನ್ನು ಮುಚ್ಚಿದ ಯುವಕ ; ಮುಂದೆನಾಯ್ತು ವಿಡಿಯೋ ನೋಡಿ.!
ಭೀಕರ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅಪಘಾತದ ಸ್ಥಳಕ್ಕೆ ಧಾವಿಸಿದ್ದಾರೆ.
Horrible train accident near Paranda railway station of #Jalgaon
Bangalore Express swept away many passengers of Pushpak Express. Many passengers jumped out of Pushpak Express due to fire#breaking #maharashtra #pushpakexpress #bigbreaking #train #accident #abpnews #india pic.twitter.com/hsV9AK1ASs
— Indian Observer (@ag_Journalist) January 22, 2025