ಜನಸ್ಪಂದನ ನ್ಯೂಸ್, ಡೆಸ್ಕ್ : ಸುಮಾರು 20 ಅಡಿ ಉದ್ದದ ದೈತ್ಯ ಹೆಬ್ಬಾವು (Python) ಒಂದು ಇಡಿಯಾಗಿ ಮೇಕೆಯನ್ನು ನುಂಗಿರುವ ಆಘಾತಕಾರಿ ಮತ್ತು ಆಶ್ಚರ್ಯಚಕಿತಗೊಳಿಸುವ ಘಟನೆ ನಡೆದಿದ್ದು, ಘಟನೆ ನೋಡಿದ ಜನರು ನಿಟ್ಟುಸಿರು ನಿಲ್ಲಿಸುವಂಥದ್ದಾಗಿದೆ.
ಮೇಕೆಯನ್ನು ನುಂಗಿದ 20 ಅಡಿ ಹೆಬ್ಬಾವು (Python) :
ಬಲರಾಮಪುರ ಜಿಲ್ಲೆಯ ಹರೈಯಾ ಪ್ರದೇಶದಲ್ಲಿ ಭಾನುವಾರ ಸಂಜೆ ಈ ಒಂದು ಅಚ್ಚರಿಯ ಘಟನೆಯ ನಡೆದಿದೆ. ಬರ್ದೌಲಿಯಾ ಗ್ರಾಮದ ದಕ್ಷಿಣದ ನಾಗಮಣಿ ಆಶ್ರಮದ ಬಳಿಯ ಕಚ್ನಿ ಚರಂಡಿಯಲ್ಲಿ 20 ಅಡಿ ಉದ್ದದ ದೈತ್ಯ ಹೆಬ್ಬಾವು (Python) ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಗ್ರಾಮಸ್ಥರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿದ್ದ ವೇಳೆ ಕೆಲವರು ಈ ದೊಡ್ಡ ಹೆಬ್ಬಾವನ್ನು ನೋಡಿ ಬೆಚ್ಚಿ ಬೀಳುತ್ತಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಹೆಬ್ಬಾವು (Python) ಬೈಯಲಿನಲ್ಲಿದ್ದ ಮೇಕೆಯನ್ನು ಹಿಡಿದು ನುಂಗಿದೆ. ಇದು ಸಾಮಾನ್ಯ ಕ್ರಿಯೇ ಅನಿಸಬಹುದು.
ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
ಆದರೆ ಕೆಲಕಾಲದ ನಂತರ ಹೆಬ್ಬಾವು, ನುಂಗಿದ ಮೇಕೆಯನ್ನು ಹೊರಹಾಕುವ ಅಚ್ಚರಿ ದೃಶ್ಯ ಎಲ್ಲರನ್ನೂ ಬೆರಗುಗೊಳಿಸಿತು. ಹೆಬ್ಬಾವು, ನುಂಗಿದ ಮೇಕೆಯನ್ನು ಹೊರಹಾಕಿದ ಕೆಲ ಸಮಯಯದ ನಂತರ ಪಕ್ಕದಲ್ಲಿಯೇ ಸರಿದು ಹೋಗಿದೆ.
ಸನ್ನಿವೇಶವನ್ನು ಕಂಡು ಭೀತಿಗೆ ಒಳಗಾದ ಜನರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ರೇಂಜರ್ ಸತ್ರಹನ್ ಲಾಲ್ ಅವರ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. “ಹೆಬ್ಬಾವು (Python) ಪೂರ್ತಿಯಾಗಿ ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಿಲ್ಲ” ಎಂದು ರೇಂಜರ್ ಲಾಲ್ ತಿಳಿಸಿದ್ದಾರೆ.
ಇದನ್ನು ಓದಿ : ಆಸ್ಪತ್ರೆಯಲ್ಲಿಯೇ 19 ವರ್ಷದ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು throat ಸೀಳಿದ ಯುವಕ.!
Naval Kant Sinha ಎಂಬ ಹೆಸರಿನ X ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, “यह दृश्य देखकर आप हैरान हो जाएंगे।बलरामपुर हर्रैया के बरदौलिया गांव के दक्षिण नागमणि आश्रम के पास कचनी नाले में रविवार की शाम करीब 20 फुट लंबा अजगर नज़र आया। अजगर ने पहले बकरी को निगला और फिर उगल दिया… लगता है औकात से अधिक निगल गया था। (ಈ ದೃಶ್ಯವನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಭಾನುವಾರ ಸಂಜೆ ಬಲರಾಂಪುರ ಹರೈಯಾದ ಬರ್ದೌಲಿಯಾ ಗ್ರಾಮದ ದಕ್ಷಿಣ ನಾಗಮಣಿ ಆಶ್ರಮದ ಬಳಿಯ ಕಚ್ನಿ ನಾಲಾದಲ್ಲಿ 20 ಅಡಿ ಉದ್ದದ ಹೆಬ್ಬಾವು (Python) ಕಾಣಿಸಿಕೊಂಡಿತು. ಹೆಬ್ಬಾವು ಮೊದಲು ಮೇಕೆಯನ್ನು ನುಂಗಿ ನಂತರ ಅದನ್ನು ಉಗುಳಿತು… ಅದು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ನುಂಗಿದಂತೆ ತೋರುತ್ತದೆ)” ಎಂದು ಬರೆದುಕೊಂಡಿದ್ದಾರೆ.
ನುಂಗಿದ ಮೇಕೆಯನ್ನು ಹೊರಹಾಕುವ ಹೆಬ್ಬಾವಿನ (Python) ವಿಡಿಯೋ :
यह दृश्य देखकर आप हैरान हो जाएंगे।बलरामपुर हर्रैया के बरदौलिया गांव के दक्षिण नागमणि आश्रम के पास कचनी नाले में रविवार की शाम करीब 20 फुट लंबा अजगर नज़र आया। अजगर ने पहले बकरी को निगला और फिर उगल दिया… लगता है औकात से अधिक निगल गया था।
#Balrampur pic.twitter.com/1RKiPQR2Zi— Naval Kant Sinha | नवल कान्त सिन्हा (@navalkant) June 30, 2025
Liver : ಈ ತರಕಾರಿಗಳನ್ನು 3 ತಿಂಗಳು ತಿನ್ನಿರಿ ; ಡ್ಯಾಮೇಜ್ ಆಗಿರುವ ಲಿವರ್‌ನಿಂದ ಮುಕ್ತಿ ಪಡೆಯಿರಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ನಿಮ್ಮ ಲಿವರ್ ಡ್ಯಾಮೇಜ್ (Liver damage) ಆಗಿದೇಯೇ.? ಹಾಗಾದ್ರೆ ಈ ತರಕಾರಿ 3 ತಿಂಗಳು ತಿನ್ನಿರಿ, ಡ್ಯಾಮೇಜ್ ಆಗಿರುವ ಲಿವರ್ (Liver) ಸರಿಯಾಗುತ್ತೇ.!
ಕೊಬ್ಬಿನ ಪಿತ್ತಜನಕಾಂಗ ಎಂದರೆ ಯಕೃತ್ತಿ (Liver) ನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದು. ಇದು ಸಾಮಾನ್ಯ ಸಮಸ್ಯೆಯಾಗಿದ್ದು, ಮಧುಮೇಹ ಮತ್ತು ಅಧಿಕ ತೂಕ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ರೋಗವು ಯಾವುದೇ ಲಕ್ಷಣಗಳನ್ನು ಉಂಟುಮಾಡದೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಫ್ಯಾಟಿ ಲಿವರ್ (Liver) ರೋಗವು ಎರಡು ರೀತಿಯಲ್ಲಿ ಸಂಭವಿಸುತ್ತದೆ. ಮೊದಲನೆಯದಾಗಿ, ಅತಿಯಾದ ಮದ್ಯ ಸೇವನೆಯಿಂದ ಉಂಟಾಗುತ್ತದೆ. ಇದನ್ನು ಆಲ್ಕಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ. ಎರಡನೆಯದಾಗಿ, ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯಿಂದ ಉಂಟಾಗುವ ಫ್ಯಾಟಿ ಲಿವರ್. ಇದನ್ನು ನಾನ್-ಆಲ್ಕಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ.
ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
ಫ್ಯಾಟಿ ಲಿವರ್ (Fatty liver) ರೋಗವನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ ಲಿವರ್ ಸಿರೋಸಿಸ್‌ನಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಆರಂಭಿಕ ಹಂತದಲ್ಲಿದ್ದ ಫ್ಯಾಟಿ ಲಿವರ್ (Fatty liver)ಕಾಯಿಲೆಯನ್ನು ಯಾವುದೇ ಔಷಧಿಗಳಿಲ್ಲದೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಈ ಬಗ್ಗೆ ಇತ್ತೀಚೆಗೆ, ಪ್ರಸಿದ್ಧ ಆಯುರ್ವೇದ ವೈದ್ಯ ಸಲೀಂ ಜೈದಿ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಪುಟದ ವಿಡಿಯೋದಲ್ಲಿ ಅವರು 3 ಜೀವನಶೈಲಿಯ ಬದಲಾವಣೆಗಳನ್ನು ಆಯುರ್ವೇದ ವೈದ್ಯ ಸಲೀಂ ಜೈದಿ ಉಲ್ಲೇಖಿಸಿದ್ದಾರೆ. ಇದನ್ನು ನಿರಂತರವಾಗಿ ಅನುಸರಿಸಿದರೆ ಫ್ಯಾಟಿ ಲಿವರ್ ಸಮಸ್ಯೆ ಕೇವಲ 3 ತಿಂಗಳಲ್ಲಿ ಗುಣವಾಗುತ್ತದೆ ಎಂದು ಹೇಳಲಾಗಿದೆ.
ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
ಫ್ಯಾಟಿ ಲಿವರ್ ಗುಣಪಡಿಸಲು ಅನುಸರಿಸಬೇಕಾದ ಅಂಶ :
ಸಂಸ್ಕರಿಸಿದ ಆಹಾರ, ಸಕ್ಕರೆ, ಪಿಷ್ಟಯುಕ್ತ ಆಹಾರಗಳು, ಹುರಿದ ಆಹಾರಗಳಿಂದ ಸಂಪೂರ್ಣವಾಗಿ ದೂರವಿದ್ದರೆ, ನಮ್ಮ ಕೆಟ್ಟು ಹೋದ ಯಕೃತ್ತು (liver) ಮತ್ತೆ ತನ್ನ ಮೊದಲಿನ ಸ್ಥಿತಿಗೆ ಮರಳುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಹಿ ಕುಂಬಳಕಾಯಿ ಅಥವಾ ಬೀಟ್‌ರೂಟ್ ರಸವನ್ನು ಕುಡಿದರೆ, ನಿಮಗೆ ಕೊಬ್ಬಿನ ಯಕೃತ್ತು (liver) ಕಡಿಮೆಯಾಗುತ್ತದೆ.
ಹಾಗೇಯೇ ಮಧ್ಯಾಹ್ನ ಊಟಕ್ಕೆ ಬೇಳೆ, ಗಂಜಿ ಮತ್ತು ಸಾಕಷ್ಟು ಹಸಿರು ತರಕಾರಿಗಳನ್ನು ತಿನ್ನಬೇಕು. ಇದೆಲ್ಲದರ ಜೊತೆಗೆ, ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಅಂದರೆ ಯಕೃತ್ತಿನ ಮೇಲೆ ಹೊರೆಯಾಗದಂತೆ ಹಗುರವಾದ ಆಹಾರವನ್ನೇ ಸೇವಿಸಬೇಕು.
ದೇಹದಿಂದ ವಿಷವನ್ನು ತೆಗೆದುಹಾಕುವ ಅಂಗವಾಗಿ ಈ ಯಕೃತ್ತು (liver) ಕೆಲಸ ಮಾಡುತ್ತದೆ. ಒಂದು ವೇಳೆ ದೈಹಿಕ ಚಟುವಟಿಕೆ ಕಡಿಮೆಯಾದಾಗ ದೇಹದಿಂದ ವಿಷವನ್ನು ತೆಗೆದುಹಾಕುವ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಆದ್ದರಿಂದ, ದಿನಕ್ಕೆ ಕನಿಷ್ಠ 30 – 45 ನಿಮಿಷಗಳ ಕಾಲ ವಾಕ್ ಮಾಡಬೇಕು. ಯೋಗವನ್ನು ಕೂಡಾ ಮರೆಯದೇ ಮಾಡಬೇಕು.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!
ಯಕೃತ್ತ (liver) ನ್ನು ಸಕ್ರಿಯವಾಗಿಡಲು ಹೊಟ್ಟೆಯ ಮೇಲೆ ಲಘು ಮಸಾಜ್ ಮಾಡಿ, ಇದೆಲ್ಲವೂ ತುಂಬಾ ಸಹಾಯಕವಾಗಿದೆ.
ಯಕೃತ್ತಿನ ಕೊಬ್ಬನ್ನು ಕರಗಿಸುವಲ್ಲಿ ಆಯುರ್ವೇದದಲ್ಲಿ ಅನೇಕ ಗಿಡಮೂಲಿಕೆಗಳ ಔಷಧಿಗಳು ಪರಿಣಾಮಕಾರಿ ಎಂದು (ಪ್ರಯೋಜನಕಾರಿ) ಪರಿಗಣಿಸಲಾಗಿದೆ. ರಾತ್ರಿ ಮಲಗುವ ಮುನ್ನ ತ್ರಿಫಲ ಪುಡಿಯನ್ನು ಸೇವಿಸಬೇಕು. ಬೆಳಿಗ್ಗೆ ಎದ್ದ ತಕ್ಷಣ, ನೆಲ್ಲಿಕಾಯಿ ಚಹಾ ಕುಡಿಯಿರಿ. ತ್ರಿಫಲ ಪುಡಿ ಮತ್ತು ನೆಲ್ಲಿಕಾಯಿ ಗಿಡಮೂಲಿಕೆಗಳು ಯಕೃತ್ತಿ (liver) ನ ಉರಿಯೂತ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತವೆ.
ಒಟ್ಟಿನಲ್ಲಿ ಹೇಳುವುದೇನೆಂದರೇ, ಈ ಫ್ಯಾಟಿ ಲಿವರ್ ಗುಣಪಡಿಸಲಾಗದ ಕಾಯಿಲೆಯಲ್ಲ. ಸರಿಯಾದ ಸಮಯದಲ್ಲಿ ಗಮನಹರಿಸಿ ಔಷಧಿಗಳ ಬದಲಿಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿದರೆ ಕಂಡಿತ ಈ ರೋಗದಿಂದ ಮುಕ್ತಿ ಪಡೆಯಬಹುದು.
ಈ ಮೇಲೆ ನೀಡಲಾದ ಜೀವನಶೈಲಿಯನ್ನು ವರ್ಷಾನುಗಟ್ಟಲೇ ಮಾಡಬೇಕೆಂದಿಲ್ಲ, ಕೇವಲ 3 ತಿಂಗಳ ಕಾಲ ಮಾಡಿದರೆ ಸಾಕು ಈ ಸಮಸ್ಯೆಯನ್ನು ಮೂಲದಿಂದಲೇ ನಿರ್ಮೂಲನೆ ಮಾಡಬಹುದು.