ಜನಸ್ಪಂದನ ನ್ಯೂಸ್, ಡೆಸ್ಕ್ : ಓರ್ವ ಪತ್ನಿ ತನ್ನ ಪ್ರಿಯತಮ (Lover) ನ ಜೊತೆ ಇರುವಾಗಲೇ ಪತಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಸದ್ಯ ಅದರ (Lover ಜೊತೆಗಿರುವ) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತಿಚೇಗೆ ವಂಚಕ ಗಂಡ ಅಥವಾ ವಂಚಕ ಹೆಂಡತಿಯ ಬಗ್ಗೆ ಅನೇಕ ಸುದ್ದಿಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಇಂತಹ ಘಟನೆಗಳನ್ನು ನೋಡಿದ ನಂತರ ಮದುವೆ ಎಂಬ ಪವಿತ್ರ ಬಂಧನದಲ್ಲಿ ನಂಬಿಕೆ ಕಳೆದುಕೊಳ್ಳುವಂತ್ತಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.
ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದೀಗ ಅಂತಹದೆ ಮತ್ತೊಮ್ಮೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವಿವಾಹೇತರ ಸಂಬಂಧಗಳಿಗೆ ಸಂಬಂಧಿಸಿದ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ, ಪತಿಯು ತನ್ನ ಪತ್ನಿ ಪ್ರೇಮಿ (Lover) ಯೊಂದಿಗೆ ರಸ್ತೆಯಲ್ಲಿ ಇದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ.
ತನ್ನ ಪತ್ನಿ ಆಕೆಯ ಪ್ರೇಮಿ (Lover) ಯೊಂದಿಗೆ ಇದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದ ನಂತರ, ಪತಿ ಅದನು ವೀಡಿಯೊ ಮಾಡಲು ಪ್ರಾರಂಭಿಸುತ್ತಾನೆ. ಈ ಸಮಯದಲ್ಲಿ, ಮಹಿಳೆ (ಪತ್ನಿ) ತನ್ನ ಗೆಳೆಯ (Lover) ನಿಂದ ದೂರ ಸರಿದು ರಸ್ತೆಯ ಇನ್ನೊಂದು ಬದಿಗೆ ಹೋಗುತ್ತಾಳೆ ಇದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!
ತನ್ನ ಪತ್ನಿ ಇನ್ನೊಬ್ಬ ಪುರುಷ (Lover) ನೊಂದಿಗೆ ಇರುವುದನ್ನು ನೋಡಿದ ಪತಿ ತೀವ್ರವಾಗಿ ಕೋಪಗೊಳ್ಳುತ್ತಾನೆ. ಆ ವೇಳೆ ಅವನು ಕೋಪದಿಂದ ಕೂಗುತ್ತಾ ತನ್ನ ಪತ್ನಿಯ ಸಂಬಂಧ (Lover) ದ ಬಗ್ಗೆ ಹೇಳುತ್ತಾ, ಪತ್ನಿ ತನ್ನ ಮಕ್ಕಳನ್ನು ಕೊಲ್ಲಲು ಬಯಸುತ್ತಾಳೆ ಎಂದು ಅವನು ತನ್ನ ಪತ್ನಿಯ ಮೇಲೆ ಆರೋಪ ಮಾಡುತ್ತಿದ್ದಾನೆ.
ಇದೇ ವೇಳೆ ಪತಿ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕುತ್ತ ಪತ್ನಿಯ ವಿರುದ್ಧವಾಘಿ ರಸ್ತೆಯ ಮಧ್ಯದಲ್ಲಿ ಗಲಾಟೆ ಮಾಡುತ್ತಿದ್ದಾನೆ. ಅಲ್ಲದೇ ಪೊಲೀಸ್ ಠಾಣೆಯಲ್ಲಿಯೂ ಸಹ ಪತಿ-ಪತ್ನಿಯ ಕುರಿತಾದ ಪ್ರಕರಣ ನಡೆಯುತ್ತಿದೆ ಎಂದು ಹೇಳುತ್ತಿದ್ದಾನೆ.
ಈ ವಿಡಿಯೋವನ್ನು ಘರ್ ಕೆ ಕಲೇಶ್ ಎಂಬ X ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, 80.2K ಗಿಂತ ಹೆಚ್ಚು Views ಮತ್ತು 1.5K ದಷ್ಟು ಜನರು ಲೈಕ್ ಮಾಡಿದ್ದಾರೆ. ವೈರಲ್ ವಿಡಿಯೋ ನೋಡಿದ ನಂತರ ಬಳಕೆದಾರರು ಪತ್ನಿಯ ವರ್ತನೆ ಬಗ್ಗೆ ಕೋಪಗೊಂಡಿದ್ದಾರೆ.
ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋ ನೋಡಿದ ಅನೇಕ ಬಳಕೆದಾರರು ತಮ್ಮ ಪ್ರಿಕ್ರಿಯೆಯನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು ‘ಸುತ್ತಲೂ ಭಯದ ವಾತಾವರಣವಿದೆ’ ಎಂದು ಬರೆಯುತ್ತಾರೆ. ಮತ್ತೊಬ್ಬ ಬಳಕೆದಾರರು “ಯಾರನ್ನೂ ಬಲವಂತವಾಗಿ ಹಿಡಿದಿಟ್ಟುಕೊಳ್ಳಬೇಡಿ. ಅವಳು ಹೋಗಲು ಬಯಸಿದರೆ, ಅವಳನ್ನು ಹೋಗಲು ಬಿಡಿ” ಎಂದು ಬರೆಯುತ್ತಾರೆ.
ಮೂರನೆಯವರು ‘ಪುರುಷ ಜನಾಂಗ ಅಪಾಯದಲ್ಲಿದೆ’ ಎಂದು ಬರೆದುಕೊಂಡಿದ್ದರೆ, ಅನೇಕ ಜನರು ಮದುವೆಯ ಹೆಸರಿನ ಬಗ್ಗೆ ಭಯಪಡುವಂತಾಗಿದೆ ಎಂದು ಹೇಳುತ್ತಿದ್ದಾರೆ.
ವಿಡಿಯೋ :
Extra-Marital Affair Kalesh (Husband Caught his Wife With Someone Else on Street) pic.twitter.com/kI1A3Uz8Hc
— Ghar Ke Kalesh (@gharkekalesh) June 26, 2025
Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :
*ಮೇಷ ರಾಶಿ*
ಹೊಸ ವಸ್ತು ಮತ್ತು ವಾಹನ ಲಾಭ ದೊರೆಯುತ್ತದೆ. ಹಳೆಯ ಸ್ನೇಹಿತರೊಂದಿಗೆ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಕೈಗೊಂಡ ವ್ಯವಹಾರಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಆತ್ಮೀಯರಿಂದ ಅಮೂಲ್ಯ ವಿಷಯಗಳನ್ನು ಸಂಗ್ರಹಿಸಲಾಗುತ್ತದೆ. ಮನೆಯ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ವೃತ್ತಿಪರ ವ್ಯವಹಾರಗಳು ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿನ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.
*ವೃಷಭ ರಾಶಿ*
ಪ್ರಮುಖ ವಿಷಯಗಳಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದರಿಂದ ನಷ್ಟ ಉಂಟಾಗುತ್ತದೆ. ಕೈಗೆತ್ತಿಕೊಂಡ ಕೆಲಸ ನಿಧಾನವಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ವಾದವಿವಾದಗಳು ಉಂಟಾಗುತ್ತವೆ. ದೂರ ಪ್ರಯಾಣದದಿಂದ ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ ಮತ್ತು ಉದ್ಯೋಗಗಳಲ್ಲಿ ಶ್ರಮ ಹೆಚ್ಚಾಗುತ್ತದೆ.
*ಮಿಥುನ ರಾಶಿ*
ಕೌಟುಂಬಿಕ ವಿಷಯಗಳಲ್ಲಿ ಭಿನ್ನಭಿಪ್ರಾಯಗಳು ದೂರವಾಗುತ್ತವೆ. ಸಕಾಲಕ್ಕೆ ಬರಬೇಕಾದ ಹಣ ದೊರೆಯುತ್ತದೆ. ಪ್ರಮುಖ ವ್ಯವಹಾರಗಳು ಯೋಜಿತ ಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಹೊಸ ವಾಹನ ಯೋಗವಿದೆ. ವೃತ್ತಿಪರ ವ್ಯವಹಾರಗಳು ನಿರೀಕ್ಷೆಗೂ ಮೀರಿ ಲಾಭವನ್ನು ಪಡೆಯುತ್ತವೆ. ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ.
*ಕಟಕ ರಾಶಿ*
ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ ಮತ್ತು ಆರ್ಥಿಕ ಏರಿಳಿತಗಳಿಂದ ಮುಕ್ತಿ ಸಿಗುತ್ತದೆ. ಕೈಗೆತ್ತಿಕೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಕುಟುಂಬ ಸದಸ್ಯರೊಂದಿಗೆ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ ಮತ್ತು ಉದ್ಯೋಗಿಗಳು ಅಧಿಕಾರಿಗಳ ಕೃಪೆಗೆ ಪಾತ್ರರಾಗುತ್ತಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜೂನ 28 ರ ದ್ವಾದಶ ರಾಶಿಗಳ ಫಲಾಫಲ.!
*ಸಿಂಹ ರಾಶಿ*
ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ.ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಹೊಸ ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಉದ್ಯೋಗಿಗಳಿಗೆ ಸ್ಥಾನ ಚಲನೆ ಸೂಚನೆಗಳಿವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ.
*ಕನ್ಯಾ ರಾಶಿ*
ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ ಮತ್ತು ಸಹೋದರ ಸಂಬಂಧಿ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿರುತ್ತವೆ. ಕೈಗೊಂಡ ಕೆಲಸದಲ್ಲಿ ಸಣ್ಣಪುಟ್ಟ ಅಡೆತಡೆಗಳು ಉಂಟಾಗುತ್ತವೆ. ಮನೆಯ ಹೊರಗೆ ಸಾಲದ ಒತ್ತಡ ಹೆಚ್ಚಾಗುತ್ತದೆ. ವೃತ್ತಿಪರ ವ್ಯಾಪಾರದಲ್ಲಿ ಪಾಲುದಾರರೊಂದಿಗೆ ವಿವಾದಕ್ಕೆ ಹೋಗದಿರುವುದು ಉತ್ತಮ. ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ.
*ತುಲಾ ರಾಶಿ*
ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ, ಕುಟುಂಬ ಸದಸ್ಯರೊಂದಿಗೆ ಸೌಹಾರ್ದತೆ ಹೆಚ್ಚಾಗುತ್ತದೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಕೆಲವು ವ್ಯವಹಾರಗಳಲ್ಲಿ ಸಂಗಾತಿಯ ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು. ವೃತ್ತಿಪರ ಉದ್ಯೋಗಗಳಲ್ಲಿ ಅಪೇಕ್ಷಿತ ಪ್ರಗತಿ ಸಾಧಿಸಲಾಗುತ್ತದೆ.
*ವೃಶ್ಚಿಕ ರಾಶಿ*
ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ಆರ್ಥಿಕ ವಾತಾವರಣ ಉತ್ತಮವಾಗಿರುತ್ತದೆ. ಅಗತ್ಯಕ್ಕೆ ತಕ್ಕಂತೆ ಸಂಬಂಧಿಕರಿಂದ ನೆರವು ದೊರೆಯುತ್ತದೆ.ವೃತ್ತಿ ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳು ಕೂಡಿ ಬರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ದಕ್ಷತೆಯಿಂದ ಅಧಿಕಾರಿಗಳಿಂದ ಮನ್ನಣೆಯನ್ನು ಪಡೆಯುತ್ತೀರಿ ಮತ್ತು ವ್ಯವಹಾರಗಳು ಲಾಭದಾಯಕವಾಗಿರುತ್ತದೆ.
ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
*ಧನುಸ್ಸು ರಾಶಿ*
ವೃತ್ತಿಪರ ವ್ಯವಹಾರದಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ ಮತ್ತು ಹೆಚ್ಚುವರಿ ಜವಾಬ್ದಾರಿಗಳಿಂದ ಉದ್ಯೋಗಿಗಳಿಗೆ ವಿಶ್ರಾಂತಿ ಇರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ವಿನಾಕಾರಣ , ಆದಾಯಕ್ಕೆ ಮೀರಿದ ಖರ್ಚುಗಳು ಇರುತ್ತವೆ, ಸ್ನೇಹಿತರೊಂದಿಗೆ ವಿವಾದಗಳಿರುತ್ತವೆ. ವಾಹನ ಪ್ರಯಾಣದಲ್ಲಿ ಹೆಚ್ಚು ಜಾಗರೂಕರಾಗಿರಿ.
*ಮಕರ ರಾಶಿ*
ದೂರದ ಸಂಬಂಧಿಕರಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾಗುತ್ತದೆ. ವೃತ್ತಿ ಪರ ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಖರ್ಚು, ಶ್ರಮ ಅಧಿಕವಾಗುತ್ತದೆ. ಕೈಗೊಂಡ ಕೆಲಸಗಳು ಮಂಡಗತಿಯಲ್ಲಿ ಸಾಗುತ್ತವೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ವಿವಾದಕ್ಕೆ ಹೋಗದಿರುವುದು ಉತ್ತಮ. ನಿರುದ್ಯೋಗ ಪ್ರಯತ್ನಗಳು ನಿಧಾನವಾಗುತ್ತವೆ.
*ಕುಂಭ ರಾಶಿ*
ಮನೆಯ ಹೊರಗೆ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ, ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ ಮತ್ತು ಗೃಹ ನಿರ್ಮಾಣ ಕಾರ್ಯಗಳು ವೇಗಗೊಳ್ಳುತ್ತವೆ. ಪ್ರಮುಖ ಕಾರ್ಯಗಳು ಅನಾಯಾಸವಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರದಲ್ಲಿ ಅಪೇಕ್ಷಿತ ಪ್ರಗತಿಯನ್ನು ಸಾಧಿಸುತ್ತೀರಿ. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳ ಹೊರತಾಗಿಯೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ.
*ಮೀನ ರಾಶಿ*
ಅಗತ್ಯಕ್ಕೆ ಕೈಯಲ್ಲಿ ಹಣ ಇರವುದಿಲ್ಲ.ವೃತ್ತಿಪರ ವ್ಯವಹಾರಗಳಲ್ಲಿ ಹೆಚ್ಚಿನ ಶ್ರಮಕ್ಕೆ ಅಲ್ಪ ಫಲಿತಾಂಶ ಪಡೆಯುತ್ತೀರಿ. ಕುಟುಂಬದ ಸದಸ್ಯರ ಮಾತುಗಳು ಭಾವನಾತ್ಮಕವಾಗಿ ನೋವುಂಟು ಮಾಡುತ್ತವೆ. ಉದ್ಯೋಗದ ವಾತಾವರಣವು ಒತ್ತಡದಿಂದ ಕೂಡಿರುತ್ತದೆ. ನಿರುದ್ಯೋಗ ಪ್ರಯತ್ನಗಳು ಮಂದಗತಿಯಲ್ಲಿ ಸಾಗುತ್ತವೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.