ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (Indian Penal Code) ರಡಿ ಅಥವಾ ಪೋಕ್ಸೊ ಕಾಯ್ದೆಯಡಿ ಶವದೊಂದಿಗಿನ ಸಂಭೋಗವು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಛತ್ತೀಸಗಢ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ (Chhattisgarh High Court has given the verdict).
ಭಾರತದಲ್ಲಿನ ಕ್ರಿಮಿನಲ್ ಕಾನೂನುಗಳ ಪ್ರಕಾರ ಮೃತದೇಹದೊಂದಿಗೆ ಲೈಂಗಿಕ ಸಂಭೋಗ ನಡೆಸುವುದು (Having s*x) ಅತ್ಯಾಚಾರಕ್ಕೆ ಸಮನಾಗುವುದಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಇಬ್ಬರು ವ್ಯಕ್ತಿಗಳು, ಅಪ್ರಾಪ್ತೆಯ ಕಿಡ್ನ್ಯಾಪ್, ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಬಿಭು ದತ್ತ ಗುರು ಅವರ ಪೀಠವು, ಮೃತದೇಹದೊಂದಿಗಿನ ಲೈಂಗಿಕ ಕ್ರಿಯೆಯು ಯೋಚನೆ ಮಾಡಲೂ ಆಗದ ಹೀನಾಯ ಕೃತ್ಯವಾದರೂ (heinous act), ಅದನ್ನು ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗದು ಎಂದು ಹೇಳಿದೆ.
ಇದನ್ನು ಓದಿ : ಟೈರ್ ಸ್ಪೋಟಕ್ಕೆ ಗಾಳಿಯಲ್ಲಿ ಹಾರಿ ಹೋಗಿ ಬಿದ್ದ ಯುವಕ; ಭಯಾನಕ ವಿಡಿಯೋ Viral.!
ಮೃತದೇಹದ ಜೊತೆ ಸಂಭೋಗ ಮಾಡುವುದು ಭಯಾನಕ ಅಪರಾಧವಾಗಿದೆ (terrible crime) ಎಂದು ಅಭಿಪ್ರಾಯಪಟ್ಟಿದೆ.
ಇದು ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಸಂಬಂಧಿತ ಅಪರಾಧಗಳ ಪ್ರಕಾರ ಅತ್ಯಾಚಾರವಾಗುವುದಿಲ್ಲ ಎಂದು ತಿಳಿಸಿದೆ. ಅಲ್ಲದೇ ಈ ಎರಡೂ ಕಾನೂನು ಸಂತ್ರಸ್ತೆ ಜೀವಂತವಾಗಿದ್ದರೆ ಮಾತ್ರ ಅನ್ವಯವಾಗಲಿದೆ (Applicable only if the victim is alive) ಎಂದು ಕೋರ್ಟ್ ತಿಳಿಸಿದೆ.
ಹಿಂದಿನ ಸುದ್ದಿ : ಭೀಕರ ರಸ್ತೆ ಅಪಘಾತ; ಮೂವರ ಸಾವು.!
ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ಅಡಬಗಟ್ಟಿ (Adabagatti of Alnavar Taluk) ಬಳಿ ಟೆಂಪೊ (ಟಿಟಿ) ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆ ನಡೆದಿದೆ.
ಸವದತ್ತಿ ತಾಲ್ಲೂಕಿನ ಶಿರಸಂಗಿಯ ಗ್ರಾಮದ ಮಹಾದೇವಪ್ಪ ಹುಲ್ಲಳ್ಳಿ (39), ಹನುಮಂತ ಮಲ್ಲಾಡ್ (36) ಹಾಗೂ ಮಹಾಂತೇಶ ಚವಾಣ (37) ಸಾವಿಗೀಡಾಗಿದ್ದು, ಇವರು ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನು ಓದಿ : ಲೋಕಾಯುಕ್ತ ದಾಳಿ : ಕಾನ್ಸ್‌ಟೇಬಲ್ ಮನೆಯಲ್ಲಿ ಕಂತೆ ಕಂತೆ ಹಣ; ಬೆಳ್ಳಿ ಪತ್ತೆ, ವಿಡಿಯೋ Viral.!
ಗೋವಾದಿಂದ ಚಿತ್ರದುರ್ಗಕ್ಕೆ (Goa to Chitradurg) ಸಂಚರಿಸುತ್ತಿದ್ದ ಟೆಂಪೊ ಹಾಗೂ ಶಿರಸಂಗಿಯಿಂದ ಗೋವಾ ಕಡೆಗೆ (Shirasangi to Goa) ಸಾಗುತ್ತಿದ್ದ ಲಾರಿ ಡಿಕ್ಕಿಯಾಗಿವೆ.
ನಸುಕಿನ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ.