ಜನಸ್ಪಂದನ ನ್ಯೂಸ್, ಬೆಳಗಾವಿ : ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ (Hindalaga Jail) ನಡೆದಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಆರೋಪದಲ್ಲಿ ಪಾಲಾಗಿರುವ ಜಯೇಶ್ ಪೂಜಾರಿ ಅಲಿಯಾಸ್ ಶಕೀಲ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ (attempt to suicide) ಎನ್ನಲಾಗಿದೆ.
Read it : ಟೈರ್ ಸ್ಪೋಟಕ್ಕೆ ಗಾಳಿಯಲ್ಲಿ ಹಾರಿ ಹೋಗಿ ಬಿದ್ದ ಯುವಕ; ಭಯಾನಕ ವಿಡಿಯೋ Viral.!
ಜೈಲು ಸಿಬ್ಬಂದಿ ಊಟದಲ್ಲಿ ವಿಷ ಹಾಕಿ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ (They are trying to kill by poisoning the food). ಜೈಲಿನಲ್ಲಿ ಜೀವಂತವಾಗಿ ಇರಲು ಬಿಡುತ್ತಿಲ್ಲ ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಾನು ಕುತ್ತಿಗೆಯನ್ನು ಕೊಯ್ದುಕೊಂಡಿದ್ದೇನೆ. ಆದರೆ, ನಾನು ಬದುಕುಳಿದೆ. ಆದರೂ, ಜೈಲಿನ ಸಿಬ್ಬಂದಿ ನನಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿಲ್ಲ ಎಂದು ಆತ ಆರೋಪಿಸಿದ್ದಾನೆ.
Read it :Belagavi : ಭೀಕರ ರಸ್ತೆ ಅಪಘಾತ; ಮೂವರ ಸಾವು.!
ಇಲ್ಲಿನ ಭಯದ ವಾತಾವರಣಕ್ಕೆ ನಾನು ನಲುಗಿ ಹೋಗಿದ್ದು, ನಾನು ಜಾಮೀನಿಗಾಗಿ (bail) ವಕೀಲರಿಗೆ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಆದರೆ ನನ್ನ ಅರ್ಜಿಯನ್ನು ಜೈಲು ಸಿಬ್ಬಂದಿಯು ವಕೀಲರಿಗೆ ತಲುಪಿಸಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾನೆ.
ಈ ಬಗ್ಗೆ ಸ್ವತಃ ಜಯೇಶ್ ಪೂಜಾರಿಯೇ ಜೈಲಿನಲ್ಲಿ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ.
ಹಿಂದಿನ ಸುದ್ದಿ : ಭೀಕರ ರಸ್ತೆ ಅಪಘಾತ; ಮೂವರ ಸಾವು.!
ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ಅಡಬಗಟ್ಟಿ (Adabagatti of Alnavar Taluk) ಬಳಿ ಟೆಂಪೊ (ಟಿಟಿ) ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆ ನಡೆದಿದೆ.
ಸವದತ್ತಿ ತಾಲ್ಲೂಕಿನ ಶಿರಸಂಗಿಯ ಗ್ರಾಮದ ಮಹಾದೇವಪ್ಪ ಹುಲ್ಲಳ್ಳಿ (39), ಹನುಮಂತ ಮಲ್ಲಾಡ್ (36) ಹಾಗೂ ಮಹಾಂತೇಶ ಚವಾಣ (37) ಸಾವಿಗೀಡಾಗಿದ್ದು, ಇವರು ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
Read it : C.T ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ; ಸಚಿವೆ ಹೆಬ್ಬಾಳ್ಕರ್ ಆಪ್ತ ಸೇರಿ 10 ಜನರ ವಿರುದ್ಧ FIR.!
ಗೋವಾದಿಂದ ಚಿತ್ರದುರ್ಗಕ್ಕೆ (Goa to Chitradurg) ಸಂಚರಿಸುತ್ತಿದ್ದ ಟೆಂಪೊ ಹಾಗೂ ಶಿರಸಂಗಿಯಿಂದ ಗೋವಾ ಕಡೆಗೆ (Shirasangi to Goa) ಸಾಗುತ್ತಿದ್ದ ಲಾರಿ ಡಿಕ್ಕಿಯಾಗಿವೆ.
ನಸುಕಿನ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ.