ಜನಸ್ಪಂದನ ನ್ಯೂಸ್, ಉಡುಪಿ : ಉಡುಪಿ ಜಿಲ್ಲೆಯ ಕುಂದಾಪುರ (Kundapur in Udupi district) ತಾಲ್ಲೂಕಿನ ಕೋಟೇಶ್ವರದಲ್ಲಿ ಟೈರ್ ಪಂಕ್ಚರ್ ಶಾಪ್ ನಲ್ಲಿ (Tire puncture shop) ಬಸ್ ನ ಟೈರ್ ಗೆ ಗಾಳಿ ತುಂಬಿಸುತ್ತಿದ್ದ ವೇಳೆ ಟೈರ್ ಸ್ಪೋಟಗೊಂಡು ಯುವಕ ಗಂಭೀರವಾಗಿ ಗಾಯಗೊಂಡ (serious injuries) ಘಟನೆ ನಡೆದಿದೆ.
ಈ ಘಟನೆಯಲ್ಲಿ ಅಬ್ದುಲ್ ರಶೀದ್ (19) ಎಂಬಾತ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : C.T ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ; ಸಚಿವೆ ಹೆಬ್ಬಾಳ್ಕರ್ ಆಪ್ತ ಸೇರಿ 10 ಜನರ ವಿರುದ್ಧ FIR.!
ಟೈರ್ ಪಂಕ್ಚರ್ ಶಾಪ್ ಗೆ ಖಾಸಗಿ ಶಾಲಾ ಬಸ್ಸೊಂದರ (private school bus) ಟೈರ್ ಪ್ಯಾಚ್ ಗೆ ಬಂದಿತ್ತು. ಈ ವೇಳೆ ಅಬ್ದುಲ್ ರಶೀದ್ ಟೈರ್ ನ್ನು ಬಸ್ಸಿನಿಂದ ಕೆಳಗಿಳಿಸಿ ಗಾಳಿ ತುಂಬಿಸಿದ್ದಾರೆ.
ಗಾಳಿ ತುಂಬಿಸಿ ರಶೀದ್ ಅಲ್ಲಿಂದ ಎದ್ದ ಕೂಡಲೇ ಟೈರ್ ದಿಢೀರ್ ಬ್ಲಾಸ್ಟ್ ಆಗಿದೆ. ಟೈರ್ ಸಿಡಿದ ರಭಸಕ್ಕೆ ರಶೀದ್ ಗಾಳಿಯಲ್ಲಿ ಹಾರಿ ಗಿರಕಿ ಹೊಡೆದು ಬಿದ್ದಿದ್ದಾನೆ (He jumped in the air and fell down). ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನು ಓದಿ : Health : ತೂಕ ಇಳಿಕೆಗಾಗಿ ಜನ ಹೆಚ್ಚು ಗೂಗಲ್ ಮಾಡಿದ ಪಾನೀಯ ಇದು.?
ಸ್ಫೋಟದ ತೀವ್ರತೆಗೆ (Explosive intensity) ಟೈರ್ ಡ್ರಮ್ ಹಾರಿ ಬಸ್ಸಿನ ಮೇಲ್ಛಾವಣಿಯ ಮೇಲೆ ಬಿದ್ದು ನೆಲಕ್ಕುರುಳಿದಿದೆ. ಘಟನೆಯ ಎಲ್ಲಾ ದೃಶ್ಯಾವಳಿಗಳು ಸ್ಥಳೀಯ ಅಂಗಡಿಯವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಟೈರ್ ಸ್ಪೋಟಗೊಂಡ ವಿಡಿಯೋ :
ಹಿಂದಿನ ಸುದ್ದಿ : ಭೀಕರ ರಸ್ತೆ ಅಪಘಾತ; ಮೂವರ ಸಾವು.!
ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ಅಡಬಗಟ್ಟಿ (Adabagatti of Alnavar Taluk) ಬಳಿ ಟೆಂಪೊ (ಟಿಟಿ) ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆ ನಡೆದಿದೆ.
ಸವದತ್ತಿ ತಾಲ್ಲೂಕಿನ ಶಿರಸಂಗಿಯ ಗ್ರಾಮದ ಮಹಾದೇವಪ್ಪ ಹುಲ್ಲಳ್ಳಿ (39), ಹನುಮಂತ ಮಲ್ಲಾಡ್ (36) ಹಾಗೂ ಮಹಾಂತೇಶ ಚವಾಣ (37) ಸಾವಿಗೀಡಾಗಿದ್ದು, ಇವರು ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನು ಓದಿ : Weather : ನಾಳೆಯಿಂದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆಯಿಂದ ಮುನ್ಸೂಚನೆ.!
ಗೋವಾದಿಂದ ಚಿತ್ರದುರ್ಗಕ್ಕೆ (Goa to Chitradurg) ಸಂಚರಿಸುತ್ತಿದ್ದ ಟೆಂಪೊ ಹಾಗೂ ಶಿರಸಂಗಿಯಿಂದ ಗೋವಾ ಕಡೆಗೆ (Shirasangi to Goa) ಸಾಗುತ್ತಿದ್ದ ಲಾರಿ ಡಿಕ್ಕಿಯಾಗಿವೆ.
ನಸುಕಿನ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ.