Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಬೆಳಿಗ್ಗೆ ಉಪಹಾರಕ್ಕೆ ಏನೇನು ತಿನ್ನಬಾರದು ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಮಗೆ ಬೆಳಗಿನ ಬ್ರೇಕ್ ಫಾಸ್ಟ್ (breakfast) ಎಷ್ಟೊಂದು ಮುಖ್ಯ ಅನ್ನೋದು ತಿಳಿದಿರಬೇಕು. ಅದರಲ್ಲೂ ಉತ್ತಮ ಉಪಾಹಾರವು ಆರೋಗ್ಯಕ್ಕೆ ತುಂಬಾನೇ ಉಪಯುಕ್ತ.

ಆದರೆ, ಇಂದಿನ ಫಾಸ್ಟ್ ಜೀವನಶೈಲಿಯಿಂದಾಗಿ (lifestyle), ನಾವು ಏನು ತಿನ್ನಬೇಕು ಮತ್ತು ಬೆಳಿಗ್ಗೆ ಏನು ತಿನ್ನಬಾರದು ಎಂಬುದರ ಬಗ್ಗೆ ಯೋಚಿಸಲು ಸಮಯವಿಲ್ಲ.

ಇದನ್ನು ಓದಿ : ವೈರಲ್‌ ವಿಡಿಯೋ : ರೂ.33,000 ದಂಡ ಸಾಕಾಗಲಿಲ್ಲ ಅಂತ ಮತ್ತೆ ಹೆಚ್ಚುವರಿಯಾಗಿ ರೂ.47,500 ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!

ಹಾಗಾದ್ರೆ ಬೆಳಿಗ್ಗೆ ಉಪಹಾರಕ್ಕೆ ಏನು ಸೇವಿಸಬಾರದು ಅಂತ ತಿಳಿಯೋಣ ಬನ್ನಿ

1) ಮಸಾಲೆಯುಕ್ತ ಆಹಾರವನ್ನು (masala food) ಸೇವಿಸಬಾರದು. ಇದು ಎದೆಯುರಿ, ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ ಮತ್ತು ಹೊಟ್ಟೆ ನೋವು ಸಮಸ್ಯೆಗಳನ್ನು ತಂದೊಡ್ಡುತ್ತದೆ.

2) ಕೆಲವರು ಪ್ಯಾಕ್ ಮಾಡಿದ ಜ್ಯೂಸ್ ಕುಡಿತಾರೆ. ಇದು ಒಳ್ಳೆಯದಲ್ಲ. ಯಾಕೆಂದರೆ ಅದನ್ನು ಸಂರಕ್ಷಿಸಲು ರಾಸಾಯನಿಕಗಳನ್ನು (chemical) ಬಳಸಲಾಗುತ್ತದೆ.

3) ಸಿಟ್ರಸ್ ಹಣ್ಣುಗಳನ್ನು (citrus fruit’s) ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಬೆಳಿಗ್ಗೆ ಹಣ್ಣಿನ ರಸ ಕುಡಿಯುವುದರಿಂದ ಗ್ಯಾಸ್, ಅಲ್ಸರ್, ಜೀರ್ಣಕ್ರಿಯೆ ಸಮಸ್ಯೆ, ಎದೆಯುರಿ, ಅಸಿಡಿಟಿ ಸಮಸ್ಯೆಗಳು ಕಾಡುತ್ತವೆ.

4) ಬೆಳಿಗ್ಗೆ ಕುರುಕಲು ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ.

5) ಕೆಲವರು ಬ್ರೆಡ್, ಜ್ಯಾಮ್ ತಿಂತಾರೆ. ಆದ್ರೆ ಇದು ದಿನನಿತ್ಯ ಸೇವಿಸುವುದು ಉಪಯುಕ್ತವಲ್ಲ. ಬ್ರೆಡ್, ಜ್ಯಾಮ್ ತಿನ್ನುವುದರಿಂದ ಮೆದುಳಿನ (brain) ಕಾರ್ಯ ಕಡಿಮೆಯಾಗುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗದೇ ಆಯಾಸ ಉಂಟಾಗುವುದು.

ಇದನ್ನು ಓದಿ : ರಾಜ್ಯದ ಉತ್ತರ ಒಳನಾಡಿನಲ್ಲಿ Heat wave ಎಚ್ಚರಿಕೆ ; ಮನೆಯಿಂದ ಹೊರಗೆ ಬರುವ ಮುನ್ನ ಎಚ್ಚರಿಕೆ.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img