ಜನಸ್ಪಂದನ ನ್ಯೂಸ್, ಡೆಸ್ಕ್ : 20 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ವಿದ್ಯಾರ್ಥಿನಿಯ ಸ್ನೇಹಿತನ ಮುಂದೆಯೇ ಸಾಮೂಹಿಕ ಅತ್ಯಾಚಾರ (Rape) ಎಸಗಿರುವ ಪೈಶಾಚಿಕ ಕೃತ್ಯ ನಡೆದಿದೆ.
ಈ ಆಘಾತಕಾರಿ ಘಟನೆ ಒಡಿಶಾ ರಾಜ್ಯದ ಭುವನೇಶ್ವರದ ಗೋಪಾಲ್‌ಪುರ ಬೀಚ್‌ನಲ್ಲಿ ನಡೆದಿದ್ದು, 10 ಜನ ದುರುಳರು ವಿದ್ಯಾರ್ಥಿನಿಯ ಸ್ನೇಹಿತನ ಮುಂದೆಯೇ ಸಾಮೂಹಿಕ ಅತ್ಯಾಚಾರ (Rape) ಎಸಗಿದ್ದಾರೆಂದು ತಿಳಿದು ಬಂದಿದೆ.
ಇದನ್ನು ಓದಿ : Helicopter crash : ಪೈಲಟ್ ಸೇರಿ 6 ಮಂದಿ ಸಾವು.!
ಸಂತ್ರಸ್ತೆ ವಿದ್ಯಾರ್ಥಿನಿ ತನ್ನ ಸಹಪಾಠಿಯೊಂದಿಗೆ ಸಂಜೆ 6.30 ರ ಸುಮಾರಿಗೆ ಬೀಚ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಗ, ಸುಮಾರು 10 ಪುರುಷರು ಮೂರು ಮೋಟಾರ್ ಸೈಕಲ್‌ಗಳಲ್ಲಿ ಬಂದಿದ್ದಾರೆ. ಅದರಲ್ಲಿಯ ಇಬ್ಬರು ಫೋಟೋ ತೆಗೆಯಲು ಪ್ರಾರಂಭಿಸಿ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ನಂತರ ಯುವಕರು ಹುಡುಗಿಯ ಸ್ನೇಹಿತನ ಕೈಗಳನ್ನು ಕಟ್ಟಿ, ವಿದ್ಯಾರ್ಥಿನಿಯನ್ನು ಹತ್ತಿರದ ಪಾಳುಬಿದ್ದ ಮನೆಗೆ ಎಳೆದೊಯ್ದು, ಅಲ್ಲಿ ಮೂವರು ಸರದಿಯಲ್ಲಿ ಅತ್ಯಾಚಾರ (Rape) ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಸರದಿಯಂತೆ ಎರಡು ಗಂಟೆಗಳಿಗೂ ಹೆಚ್ಚು ಸಮಯ ಲೈಂಗಿಕ ದೌರ್ಜನ್ಯ (Rape) ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ : Sheetal : ಕತ್ತು ಸೀಳಿ ಖ್ಯಾತ ಮಾಡೆಲ್ ಹತ್ಯೆ ; ಕಾಲುವೆಯಲ್ಲಿ ಶವ ಪತ್ತೆ.!
ಈ ಸಮಯದಲ್ಲಿ ಅತ್ಯಾಚಾರ (Rape) ಸಂತ್ರಸ್ತೆ ಎಷ್ಟೇ ಕೂಗಿ ಬೇಡಿಕೊಂಡರೂ ಕಾಮುಕರು ಬಿಡಲಿಲ್ಲ. ದುಷ್‌ಕೃತ್ಯದ ನಂತರ ಅಪರಾಧಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಧೈರ್ಯ ತೋರಿಸಿದ ಅತ್ಯಾಚಾರ (Rape) ಸಂತ್ರಸ್ತೆ ರಾತ್ರಿ 11 ಗಂಟೆಗೆ ದೂರು ನೀಡಲು ಗೋಪಾಲಪುರ ಪೊಲೀಸ್ ಠಾಣೆಗೆ ಹೋದರು.
ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಅತ್ಯಾಚಾರ (Rape) ಶಂಕಿತ ಆರೋಪಿಗಳು 19 ರಿಂದ 23 ವರ್ಷ ವಯಸ್ಸಿನವರಾಗಿದ್ದು, ಇವರಲ್ಲಿ ಶಾಲೆ ಮತ್ತು ಕಾಲೇಜು ಬಿಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : ಈ ಲಕ್ಷಣಗಳಿದ್ದರೆ ದೇಹದಲ್ಲಿ ಕೆಟ್ಟ Cholesterol ಹೆಚ್ಚಾಗಿದೆ ಅಂತನೇ ಅರ್ಥ.!
ಆರೋಪಿಗಳಾರು ಸ್ಥಳೀಯರಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ.
ಈ ಲಕ್ಷಣಗಳಿದ್ದರೆ ದೇಹದಲ್ಲಿ ಕೆಟ್ಟ Cholesterol ಹೆಚ್ಚಾಗಿದೆ ಅಂತನೇ ಅರ್ಥ.!
ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Cholesterol) ಹೆಚ್ಚಾದಾಗ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಕೈಯಲ್ಲಿ ಮರಗಟ್ಟುವಿಕೆ, ಕಾಲುಗಳಲ್ಲಿ ನೋವು, ಎದೆ ನೋವು, ವಾಕರಿಕೆ, ದೃಷ್ಟಿ ಮಂದವಾಗುವುದು, ಕಪ್ಪು ಕಲೆಗಳು, ಕಣ್ಣುಗಳಲ್ಲಿ ನೋವು ಮತ್ತು ಕಣ್ಣುಗಳ ಸುತ್ತಲಿನ ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು ಸೇರಿದಂತೆ ಇತರೆ ಲಕ್ಷಣಗಳು ಕಾಣಿಸಿಕೊಂಡರೆ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Cholesterol) ಹೆಚ್ಚಾಗಿದೆ ಅಂತನೇ ಅರ್ಥ.!
ಸಾಮಾನ್ಯವಾಗಿ ಕೆಟ್ಟ ಜೀವನಶೈಲಿ ಮತ್ತು ನಮ್ಮ ಆಹಾರ ಪದ್ಧತಿಯಿಂದ ಈ ಕೆಟ್ಟ ಕೊಲೆಸ್ಟ್ರಾಲ್ (Cholesterol) ನಮ್ಮ ದೇಹದಲ್ಲಿ ಹೆಚ್ಚಾಗುತ್ತಿದ್ದು, ಹೀಗಾಗಿ ನಮ್ಮ ಆಹಾರ ಪದ್ದತಿ ಮತ್ತು ಜೀವನ ಶೈಲಿ ಬದಲಾಯಿಸಿಕೊಳ್ಳುವ ಮೂಲಕ ಹೆಚ್ಚಾಗುತ್ತಿರುವ ಈ ಕೆಟ್ಟ ಕೊಲೆಸ್ಟ್ರಾಲ್‌ನ್ನ ನಿಯಂತ್ರಿಸಬಹುದು.
ಇದನ್ನು ಓದಿ : Breakfast : ಬೆಳಗ್ಗೆ ನೀವು ಉಪಾಹಾರ ಸೇವಿಸದೇ ಇರ್ತೀರಾ.? ಈ ಸುದ್ದಿ ಓದಿ.!
ರಕ್ತ ಪರಿಚಲನೆ ಸುಧಾರಿಸಲು ಮತ್ತು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ವೈದ್ಯರು ಔಷಧಿಯನ್ನು ಸೇವಿಸುವಂತೆ ತಮಗೆ ಹೇಳಬಹುದು. ಆದರೆ ಆರಂಭಿಕ ಹಂತದಲ್ಲಿ ನಮ್ಮ ಮನೆಯಲ್ಲಿಯೇ ಸಿಗುವ ಈ ಪದ್ದಾರ್ಥಗಳಿಂದ ಹೆಚ್ಚುತ್ತಿರುವ ಈ ಕೊಲೆಸ್ಟ್ರಾಲ್ (Cholesterol) ನ್ನು ನಿಯಂತ್ರಿಸಹುದು.
ನಮ್ಮ ಮನೆಯಲ್ಲಿಯೇ ಸಿಗುವ ಈ 5 ಮನೆಮದ್ದುಗಳನ್ನು ಸೇವಿಸುವ ಮೂಲಕ ರಕ್ತನಾಳಗಳಲ್ಲಿ ಸಂಗ್ರಹವಾದ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಇದನ್ನು ಓದಿ : Witchcraft : ಮಹಿಳೆಯ ‘ಬೆತ್ತಲೆ ವೀಡಿಯೋ’ ಮಾಡಿ ಬ್ಲ್ಯಾಕ್ ಮೇಲ್ : ಕಾಮುಕ ಅರ್ಚಕ ಅರೆಸ್ಟ್..!
ಕೊಲೆಸ್ಟ್ರಾಲ್ ಕಡಿಮೆ ಮಾಡುವ 5 ಮನೆಮದ್ದುಗಳು :
ಕರಿಬೇವು :
ಪ್ರತಿದಿನ ನಮ್ಮ ಅಡುಗೆ ಮನೆಯಲ್ಲಿ ಬಳಸುವ ಕರಿಬೇವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಕರಿಬೇವಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಉತ್ತಮ ಕೊಲೆಸ್ಟ್ರಾಲ್ (Cholesterol) ನ್ನು ಹೆಚ್ಚಿಸಲು ಅತ್ಯಗತ್ಯ.
ಇನ್ನು ನೀವು ನೀವು ಪ್ರತಿದಿನ ಅಡುಗೆಯಲ್ಲಿ 8-10 ಕರಿಬೇವಿನ ಎಲೆಗಳನ್ನು ಬಳಸುವ ಮೂಲಕ ಉತ್ತಮ ಪ್ರಯೋಜನಗಳನ್ನು ಪಡೆಯಲು ಸಹಕಾರಿ. ಹಾಗೆಯೇ ನೀವು ಅದರ ರಸವನ್ನು ಸಹ ಕುಡಿಯುವ ಮೂಲಕ ಕೊಲೆಸ್ಟ್ರಾಲ್ (Cholesterol) ಪ್ರಮಾಣವನ್ನು ಕಡಿಮೆ ಮಾಡಬಹುದು.
ಕೊತ್ತಂಬರಿ ಸೊಪ್ಪು :
ಪ್ರತಿ ಮನೆಯಲ್ಲೂ ಅಡುಗೆಯಲ್ಲಿ ಬಳಸುವ ಸಾಮಾನ್ಯವಾದ ಸೊಪ್ಪು ಈ ಕೊತ್ತಂಬರಿ. ಆದರೆ ಬಹಳಷ್ಟು ಜನಕ್ಕೆ ಈ ಕೊತ್ತಂಬರಿ ಸೊಪ್ಪಿನ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಈ ಸೊಪ್ಪು ಅಡುಗೆಯ ರುಚಿ ಅಷ್ಟೆ ಹೆಚ್ಚಿಸುವುದಿಲ್ಲ, ಬದಲಿಗೆ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಬಹಳ ಪ್ರಯೋಜನಕಾರಿಯಾಗಿದೆ.
ಕೊತ್ತಂಬರಿ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ, ನೀವು ಹೆಚ್ಚಿನ ಕೊಲೆಸ್ಟ್ರಾಲ್ (Cholesterol) ಸಮಸ್ಯೆಯನ್ನು ಗುಣಪಡಿಸಬಹುದು. ಸಲಾಡ್ ಮೇಲೆ ಸೇರಿಸುವ ಮೂಲಕ ಅಥವಾ ಅದರಿಂದ ಚಟ್ನಿ ಮಾಡುವ ಮೂಲಕ ಕೊತ್ತಂಬರಿ ಸೊಪ್ಪನ್ನು ತಿನ್ನಬಹುದು.
ಇದನ್ನು ಓದಿ : Sheetal : ಕತ್ತು ಸೀಳಿ ಖ್ಯಾತ ಮಾಡೆಲ್ ಹತ್ಯೆ ; ಕಾಲುವೆಯಲ್ಲಿ ಶವ ಪತ್ತೆ.!
ಜಾಮೂನ್/ನೇರಳೆ ಎಲೆಗಳು :
ಇನ್ನು ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಈ ಜಾಮೂನ್/ನೇರಳೆ ಎಲೆಗಳು ಮಹತ್ವದ ಪಾತ್ರವಹಿಸುತ್ತವೆ. ಜಾಮೂನ್/ನೇರಳೆ ಎಲೆಗಳು ಉತ್ಕರ್ಷಣ ನಿರೋಧಕಗಳು, ಆಂಥೋಸಯಾನಿನ್‌ಗಳು ಇತ್ಯಾದಿ ಗುಣಗಳನ್ನು ಹೊಂದಿದ್ದು, ಅದು ರಕ್ತನಾಳಗಳಲ್ಲಿ ಸಂಗ್ರಹವಾದ ಕೊಬ್ಬ (Cholesterol) ನ್ನು ಕಡಿಮೆ ಮಾಡಲು ತುಂಬಾ ಸಹಕಾರಿ.
ಈ ನೇರಳೆ ಎಲೆಗಳನ್ನು ಪುಡಿ ರೂಪದಲ್ಲಿ ತಿನ್ನಬಹುದು. ಇಲ್ಲವಾದರೆ ನೀವು ದಿನಕ್ಕೆ 1-2 ಬಾರಿ ಅದರ ಚಹಾ ಅಥವಾ ಕಷಾಯವನ್ನು ತಯಾರಿಸಿ ಕುಡಿಯಬಹುದು.
ಮೆಂತ್ಯ ಎಲೆಗಳು :
ಮೆಂತ್ಯ, ಇದೊಂದು ಸರಳ ತರಕಾರಿ. ಇದರ ಎಲೆಗಳು ಔಷಧೀಯ ಗುಣಗಳನ್ನು ಹೊಂದಿದ್ದು, ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್ (Cholesterol) ಮತ್ತು ಟ್ರೈಗ್ಲಿಸರೈಡ್‌ಗಳ ಆರೋಗ್ಯಕರ ಮಟ್ಟಕ್ಕೆ ಸಂಬಂಧಿಸಿವೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ನೀವು ಮೆಂತ್ಯ ಎಲೆಗಳನ್ನು ತಿನ್ನವ ಮೂಲಕ ನಿಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುವ ಕೊಲೆಸ್ಟ್ರಾಲ್‌ನ್ನು ತಡೆಯಬಹುದು.
ಇದನ್ನು ಓದಿ : Honeytrap-case : ಯುವತಿ, ಪೊಲೀಸ್ ಕಾನ್ಸ್‌ಟೇಬಲ್ ಸೇರಿ 5 ಜನರ ಬಂಧನ.!
ತುಳಸಿ ಎಲೆಗಳು :
ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯಗೊಳಿಸುವಲ್ಲಿ ತುಳಸಿ ಎಲೆಗಳು ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ತುಳಸಿ ಎಲೆಗಳು ಚಯಾಪಚಯ ಒತ್ತಡವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತವೆ.
ಇದು ದೇಹದ ತೂಕ – ಕೊಲೆಸ್ಟ್ರಾಲ್ (Cholesterol) ನ್ನು ಕಾಪಾಡಿಕೊಳ್ಳುತ್ತದೆ. ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನಬಹುದು.