ಜನಸ್ಪಂದನ ನ್ಯೂಸ್, ಡೆಸ್ಕ್ : ಖ್ಯಾತ ಸಾಮಾಜಿಕ ಮಾಧ್ಯಮ ತಾರೆ (famous social media star) ಮತ್ತು ಉದಯೋನ್ಮುಖ ತೆಲುಗು ನಟಿ ಸೌಮ್ಯಾ ಶೆಟ್ಟಿಯನ್ನು ಚಿನ್ನದ ಕಳ್ಳತನದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಡೊಂಡಪಾರ್ಥಿಯ ಬಾಲಾಜಿ ಮೆಟ್ರೋ ರೆಸಿಡೆನ್ಸಿಯಲ್ಲಿ ಸಂಭವಿಸಿದ ಕಳ್ಳತನದ (theft) ಘಟನೆಯಲ್ಲಿ ನಟಿ ಸೌಮ್ಯ ಶೆಟ್ಟಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಬೆನ್ನು ನೋವಿನಿಂದ ಬಳಲುತ್ತಿದ್ದಿರಾ.? ನಿರ್ಲಕ್ಷ್ಯ ಬೇಡ ; ಇಲ್ಲಿದೆ Easy method.!
ಪ್ರಸಾದ್ ಬಾಬು ನಿವೃತ್ತ ಭಾರತೀಯ ಅಂಚೆ ವಿಭಾಗದ ಉದ್ಯೋಗಿಯಾಗಿದ್ದು, ಅವರ ಪ್ಲಾಟ್ ನಲ್ಲಿ 150 ತೊಲ ಚಿನ್ನದ ಆಭರಣಗಳ (gold jewelry) ಕಳ್ಳತನದ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸ್ ತನಿಖೆ ಕೈಗೊಂಡಿದ್ದರು.
ಪೊಲೀಸರು ಬೆರಳಚ್ಚುಗಳನ್ನು ಸಂಗ್ರಹಿಸಿ ಫ್ಲಾಟ್ನಿಂದ ಸಿಸಿಟಿವಿ ತುಣುಕನ್ನು (CCTV footage) ಪರಿಶೀಲಿಸಿದಾಗ ಭಾಗಿಯಾದ ಹನ್ನೊಂದು ವ್ಯಕ್ತಿಗಳಲ್ಲಿ ನಟಿ ಸೌಮ್ಮ ಶೆಟ್ಟಿ ಸೇರಿದಂತೆ ಮೂವರು ಶಂಕಿತರನ್ನು ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಜಾತ್ರೆಗೆ ಬಂದಿದ್ದ ಬಾಲಕಿ ಮೇಲೆ ಗ್ಯಾಂಗ್ ರೇ*ಪ್ ; ಮೂವರು ಆರೋ*ಪಿಗಳು arre*st.!
ಪ್ರಸಾದ್ ಅವರ ಮಗಳು ಮೌನಿಕಾ ಹಾಗೂ ನಟಿ ಸೌಮ್ಯ ನಿಕಟ ಸಂಬಂಧವನ್ನು (close relationship) ಹೊಂದಿದ್ದರು. ಮೌನಿಕಾ ಅವರ ಮನೆಗೆ ಆಗಾಗ ಭೇಟಿ ನೀಡುವ ಸೌಮ್ಮ, ಬೆಲೆಬಾಳುವ ವಸ್ತುಗಳನ್ನು (valuable) ನಿಕಟವಾಗಿ ಗಮನಿಸಿದ್ದಾರೆ. ಬಳಿಕ ಸ್ನಾನಗೃಹದ ಮೂಲಕ ಪದೇ ಪದೇ ಮಲಗುವ ಕೋಣೆಗೆ ತೆರಳಿ ಒಟ್ಟು 1 ಕೆಜಿ ತೂಕದ ಚಿನ್ನದ ಆಭರಣಗಳನ್ನು ಕದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಳ್ಳತನ ಮಾಡಿದ ಬಳಿಕ ಸೌಮ್ಯ ಶೆಟ್ಟಿ ಗೋವಾಕ್ಕೆ ಹೊರಟು ಹೋಗಿದ್ದರು ಎಂದು ಆರೋಪಿಸಲಾಗಿದೆ. ಇನ್ನು ವಿಚಾರಣೆ ವೇಳೆ ಸೌಮ್ಯಾ ಶೆಟ್ಟಿ ಕಳ್ಳತನದಲ್ಲಿ ಪಾಲ್ಗೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ.