Wednesday, May 22, 2024
spot_img
spot_img
spot_img
spot_img
spot_img
spot_img

75 ಕೆಜಿ ವ್ಯಕ್ತಿ ತನ್ನ ಮೇಲೆ ಮಲಗಿ kiss ಕೊಡುತ್ತಿದ್ದರೆ ಎಂಜಾಯ್ ಮಾಡಕಾಗುತ್ತಾ.? ಎಂದ ನಟಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಿನಿಮಾ ರಂಗದಲ್ಲಿ ಕೆಲವು ನಟಿಯರು ರೊಮ್ಯಾಂಟಿಕ್ ಸೀನ್ಸ್, ಕಿಸ್ಸಿಂಗ್ ಸೀನ್ಸ್‌ಗಳಲ್ಲಿ (romantic and kissing scenes) ನಟಿಸುವುದಕ್ಕೆ ಒಪ್ಪುವುದಿಲ್ಲ. ಆದರೆ ಕೆಲವರು ಷರತ್ತಿನ ಮೇಲೆ ನಟಿಸೋಕೆ ಬರುವ ನಟಿಯರು ಇರುತ್ತಾರೆ.

ಆದರೆ ರೊಮ್ಯಾಂಟಿಕ್ ಸೀನ್‌ಗಳಲ್ಲಿ ನಟಿಸೋದು ಅಷ್ಟು ಸುಲಭ ಅಲ್ಲ, ನೀವು ಅಂದುಕೊಂಡಂತೆ ಆ ದೃಶ್ಯಗಳ ಚಿತ್ರೀಕರಣ (filming) ಇರಲ್ಲ ಎಂದು ನಟಿಯರೊಬ್ಬರು ಹೇಳಿಕೊಂಡಿದ್ದಾರೆ.

ಇದನ್ನು ಓದಿ : Health : ಬೇಗ ನಿದ್ದೆ ಬರಬೇಕಾ? ಮಲಗುವ ಮುಂಚೆ ಇವುಗಳಲ್ಲಿ ಯಾವುದಾದರೊಂದು ತಿನ್ನಿ.

ತೆಲುಗಿನಲ್ಲಿ ಇತ್ತೀಚೆಗೆ ‘ಮಂಗಳವಾರಂ’ ಎನ್ನುವ ಸಿನಿಮಾ ಬಂದು ಪ್ರೇಕ್ಷಕರ ಗಮನ ಸೆಳೆದಿತ್ತು. ಅಜಯ್ ಭೂಪತಿ ನಿರ್ದೇಶನದ ಚಿತ್ರದಲ್ಲಿ ನಂದಿತಾ ಶ್ವೇತಾ, ಪಾಯಲ್ ರಜಪೂತ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಮಾಲಿವುಡ್ ನಟಿ ದಿವ್ಯಾ ಪಿಳ್ಳೈ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದರು.

‘ಮಂಗಳವಾರಂ’ ಚಿತ್ರದಲ್ಲಿ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಕೂಡ ದಿವ್ಯಾ ಪಿಳ್ಳೈ ನಟಿಸಿದ್ದಾರೆ. ಅಲ್ಲದೇ ಈ ಹಿಂದೆ ಮಲಯಾಳಂ ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಆಕೆ ನಟಿಸಿರುವುದು (acting) ಇದೆ.

ಶೂಟಿಂಗ್ ಸೆಟ್‌ನಲ್ಲಿ ಎಲ್ಲರ ಮುಂದೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋದು ಅಷ್ಟು ಸುಲಭ ಅಲ್ಲ (Not so easy) ಎಂದು ದಿವ್ಯಾ ಹೇಳಿದ್ದಾರೆ.

ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣ ವೇಳೆ ಸಾಕಷ್ಟು ಜನ ಮುಂದೆ ಇರುತ್ತಾರೆ. ಕ್ಯಾಮರಾ ಇರುತ್ತದೆ. ಆ ಸಮಯದಲ್ಲಿ ಮುತ್ತು ಕೊಟ್ಟರೆ, ವಾಹ್ ಮುತ್ತು ಎಷ್ಟು ಚೆನ್ನಾಗಿದೆ ಎಂದು ಎಂಜಾಯ್ ಮಾಡುವ ರೀತಿ ಇರುವುದಿಲ್ಲ ಎಂದು ದಿವ್ಯಾ ಪಿಳ್ಳೆ ಹೇಳಿ ನಕ್ಕಿದ್ದಾರೆ.

ಇದನ್ನು ಓದಿ : ಫೇಶಿಯಲ್ ಮಾಡಿಸಿದ ಮೂವರು ಮಹಿಳೆಯರಿಗೆ HIV ಸೋಂಕು.!

ಅಂತಹ ಸನ್ನಿವೇಶಗಳಲ್ಲಿ ಸುಮಾರು 75 ಕೆಜಿ ತೂಕದ ವ್ಯಕ್ತಿ ತನ್ನ ಮೇಲೆ ಮಲಗಿದಾಗ, ಕ್ಯಾಮರಾಗೆ ಕಾಣುವಂತೆ ರೊಮ್ಯಾಂಟಿಕ್ ಆಗಿ ಎಕ್ಸ್‌ಪ್ರೆಷನ್ಸ್ ಕೊಡಬೇಕು. ಅದು ಎಷ್ಟು ಕಷ್ಟವಾಗಿರುತ್ತದೆ ಎಂದು ಊಹಿಸಿ (imagine) ಎಂದಿದ್ದಾರೆ.

ಆ ದೃಶ್ಯದ ಬಗ್ಗೆ ತುಂಬಾ ವರ್ಕ್ ಔಟ್ ಮಾಡಬೇಕು. ಹೇಗೆ ನಟಿಸಬೇಕು ಎಂಬುದರ ಬಗ್ಗೆ ಸಹ ನಟನ ಜೊತೆ ಚರ್ಚಿಸಬೇಕು. ಆಗ ಮಾತ್ರ ಕ್ಯಾಮರಾ ಮುಂದೆ ನಟಿಸಲು ಸಾಧ್ಯ. ಕಸಿವಿಸಿ ಎನಿಸಿದರೂ ಅದನ್ನು ನಾವು ಕ್ಯಾಮರಾ ಮುಂದೆ ತೋರ್ಪಡಿಸುವಂತೆ ಇರುವುದಿಲ್ಲ ಎಂದು ದಿವ್ಯಾ ವಿವರಿಸಿದ್ದಾರೆ.

spot_img
spot_img
spot_img
- Advertisment -spot_img