Saturday, July 27, 2024
spot_img
spot_img
spot_img
spot_img
spot_img
spot_img

Health : ಬೇಗ ನಿದ್ದೆ ಬರಬೇಕಾ? ಮಲಗುವ ಮುಂಚೆ ಇವುಗಳಲ್ಲಿ ಯಾವುದಾದರೊಂದು ತಿನ್ನಿ.

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ರಾತ್ರಿ ನಿದ್ದೆ ಬರದಿರುವುದು ಅನೇಕ ಜನರ ಸಾಮಾನ್ಯ ಸಮಸ್ಯೆಯಾಗಿದೆ. ದಿನಕ್ಕೆ ಏಳು ಗಂಟೆಗಳಿಗಿಂತ ಕಡಿಮೆ ನಿದ್ರೆ (Sleep less than seven hours) ಮಾಡುವವರು ತಮ್ಮ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ.

ಅಲ್ಲದೇ ನಿದ್ರೆಯ ಕೊರತೆಯು ಮೆದುಳಿನ ಕಾರ್ಯ ಹಾಗೂ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಲಗುವ ಮುನ್ನ ಕೆಲವು ಆಹಾರಗಳನ್ನು ಸೇವಿಸಿದರೆ ಉತ್ತಮ ನಿದ್ರೆ ಬರುತ್ತದೆ

ಇದನ್ನು ಓದಿ : ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಮಹಿಳಾ Constable ; ರೋಚಕ ವಿಡಿಯೋ ವೈರಲ್‌.

1) ಕಿವಿಹಣ್ಣು :
ಪ್ರತಿದಿನ ಕಿವಿ ಹಣ್ಣುಗಳನ್ನು ತಿನ್ನುವುದರಿಂದ ನಿದ್ರೆಯ ಗುಣಮಟ್ಟ (Quality) ಸುಧಾರಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಈ ಹಣ್ಣಿನಲ್ಲಿ ಸ್ಟ್ರಾಂಗ್ ಆ್ಯಂಟಿ ಆಕ್ಸಿಡೆಂಟ್ಸ್ (strong anti oxidant’s) ಇರುವುದರಿಂದ ಇವು ಸೆರೋಟಿನ್ ಲೆವೆಲ್ಸ್ ಅನ್ನು ಹೆಚ್ಚಿಸುತ್ತವೆ. ಅದರೊಂದಿಗೆ ಸುಖವಾದ ನಿದ್ರೆ ಬರುತ್ತದೆ.

2) ಬಾಳೆ ಹಣ್ಣು :
ಬಾಳೆಹಣ್ಣು ತಿನ್ನುವುದು ನೀವು ಚೆನ್ನಾಗಿ ಮಲಗಲು ಸಹಾಯ ಮಾಡುತ್ತದೆ. ಇದರಲ್ಲಿ ನೈಸರ್ಗಿಕ (naturally) ಕಾರ್ಬೋಹೈಡ್ರೇಟ್ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಇರುತ್ತವೆ. ಇವು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಒತ್ತಡವನ್ನು ನಿವಾರಿಸಬಹುದು.

3) ಹಾಲು :
ಮಲಗುವ ಮುನ್ನ ಉಗುರು ಬೆಚ್ಚಗಿನ ಹಾಲಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ತಕ್ಷಣ ನಿದ್ದೆ ಬರುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಪ್ರತಿನಿತ್ಯ ಹಾಲು ಕುಡಿಯುವುದರಿಂದ ನಿದ್ರಾಹೀನತೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಲು ನಿದ್ರೆಯನ್ನು ಉತ್ತೇಜಿಸುವ ಅಂಶಗಳನ್ನು ಹೊಂದಿರುತ್ತದೆ.

4) ಮೊಸರಿನಂತಹ ಪ್ರೋಬಯಾಟಿಕ್ಗಳ ಸೇವನೆ ಹೊಟ್ಟೆಯನ್ನು, ದೇಹವನ್ನು ಆರಾಮದಾಯಕವಾಗಿಸುತ್ತದೆ. ಪ್ರೋಬಯಾಟಿಕ್ಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಇದರ ಜೊತೆಗೆ, ಮೊಸರಿನಲ್ಲಿರುವ ಅಮೈನೋ ಆಮ್ಲಗಳು ಮೆಲಟೋನಿನ್ ಮತ್ತು ಸಿರೊಟೋನಿನ್ ಅನ್ನು ಬಿಡುಗಡೆ (release) ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಚನ್ನಾಗಿ ನಿದ್ದೆ ಬರುತ್ತೆ.

ಇದನ್ನು ಓದಿ : Health : ಪ್ರತಿಯೊಬ್ಬರು ತಿಳಿಯಲೇಬೇಕಾಗಿರುವ ಹೃದಯಾಘಾತದ ಮುನ್ಸೂಚನೆಗಳಿವು.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img