Thursday, September 19, 2024
spot_img
spot_img
spot_img
spot_img
spot_img
spot_img
spot_img

ತನ್ನ ಸ್ವಂತ ಮಾವನ 300 ಕೋಟಿ ರೂ. ಆಸ್ತಿ ಲಪಟಾಯಿಸಲು ಸೊಸೆ ಮಾಡಿದ್ದೇನು ಗೊತ್ತೇ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿಗೆ ನಮಗೆ ಸಂಬಂಧಗಳು ಬೇಡ, ಆಸ್ತಿ ಮಾತ್ರ ಸಾಕು ಎನ್ನುವವರೇ ಹೆಚ್ಚಾಗಿದ್ದಾರೆ.

300 ಕೋಟಿ ರೂ. ಆಸ್ತಿ ಮೇಲೆ ಕಣ್ಣಿಟ್ಟ ಸೊಸೆಯೊಬ್ಬಳು ತನ್ನ ಮಾವನ ಎನ್ನುವುದನ್ನು ಮರೆತು ಕೊಲೆಗಾಗಿ ಸುಪಾರಿ ನೀಡಿದ್ದಾಳೆ. ಮಾವನ ಕೊಲೆ ಮಾಡಲು ಹಂತಕರಿಗೆ ಕೊಟ್ಟದ್ದು ಬರೋಬ್ಬರಿ ಒಂದು ಕೋಟಿ ರೂ. ನೀಡಿರುವುದಾಗಿ ತಿಳಿದುಬಂದಿದೆ.

ಇಲ್ಲಿ ಸೊಸೆಯ ಸಂಚಿಗೆ ಕೊಲೆಯಾದ ದುರ್ದೈವಿ ಮಾವನನ್ನು ಪುರುಷೋತ್ತಮ್ ಪುಟ್ಟೇವಾರ್ (82 ವರ್ಷ) ಎಂದು ಗೊತ್ತಾಗಿದೆ. ಅವರು ಮೇ22ರಂದು ನಾಗ್ಪುರದ ಬಾಲಾಜಿ ನಗರಿಯಲ್ಲಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ಸಾವನಪ್ಪಿದ್ದರು.

ಇದನ್ನೂ ಓದಿ : ಯುವ ಜೋಡಿಯಿಂದ ರೈಲಿನಲ್ಲಿ ಖುಲ್ಲಂ ಖುಲ್ಲಾ ರೋಮ್ಯಾನ್ಸ್ ; ದಂಗಾದ ಪ್ರಯಾಣಿಕರು.!

ಪ್ರಕರಣದ ಆರಂಭದಲ್ಲಿ ಕಾರು ಚಾಲಕನಿಗೆ ಜಾಮೀನು ನೀಡಿ ಬಿಟ್ಟುಬಿಡಲಾಗಿತ್ತು, ಆದರೆ ತನಿಖೆಯ ವೇಳೆ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳಿಂದ ಇದು ಕೊಲೆ ಪ್ರಕರಣ ಎಂಬುದು ತಿಳಿದುಬಂದಿದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 6 ರಂದು ಆರೋಪಿ ಅರ್ಚನಾ ಮನೀಶ್ ಪುಟ್ಟೇವಾರ್(53) ಹಾಗೂ ಆಕೆಯ ಸಹಚರರಾದ ಸಾರ್ಥಕ್ ಬಾಗ್ಡೆ ಮತ್ತು ಧರ್ಮಿಕ್ ಅವರನ್ನು ಬಂಧಿಸಲಾಗಿದೆ.

ಈ ಕೊಲೆ ಮಾಡಲು ಆರೋಪಿ ಅರ್ಚನಾ ಸಹ ಆರೋಪಿ ಧರ್ಮಿಕ್ ಅವರಿಗೆ 40,000 ರೂಪಾಯಿ ಖರ್ಚು ಮಾಡಿದ್ದು ಮತ್ತು ಅಪಫಾತ ಮಾಡಲು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಸಾರ್ಥಕ್ ಬಾಗ್ಡೆ ಗೆ 1.20 ಲಕ್ಷ ರೂಪಾಯಿ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ : 10 ನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆ‌ಯಲ್ಲಿ ಉದ್ಯೋಗ ; ತಿಂಗಳಿಗೆ ರೂ. 63,000 ವೇತನ.!

ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಕೊಲೆ ಮತ್ತು ಇತರ ಅಪರಾಧಗಳ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಗೇ ಆರೋಪಿ ಅರ್ಚನಾ ಅವರು ಗಡ್ಚಿರೋಲಿ ಮತ್ತು ಚಂದಾಪುರದಲ್ಲಿ ನಗರ ಯೋಜನೆ ಸಹಾಯಕ ನಿರ್ದೇಶಕಿಯಾಗಿದ್ದರು ಎಂಬುದಾಗಿ ತಿಳಿದುಬಂದಿದೆ. ಹಾಗೇ ಸಹ ಆರೋಪಿ ಸಾರ್ಥಕ್ ಬಾಗ್ಡೆ ಆರೋಪಿ ಅರ್ಚನಾಳ ಪತಿಯ ಕಾರು ಚಾಲಕ ಎಂಬುದಾಗಿ ತಿಳಿದುಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img