Saturday, July 13, 2024
spot_img
spot_img
spot_img
spot_img
spot_img
spot_img

SBI : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 150 ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಸ್ಟೇಟ್ ಬ್ಯಾಂಕ್ ಆಫ್ (SBI) ಇಂಡಿಯಾದಲ್ಲಿ ಟ್ರೇಡ್ ಫೈನಾನ್ಸ್ ಆಫೀಸರ್ಸ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಅಧಿಸೂಚನೆ ಪ್ರಕಾರ ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ವಯೋಮಾನ ಪ್ರಕ್ರಿಯೆ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : 10 ನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆ‌ಯಲ್ಲಿ ಉದ್ಯೋಗ ; ತಿಂಗಳಿಗೆ ರೂ. 63,000 ವೇತನ.!

ಹುದ್ದೆಗಳ ಮಾಹಿತಿ : ಇಲಾಖೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

  • ಹುದ್ದೆಯ ಹೆಸರು : ಟ್ರೇಡ್ ಫೈನಾನ್ಸ್ ಆಫೀಸರ್.
  • ಖಾಲಿ ಇರುವ ಹುದ್ದೆಗಳು : 150.
  • ಉದ್ಯೋಗ ಸ್ಥಳ : ದೇಶಾಧ್ಯಂತ
  • ವೇತನ ಶ್ರೇಣಿ : ಅಧಿ ಸೂಚನೆಯ ಪ್ರಕಾರ.
  • ಅರ್ಜಿ ಸಲ್ಲಿಸುವ ಬಗೆ : Online.

ಶೈಕ್ಷಣಿಕ ಅರ್ಹತೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.

ವಯೋಮಾನ : ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠವಾಗಿ 23 ವರ್ಷ ಹಾಗೂ ಗರಿಷ್ಠವಾಗಿ 32 ವರ್ಷ ವಯೋಮಿತಿಯನ್ನು ಮೀರಿರಬಾರದು.

ಅರ್ಜಿ ಶುಲ್ಕ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಪ್ರವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಬೇಕು.

  • EWS ಅಭ್ಯರ್ಥಿಗಳು : ರೂ.750/-
  • SC/ST,OBC ಮತ್ತು PWBD ಅಭ್ಯರ್ಥಿಗಳಿಗೆ ಶುಲ್ಕದ ವಿನಾಯಿತಿ ಮಾಡಲಾಗಿದೆ.

ಇದನ್ನು ಓದಿ : Health : ಕೆಟ್ಟ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡುತ್ತೆ ಈ ಹಣ್ಣು.!

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ : ಜೂನ್‌ 7, 2024.
  • ಅರ್ಜಿ ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜೂನ್‌ 27, 2024.

ಆಯ್ಕೆಯ ವಿಧಾನ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂದರ್ಶನ ಮಾಡುವ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವೇತನ ಶ್ರೇಣಿ : ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ, ರೂ.48,170 ರಿಂದ ರೂ.69,810 ರ ವರೆಗೆ ವೇತನವನ್ನು ನೀಡಲಾಗುತ್ತದೆ.

ಪ್ರಮುಖ ಲಿಂಕ್ ಗಳು :

Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.

spot_img
spot_img
- Advertisment -spot_img