Saturday, July 13, 2024
spot_img
spot_img
spot_img
spot_img
spot_img
spot_img

ಯುವ ಜೋಡಿಯಿಂದ ರೈಲಿನಲ್ಲಿ ಖುಲ್ಲಂ ಖುಲ್ಲಾ ರೋಮ್ಯಾನ್ಸ್ ; ದಂಗಾದ ಪ್ರಯಾಣಿಕರು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಕಾಲದಲ್ಲಿ ಪ್ರಣಯ ಜೋಡಿಗಳು ಹೆಚ್ಚಾಗಿದ್ದು, ನಾಚಿಕೆಯಿಲ್ಲದೇ ಎಲ್ಲೆಂದರಲ್ಲಿ ಅಶ್ಲೀಲವಾಗಿ ವರ್ತಿಸುತ್ತಾರೆ.

ಸಾರ್ವಜನಿಕ ಸ್ಥಳಗಳು, ಮೆಟ್ರೋ, ಬಸ್ ಹೀಗೆ ಹಲವೆಡೆ ಜೋಡಿಗಳ ರೋಮ್ಯಾನ್ಸ್, ಚುಂಬನ ದೃಶ್ಯಗಳು ಈಗಾಗಲೇ ವೈರಲ್ (viral) ಆಗಿದೆ. ಇದರ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ. ದೆಹಲಿ ಹಾಗೂ ಬೆಂಗಳೂರು ಮೆಟ್ರೋದಲ್ಲೂ ಈ ರೀತಿಯ ಘಟನೆಗಳು ನಡೆದಿವೆ.

ಇದನ್ನು ಓದಿ : 10 ನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆ‌ಯಲ್ಲಿ ಉದ್ಯೋಗ ; ತಿಂಗಳಿಗೆ ರೂ. 63,000 ವೇತನ.!

ಸದ್ಯ ರೈಲ್ವೆಯಲ್ಲಿ ಜೋಡಿಯ ರೊಮ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಸ್ಲೀಪರ್ ಕೋಚ್‌ನಲ್ಲಿ ಮಲಗಿದ ಈ ಜೋಡಿ ಸಹ ಪ್ರಯಾಣಿಕರ ಮುಂದೆ ಚುಂಬಿಸಲು (kissing) ಆರಂಭಿಸಿದೆ. ಟಿಕೆಟ್ ಚೆಕರ್ ಬಂದು ವಾರ್ನಿಂಗ್ ನೀಡಿದರೂ ಈ ಜೋಡಿ ಕ್ಯಾರೇ ಎನ್ನದೇ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು.

ಭಾರತೀಯ ರೈಲ್ವೆಯಲ್ಲಿ ನಡೆದ ಈ ರೊಮ್ಯಾನ್ಸ್ ವಿಡಿಯೋಗೆ ವೈರಲ್ ಆಗಿದ್ದು, ಭಾರಿ ಆಕ್ರೋಶ ಕೇಳಿಬರುತ್ತಿದೆ.

ಸ್ಲೀಪರ್ ಕೋಚ್ (sleeper coach) ಬುಕ್ ಮಾಡಿದ ಯುವಕ ಹಾಗೂ ಯುವತಿ ನೇರವಾಗಿ ತಮ್ಮ ಕೆಲಸ ಆರಂಭಿಸಿದ್ದಾರೆ. ಒಬ್ಬರು ಮಲಗುವ ಸ್ಲೀಪಿಂಗ್ ಸೀಟಿನಲ್ಲಿ ಇಬ್ಬರು ಮಲಗಿದ್ದಾರೆ. ಸ್ಲೀಪರ್ ಸೀಟನ್ನೇ ಬೆಡ್ ರೂಂ ಅಂತ ತಿಳಿದಿರುವ ಈ ಲಜ್ಜೆಗೆಟ್ಟ ಜೋಡಿ, ಒಬ್ಬರಿಗೊಬ್ಬರು ಅಂಟಿಕೊಂಡು, ಮುದ್ದಾಡುತ್ತಾ, ಮೈಮೇಲೆ ಎಳೆದಾಡುತ್ತಾ ರೋಮ್ಯಾನ್ಸ್ ಶುರು ಮಾಡಿದ್ದಾರೆ.

ಇದನ್ನು ಓದಿ : Health : ಕೆಟ್ಟ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡುತ್ತೆ ಈ ಹಣ್ಣು.!

ಇವರ ಹುಚ್ಚಾಟ ಮಕ್ಕಳು, ಮಹಿಳೆಯರು ಸೇರಿದಂತೆ ಸಹ ಪ್ರಯಾಣಿಕರಿಗೆ ಮುಜುಗರವಾಗಿದೆ. ಈ ಕುರಿತು ಟಿಕೆಟ್ ಪರಿಶೀಲಕರಿಗೆ ಮಾಹಿತಿ ನೀಡಿದ್ದಾರೆ.

ಟಿಕೆಟ್ ಚೆಕ್ಕರ್ ಆಗಮಿಸಿ ಜೋಡಿಗೆ ವಾರ್ನಿಂಗ್ ನೀಡಿದರೂ ಕ್ಯಾರೆ ಎಂದಿಲ್ಲ. ಇವರ ರೋಮ್ಯಾನ್ಸ್ ಮುಂದುವರಿದಿದೆ. ತಬ್ಬಿ ಮುದ್ದಾಡಿದ ಈ ಜೋಡಿಯ ರೋಮ್ಯಾನ್ಸ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು HasnaZarurihai ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಓಯೋ ಸೌಲಭ್ಯವು ಈಗ ಭಾರತೀಯ ರೈಲ್ವಯಲ್ಲಿಯೂ ಲಭ್ಯವಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋ ನೋಡಿದ ಹಲವರು ಆಕ್ರೋಶ ಹೊರಹಾಕಿದ್ದಾರೆ. ಈ ರೀತಿಯಾದರೆ ರೈಲಿನಲ್ಲಿ ಪ್ರಯಾಣಿಸುವುದು ಹೇಗೆ.? ಹೆಣ್ಣು ಮಕ್ಕಳನ್ನು ಯಾವ ಸುರಕ್ಷತೆಯ ಆಧಾರದ ಮೇಲೆ ರೈಲಿನಲ್ಲಿ ಕಳುಹಿಸಲು ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ.

spot_img
spot_img
- Advertisment -spot_img