ಜನಸ್ಪಂದನ ನ್ಯೂಸ್, ಡೆಸ್ಕ್ : ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿಗೆ 27 ಜನರು ಮೃತಪಟ್ಟ ಘಟನೆ ಜಮ್ಮು- ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ ನಡೆದಿದೆ.
ಇದರಲ್ಲಿ ಕರ್ನಾಟಕದ ಶಿವಮೊಗ್ಗದ ವಿಜಯನಗರ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಎಂಬುವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!
ಇನ್ನೂ ಕಳೆದ 30 ವರ್ಷಗಳಲ್ಲಿ ಇದು ಭೀಕರ ದಾಳಿ ಎನ್ನಲಾಗಿದ್ದು, ಉಗ್ರರ ಗುಂಡಿನ ದಾಳಿಗೆ (Terrorist shooting attack) ಬಲಿಯಾದ ಪ್ರವಾಸಿಗರ ಸಂಖ್ಯೆ 27ಕ್ಕೂ ಹೆಚ್ಚಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಸ್ಥಳಕ್ಕೆ CRPF ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ : Real Hero : ವಿದ್ಯುತ್ ಶಾಕ್ನಿಂದ ಬಾಲಕನನ್ನು ರಕ್ಷಿಸಿದ ಯುವಕ, ವಿಡಿಯೋ ವೈರಲ್.!
ಈ ದಾಳಿಯನ್ನು ನಡೆಸಿದ ಆರರಿಂದ ಏಳು ಭಯೋತ್ಪಾದಕರು ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಇದರಿಂದ ಸ್ಥಳೀಯರು ಅವರನ್ನು ಭದ್ರತಾ ಸಿಬ್ಬಂದಿ ಎಂದು ಭಾವಿಸಿ ಯಾವುದೇ ಅನುಮಾನ ವ್ಯಕ್ತಪಡಿಸಲಿಲ್ಲ.
ಹಿಂದಿನ ಸುದ್ದಿ : Video : ಶ್ರೀಕೃಷ್ಣ ದೇವರಾಯನ ಸಮಾಧಿಯ ಮೇಲೆ ಮಾಂಸ ಕಟ್ ; ಭಾರೀ ಆಕ್ರೋಶ.!
ಜನಸ್ಪಂದನ ನ್ಯೂಸ್, ಗಂಗಾವತಿ : ಕನ್ನಡ ರಾಜ್ಯ ರಮಾರಮಣ ಎಂದೇ ಬಿರುದಾಂಕಿತ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಯಾಗಿ ಮೆರೆದಿದ್ದ ಶ್ರೀಕೃಷ್ಣ ದೇವರಾಯನ ಸಮಾಧಿಯ ಮೇಲೆ ಮಾಂಸ ಕಟ್ ಮಾಡಿ ಅಪಚಾರ ಎಸಗಿದ ಘಟನೆ ನಡೆದಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಘಟನೆಯನ್ನು ಖಂಡಿಸಿ ತಮ್ಮ “X” ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಘಟನೆಯ ಬಗ್ಗೆ ಅವರು ಭಾರೀ ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : Real Hero : ವಿದ್ಯುತ್ ಶಾಕ್ನಿಂದ ಬಾಲಕನನ್ನು ರಕ್ಷಿಸಿದ ಯುವಕ, ವಿಡಿಯೋ ವೈರಲ್.!
ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಯಾಗಿ 1509 ರಿಂದ 1529ರವರೆಗೆ ಮಹಾನ್ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿ ಮೆರೆದಿದ್ದ ಈ ಚಕ್ರವರ್ತಿಯ ಸಮಾಧಿಗೆ ಮಾಡಿರುವ ಅಪಮಾನ, ತಕ್ಷಣವೇ ಸಮಾಧಿಯನ್ನು ಕ್ಲೀನ್ ಮಾಡಬೇಕೆಂದಿದ್ದಾರೆ.
ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರನಾಗಿದ್ದ ಶ್ರೀ ಕೃಷ್ಣದೇವರಾಯರ ಸಮಾಧಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿಯ ತಟದಲ್ಲಿದೆ.
ಇದನ್ನು ಓದಿ : ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್
ಇಂತಹ ಮಹಾನ್ ವ್ಯಕ್ತಿಯ ಸಮಾಧಿಯ ಈ ಸ್ಥಳವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಪರಿವರ್ತನೆ ಮಾಡಿದ್ದು ಕೃಷ್ಣದೇವರಾಯರಿಗೆ ಮಾಡಿದ ಅಪಮಾನ.
ಅನೇಕ ಹಿಂದೂ ದೇವಾಲಯಗಳನ್ನು ಕೆಡವಿ ದೇಶದ ಸಂಪತ್ತು ದೋಚಿದ ಔರಂಗಜೇಬನ ಸಮಾಧಿಯನ್ನು ಭಾರತೀಯ ಪುರಾತತ್ವ ಇಲಾಖೆ ರಕ್ಷಣೆ ಮಾಡುತ್ತದೆ. ಆದರೆ, ಇಂತಹ ಮಹಾ ಪರಾಕ್ರಮಿ,ಕಲೆ ಸಾಹಿತ್ಯ ಪೋಷಕ ದೇವರಾಯರ ಸಮಾಧಿಗೆ ಯಾಕೆ ನಿರ್ಲಕ್ಷ್ಯ.?
ಇದನ್ನು ಓದಿ : Ex ಲವರ್‌ನಿಂದ ಬ್ಲ್ಯಾಕ್‌ಮೇಲ್ ; ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ.!
ಈ ಘಟನೆ ಕನ್ನಡಿಗರಿಗಷ್ಟೇ ಅಲ್ಲ, ರಾಷ್ಟ್ರಕ್ಕೆ ಮಾಡಿದ ಅಪಮಾನ ಮಾಂಸವನ್ನು ಮಾರುವ ಮೂಲಕ ಸ್ಥಳದ ಪಾವಿತ್ರ್ಯ ಹಾಳು ಮಾಡುತ್ತಿರೋ ಜಾಗ ಖಾಲಿ ಮಾಡಲು ಸೂಚಿಸಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಕೂಡಲೇ ಜಾಗ ಖಾಲಿ ಮಾಡಲು ಸೂಚಿಸಬೇಕು ಹಾಗೂ ಇಲ್ಲಿ ನೈರ್ಮಲ್ಯ ಮತ್ತು ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಲಿ. (ಏಜೇನ್ಸಿಸ್)
ವಿಡಿಯೋ ನೋಡಿ :
Meat being sold at the tomb of Shri Krishnadevaraya- South India’s pride🔥🚩
Turning the samadhi of a legendary Hindu emperor into a mutton market..? This is disgraceful😑
CC :- @HKPatilINC @PriyankKharge @ASIGoI please take necessary action🙏🏻pic.twitter.com/EOseEcoTRE
— Akshay Akki ಅಕ್ಷಯ್🇮🇳 (@FollowAkshay1) April 20, 2025