ಜನಸ್ಪಂದನ ನ್ಯೂಸ್, ಡೆಸ್ಕ್ : ವಸಂತ್ ಕುಂಜ್ ಪ್ರದೇಶದ ಪ್ರಮುಖ ಆಶ್ರಮದ ಮುಖ್ಯಸ್ಥ (Swamiji) ನ ಮೇಲೆ ಸುಮಾರು 15 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯದ ಆರೋಪ ಹೊರಸಿದ್ದಾರೆ. ಈ ಪ್ರಕರಣದ ಹಿನ್ನಲೆಯಲ್ಲಿ ಆರೋಪಿ ತಲೆಮರೆಸಿಕೊಂಡಿದ್ದಾರೆ.
ಈ ಹಿನ್ನೆಲೆ, ಆಶ್ರಮದ ಆಡಳಿತವು ಸ್ವಾಮಿ (Swamiji) ಚೈತನ್ಯಾನಂದ ಸರಸ್ವತಿಯನ್ನು ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
LIC : 5 ವರ್ಷ ಹೂಡಿದ್ರೆ ಸಾಕು, ಜೀವನಪರ್ಯಂತ ತಿಂಗಳಿಗೆ 15 ಸಾವಿರ ರೂ. ಲಭ್ಯ.
ಹಿಂದಿನ ಪ್ರಕರಣಗಳು :
ಸ್ವಾಮಿ ಚೈತನ್ಯಾನಂದ, ಅಂದರೆ ಹಿಂದೆ ಸ್ವಾಮಿ ಪಾರ್ಥಸಾರಥಿ ಎಂದು ಕರೆಯಲ್ಪಡುತ್ತಿದ್ದ ಈ ಸ್ವಾಮಿಜೀ (Swamiji) ಮೇಲೆ ಇದಕ್ಕೂ ಮೊದಲು ಕೂಡ ಹಲವಾರು ಕ್ರಿಮಿನಲ್ ಆರೋಪ ಹೊರಿಸಲಾಗುತ್ತಿರುವುದು.
- 2009 : ಡಿಫೆನ್ಸ್ ಕಾಲೋನಿಯಲ್ಲಿ ವಂಚನೆ ಮತ್ತು ಕಿರುಕುಳ ಪ್ರಕರಣ ದಾಖಲಾಗಿತ್ತು.
- 2016 : ವಸಂತ್ ಕುಂಜ್‌ನಲ್ಲಿ ಮಹಿಳೆಯೊಬ್ಬರು ಕಿರುಕುಳದ ದೂರು ದಾಖಲಿಸಿದ್ದರು.
Belagavi : ಅಕ್ರಮ ಗೋಮಾಂಸ ಸಾಗಾಟ : ಲಾರಿಗೆ ಬೆಂಕಿ : 2 ಪ್ರಕರಣ ದಾಖಲು.!
ಹೊಸ ಆರೋಪದ ವಿವರಗಳು :
ಈ ವೇಳೆ ಆರೋಪಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರ ಮೇಲೆ Swamiji ದೌರ್ಜನ್ಯ ನಡೆಸಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ವಿಚಾರಣೆಯಲ್ಲಿ 32 ವಿದ್ಯಾರ್ಥಿನಿಯರ ಹೇಳಿಕೆಗಳು ದಾಖಲಾಗಿದ್ದು, ಅವರಲ್ಲಿ 17 ಮಂದಿ ಮೇಲೆ ಸ್ವಾಮೀಜಿ (Swamiji) ಅಶ್ಲೀಲ ಸಂದೇಶಗಳು, ನಿಂದನೀಯ ಭಾಷೆ ಮತ್ತು ಅನಗತ್ಯ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಪೊಲೀಸರು ನಡೆಸುತ್ತಿರುವ ತನಿಖೆ :
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಮತ್ತು ಘಟನೆ ನಡೆದ ಸ್ಥಳ ಮತ್ತು ಆರೋಪಿ (Swamiji) ಯ ವಿಳಾಸಗಳಲ್ಲಿ ದಾಳಿಗಳನ್ನು ನಡೆಸಿದ್ದಾರೆ. ಈ ಸಂದರ್ಭ ಹಾರ್ಡ್ ಡಿಸ್ಕ್‌ಗಳು ಮತ್ತು ವಿಡಿಯೋ ರೆಕಾರ್ಡರ್ ಕೂಡ ವಶಪಡಿಸಲಾಗಿದೆ. ಈ ವಸ್ತುಗಳನ್ನು ವಿಧಿವಿಜ್ಞಾನ (forensic) ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಾರಾಷ್ಟ್ರದ ಯವತ್ಮಾಳ ಜಿಲ್ಲೆಯ ಒಂದು ಪಟ್ಟಣದಲ್ಲಿ ನಡೆದ ದಾರುಣ ಘಟನೆಯೊಂದು ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. 12ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಪಾತಕ್ಕೆ ಬಳಸಿದ ಮಾತ್ರೆ (Pill) ಸೇವಿಸಿದ ಬಳಿಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣದ ಹಿನ್ನೆಲೆ ಗಂಭೀರವಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
Belagavi : ಅಕ್ರಮ ಗೋಮಾಂಸ ಸಾಗಾಟ : ಲಾರಿಗೆ ಬೆಂಕಿ : 2 ಪ್ರಕರಣ ದಾಖಲು.!
ಹೇಗೆ ನಡೆದಿದೆ ಘಟನೆ?
ಮೃತ ವಿದ್ಯಾರ್ಥಿನಿ ಸುಮಾರು ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದಳು ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ. ವಿಷಯ ಬಹಿರಂಗವಾದಾಗ, ಕುಟುಂಬದವರು ಕಳಂಕದ ಭಯದಿಂದ ನೇರವಾಗಿ ದೂರು ನೀಡದೆ ನಾಂದೇಡ್‌ನಲ್ಲಿರುವ ವೈದ್ಯರನ್ನು ಸಂಪರ್ಕಿಸಿದರು.
ವೈದ್ಯರು ಗರ್ಭಪಾತಕ್ಕೆ ಬಳಸುವ ಔಷಧಿ (Pill) ನೀಡಿದ್ದಾರೆ. ಆದರೆ ಅವುಗಳನ್ನು ಸೇವಿಸಿದ ಬಳಿಕ ಹುಡುಗಿಯ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ರಕ್ತಸ್ರಾವ ಹೆಚ್ಚಾಗುತ್ತಿದ್ದಂತೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರೂ, ಆದರೆ ಅಲ್ಲಿ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಳು.
Snake : ಹಾವಿನ ಜೊತೆ ಸ್ಟಂಟ್ ಮಾಡಲು ಯತ್ನಿಸಿದ ಯುವಕ : ದಾರುಣ ಅಂತ್ಯದ ವಿಡಿಯೋ.!
ಟ್ಯೂಷನ್ ಶಿಕ್ಷಕನ ವಿರುದ್ಧ ಗಂಭೀರ ಆರೋಪ :
ತನಿಖೆಯಲ್ಲಿ 28 ವರ್ಷದ ಟ್ಯೂಷನ್ ಶಿಕ್ಷಕ ಸಂತೋಷ್ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಪತ್ತೆಯಾಗಿದೆ. ಡಿಸೆಂಬರ್ 2024ರಿಂದ ಮದುವೆಯ ಭರವಸೆ ನೀಡಿ ವಿದ್ಯಾರ್ಥಿನಿಯನ್ನು ಶೋಷಿಸುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರು ನೀಡಿದ್ದಾರೆ. ವಿದ್ಯಾರ್ಥಿನಿ ಸಾವಿಗಿಂತ ಮೊದಲು ನೀಡಿದ ಮಹತ್ವದ ಹೇಳಿಕೆ ಇದೀಗ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದೆ.
ಔಷಧಿ (Pill) ನೀಡಿರುವ ವೈದ್ಯರ ವಿರುದ್ಧವೂ ಕ್ರಮ :
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಗರ್ಭಪಾತ ಔಷಧಿ (Pill) ನೀಡಿದ ವೈದ್ಯರಿಗೆ ಕಾನೂನುಬದ್ಧ ಅನುಮತಿ ಇರಲಿಲ್ಲ. ಇದಾದರೂ ಅವರು ಔಷಧಿ (Pill) ನೀಡಿರುವುದು ಗಂಭೀರ ಕಾನೂನು ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ವೈದ್ಯರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ.
ಹೆಚ್ಚಿದ Uric ಆಮ್ಲದಿಂದ ಬಳಲುತ್ತಿದ್ದೀರಾ? ಈ ಸೂಪರ್ ಫುಡ್ ಸೇವಿಸಿ.!
ಸ್ಥಳೀಯರಲ್ಲಿ ಆಕ್ರೋಶ :
ಈ ದಾರುಣ ಘಟನೆ ನಂತರ ಪಟ್ಟಣದ ಜನತೆ ಆಕ್ರೋಶಗೊಂಡಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಆಗ್ರಹ ಹೆಚ್ಚಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಯಾವುದೇ ಆರೋಪಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.