Wednesday, May 22, 2024
spot_img
spot_img
spot_img
spot_img
spot_img
spot_img

ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಯುವತಿ ಸಾವು ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿಗೆ ಮದುವೆಗೂ ಮೊದಲು ಮೆಹಂದಿ (Mehandi), ಸಂಗೀತ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಹೀಗೆ ಉತ್ತರ ಭಾರತದಲ್ಲಿನ ಮದುವೆಯಲ್ಲಿ ಪ್ರಮುಖವಾಗಿರುವ ಹಲ್ದಿ ಕಾರ್ಯಕ್ರಮದಲ್ಲಿ ಇಡೀ ಕುಟುಂಬಸ್ಥರು, ಆಪ್ತರು (Relatives) ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡುತ್ತಾರೆ.

ಇದನ್ನು ಓದಿ : ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಮಹಿಳಾ Constable ; ರೋಚಕ ವಿಡಿಯೋ ವೈರಲ್‌.

ಹೀಗೆ ಅಕ್ಕನ ಮದುವೆಯ ಹಲ್ದಿ ಸೆರೆಮನಿಯಲ್ಲಿ 18 ವರ್ಷದ ತಂಗಿ ಕೂಡ ಡ್ಯಾನ್ಸ್ ಮಾಡಿದ್ದಾಳೆ. ಈ ವೇಳೆ ಆಕೆ ಹೃದಯಾಘಾತಕ್ಕೆ (heart attack) ತುತ್ತಾಗಿ ಕುಸಿದು ಬಿದ್ದು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮೃತ ಯುವತಿ ರಿಮ್ಶಾ ಎಂದು ವರದಿ ತಿಳಿಸಿದೆ. ರಿಮ್ಶಾಳ ಅಕ್ಕನ ಮದುವೆಗೂ ಮೊದಲು (Before marriage) ಮನೆಯಲ್ಲಿ ಹಲ್ಡಿ ಸೆರಮನಿ ಆಯೋಜಿಸಲಾಗಿದೆ. ಎಲ್ಲಾ ಕುಟುಂಬಸ್ಥರು, ಆಪ್ತರು, ಸ್ಥಳೀಯರು ಬಂದಿದ್ದರು.

ಒಂದೆಡೆ ಅಕ್ಕನಿಗೆ ಹಳದಿ ಹಚ್ಚಿ, ನೀರು ಎರಚಿ ಸಂಭ್ರಮ ಪಡುತ್ತಿದ್ದರೆ, ಮತ್ತೊಂದೆಡೆ ಮ್ಯೂಸಿಕ್ ಹಾಗೂ ಡ್ಯಾನ್ಸ್ ಜೋರಾಗಿತ್ತು.

ಇದನ್ನು ಓದಿ : Health : ರಾತ್ರಿ ಊಟ ಆದ್ಮೇಲೆ ವಾಕಿಂಗ್ ಮಾಡ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

ಅಕ್ಕನ ಮದುವೆ ಕಾರಣ ತಂಗಿ ವಿಶೇಷ ಅಲಂಕಾರದಲ್ಲಿ ಕುಟುಂಬಸ್ಥರೊಂದಿಗೆ ಹೆಜ್ಜೆ ಹಾಕಿದ್ದಳು. ಎಲ್ಲರ ಜೊತೆ ಡ್ಯಾನ್ಸ್ ಮಾಡುತ್ತಿದ್ದ ರಿಮ್ಶಾಗೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡುತ್ತಿದ್ದಂತೆ ಅಸ್ವಸ್ಥಗೊಂಡ ರಿಮ್ಶಾ ದಿಢೀರ್ ಕುಸಿದು ಬಿದ್ದಿದ್ದಾಳೆ (She collapsed).

ಕುಟುಂಬಸ್ಥರು ತಕ್ಷಣವೇ ನೆರವಿಗೆ ಆಗಮಿಸಿದ್ದರು. ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ರಿಮ್ಶಾಳಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ತಪಾಸಣೆ ನಡೆಸಿದ ವೈದ್ಯರು ಯುವತಿ ಕೊನೆಯುಸಿರೆಳೆದಿರುವುದಾಗಿ ಖಚಿತಪಡಿಸಿದ್ದಾರೆ (confirm) ಎಂದು ವರದಿಯಿಂದ ತಿಳಿದು ಬಂದಿದೆ.

spot_img
spot_img
spot_img
- Advertisment -spot_img