ಜನಸ್ಪಂದನ ನ್ಯೂಸ್, ಡೆಸ್ಕ್ : ಯುವತಿಯೋರ್ವಳ ಮೇಲೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಚಲಿಸುತ್ತಿದ್ದ ಆಯಂಬುಲೆನ್ಸ್ (ambulance) ನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆಯ ಬಗ್ಗೆ ವರದಿಯಾಗಿದೆ.
ಬಿಹಾರದ ಗಯಾ ಜಿಲ್ಲೆಯ ಬೋಧ್‌ಗಯಾದಲ್ಲಿ ನಡೆದ ಹೋಂ ಗಾರ್ಡ್ ನೇಮಕಾತಿ ಅಭಿಯಾನದ ವೇಳೆ, ದೈಹಿಕ ಪರೀಕ್ಷೆ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ 26 ವರ್ಷದ ಮಹಿಳಾ ಅಭ್ಯರ್ಥಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಚಿಕಿತ್ಸೆಗಾಗಿ ಸ್ಥಳದಲ್ಲಿದ್ದ ಆಂಬುಲೆನ್ಸ್ (ambulance) ಮೂಲಕ ಯುವತಿಯನ್ನು ಕಳುಹಿಸಿಕೊಡಲಾಗಿದೆ.
ಹೀಗೆ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಚಲಿಸುತ್ತಿದ್ದ ಆಯಂಬುಲೆನ್ಸ್ (ambulance) ನಲ್ಲಿಯೇ ತನ್ನ ಮೇಲೆ 3-4 ಜನರಿಂದ ಸಾಮೂಹಿಕ ಅತ್ಯಾಚಾರದಂತಹ ನಿರ್ಲಜ್ಜ ಕೃತ್ಯ ನಡೆದಿದೆ ಎಂದು ಯುವತಿ ಆರೋಪಿಸಿದ್ದಾರೆ.
ಪೊಲೀಸ್ ಪ್ರಕಾರ, ಜುಲೈ 24ರಂದು ಬೋಧ್‌ಗಯಾ ಪ್ರದೇಶದ ಬಿಹಾರ್ ಮಿಲಿಟರಿ ಪೊಲೀಸ್ ಮೈದಾನದಲ್ಲಿ ಹೋಂ ಗಾರ್ಡ್ ನೇಮಕಾತಿ ಅಭಿಯಾನ ದೈಹಿಕ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷಾ ವೇಳೆ ಪ್ರಜ್ಞೆ ತಪ್ಪಿದ ಯುವತಿಯನ್ನು ಸ್ಥಳದಲ್ಲಿ ಇದ್ದ ಆಯಂಬುಲೆನ್ಸ್ (ambulance) ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.
ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಯುವತಿಗೆ ಭಾಗಶಃ ಪ್ರಜ್ಞೆ ಬಂದಿದೆ. ಆದರೆ ಈ ವೇಳೆ ಚಲಿಸುತ್ತಿದ್ದ ಆಯಂಬ್ಯುಲೆನ್ಸ್ (ambulance) ಒಳಗೆ ಮೂರರಿಂದ ನಾಲ್ಕು ಪುರುಷರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಪೊಲೀಸ್ ಮತ್ತು ಆಸ್ಪತ್ರೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆಯಂಬ್ಯುಲೆನ್ಸ್ (ambulance) ನಲ್ಲಿ ಅತ್ಯಾಚಾರ ಪ್ರಕರಣ ಇಬ್ಬರು ಆರೋಪಿ ಬಂಧನ :
ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಧ್‌ಗಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಶೇಷ ತನಿಖಾ ತಂಡ (SIT) ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈಗಾಗಲೇ ಆಂಬುಲೆನ್ಸ್ ಚಾಲಕ ವಿನಯ್ ಕುಮಾರ್ ಮತ್ತು ಟೆಕ್ನಿಷಿಯನ್ ಅಜಿತ್ ಕುಮಾರ್ ಎಂಬ ಇಬ್ಬರನ್ನು ಬಂಧಿಸಲಾಗಿದ್ದು, ಅವರಿಬ್ಬರು ಸದ್ಯ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಯಲ್ಲಿದ್ದಾರೆ.
ರಾಜಕೀಯ ಪ್ರತಿಕ್ರಿಯೆಗಳು :
ಘಟನೆಯ ವಿರುದ್ಧ ಲೋಕ ಜನಶಕ್ತಿ ಪಕ್ಷದ ಸಂಸದ ಚಿರಾಗ್ ಪಾಸ್ವಾನ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಬಿಹಾರ ಸರ್ಕಾರದ ಕಾನೂನು ಸುವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದ್ದಾರೆ. ಅವರು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಪ್ರತಿಕ್ರಿಯೆಯಲ್ಲಿ, “ಹೆಣ್ಣುಮಕ್ಕಳ ಭದ್ರತೆ ಮೊದಲ ಆದ್ಯತೆ ಆಗಬೇಕು. ಇಂತಹ ಘಟನೆಗಳು ನಮ್ಮ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತವೆ,” ಎಂದು ತಿಳಿಸಿದ್ದಾರೆ.
गया पुलिस की त्वरित एवं बड़ी कार्रवाई, सूचना मिलने के 02 घंटे के अंदर दुष्कर्म के मामले में दो अभियुक्तों को किया गया गिरफ्तार :-@bihar_police@IPRDBihar@gaya_dm pic.twitter.com/coer2LyGJN
— GAYA POLICE (गया (बिहार) पुलिस ) (@GAYAPOLICEBIHAR) July 26, 2025
Female PSI : ಬಿ ರಿಪೋರ್ಟ್‌ಗಾಗಿ ಲಂಚ : ಮಹಿಳಾ ಪಿಎಸ್‌ಐ ಲೋಕಾಯುಕ್ತ ಬಲೆಗೆ.!
ಜನಸ್ಪಂದನ ನ್ಯೂಸ್, ಬೆಂಗಳೂರು : ಗೋವಿಂದಪುರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (Female PSI) ಸಾವಿತ್ರಿ ಬಾಯಿ ಅವರು ಬಿ ರಿಪೋರ್ಟ್ ಸಲ್ಲಿಸಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.
ರೂ.1.25 ಲಕ್ಷಕ್ಕೆ ಬೇಡಿಕೆ ; ಹಣದೊಂದಿಗೆ ಬಂಧನ :
ಹೆಚ್‌ಬಿಆರ್ ಲೇಔಟ್ ನಿವಾಸಿ ಮೊಹಮದ್ ಯೂನಸ್ ವಿರುದ್ಧ ದಾಖಲಾದ ಪ್ರಕರಣದಲ್ಲಿ B ರಿಪೋರ್ಟ್ ಸಲ್ಲಿಸುವ ಸಲುವಾಗಿ ಮಹಿಳಾ ಪಿಎಸ್‌ಐ (Female PSI) ಸಾವಿತ್ರಿ ಬಾಯಿ ಅವರು ರೂ.1.25 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ದೂರುದಾರನಿಂದ ಹಣ ಸ್ವೀಕರಿಸುತ್ತಿದ್ದ ವೇಳೆ, DSP ಪೂವಯ್ಯ ನೇತೃತ್ವದ ಲೋಕಾಯುಕ್ತ ತಂಡ ಮಹಿಳಾ ಪಿಎಸ್‌ಐ (Female PSI) ಅವರನ್ನು ಹಣದ ಸಮೇತ ಬಂಧಿಸಿದೆ. ಪ್ರಸ್ತುತ ಅಧಿಕಾರಿಯ ವಿಚಾರಣೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ಮಾಹಿತಿ ನೀಡಿವೆ.
ಪ್ರಕರಣದ ಹಿಂದಿನ ಹಿನ್ನೆಲೆ ಏನು?
ಮದುವೆಯಾದರೂ ಕೂಡ ವಿಷಯ ತಿಳಿಸದೇ ಆರೋಪಿ ಮೊಹಮದ್ ಯೂನಸ್ ಮತ್ತೊಬ್ಬ ಯುವತಿಯ ಜೊತೆ ಸಹಜೀವನ ನಡೆಸುತ್ತಿದ್ದರು. ವಿಷಯ ಬೆಳಕಿಗೆ ಬಂದಾಗ ಯುವತಿ ಅವರನ್ನು ಪ್ರಶ್ನಿಸಲು ಹೋಗಿದ್ದಾಗ ಗಲಾಟೆ ಉಂಟಾಗಿ ಆಕೆಯ ಮೇಲೆ ಹಲ್ಲೆ ನಡೆದಿತ್ತು.
ಮೇ 5ರಂದು ಆರೋಪಿಯು ಯುವತಿಯನ್ನು ಮತ್ತೆ ಭೇಟಿಯಾಗಿ ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದ. ಆಕೆ ನಿರಾಕರಿಸಿದಾಗ ಮತ್ತೊಮ್ಮೆ ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಲೋಕಾಯುಕ್ತದಿಂದ ಕಟ್ಟುನಿಟ್ಟಿನ ಕ್ರಮ :
ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಮಹಿಳಾ ಪಿಎಸ್‌ಐ (Female PSI) ಸಾವಿತ್ರಿ ಬಾಯಿ ಹಣ (ಲಂಚ) ಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಮೇರೆಗೆ ಲೋಕಾಯುಕ್ತವು ಕೈಚಳಕ ತೋರಿಸಿದ್ದು, ಇದೀಗ ಹಣದೊಂದಿಗೆ ಅಧಿಕಾರಿ (Female PSI) ಯನ್ನು ಬಂಧಿಸಿದೆ. ಸಲ್ಲದೆ ಆರೋಪದ ಬಗ್ಗೆ ಮುಂದಿನ ತನಿಖೆ ಮುಂದುವರೆದಿದೆ.