ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಜನರು ಲೈಕ್ಸ್ ಮತ್ತು ವ್ಯೂವ್ಸ್‌ಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಏನೇನೊ ಮಾಡಲು ಹೋಗ್ತಾರೆ. ಅದೇ ರೀತಿ ಯುವಕನೋರ್ವ ಅಸಾಮಾನ್ಯವಾದ ಪ್ರಯೋಗಗಳನ್ನು ಮಾಡುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವಕನೋರ್ವ ಹೊಸ ವಾಷಿಂಗ್ ಮಷಿನ್ ಸಾಮರ್ಥ್ಯವನ್ನು ಪರೀಕ್ಷಿಸಲು (test the capacity of a new washing machine) ಬಟ್ಟೆ ಹಾಕುವ ಬದಲು ಕಲ್ಲುಗಳನ್ನು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ : ಟ್ರಂಕ್ನಲ್ಲಿ ಪತ್ನಿಯ Lover ; ಬೆತ್ತಲೆಯಾಗಿ ಸಿಕ್ಕಿಬಿದ್ದವನನ್ನು ಪತಿ ಮಾಡಿದ್ದೇನು ಗೊತ್ತಾ.?
ಆತ ವಾಷಿಂಗ್ ಮಷಿನ್ ಅನ್ನು ಬಟ್ಟೆಗಳಿಂದ ಲೋಡ್ ಮಾಡುವ ಬದಲು, ಅದರೊಳಗೆ ದೊಡ್ಡ ಕಲ್ಲನ್ನು ಇರಿಸಿ ಮಷಿನ್ ಆನ್ ಮಾಡಿದ್ದಾನೆ. ಮೆಷಿನ್ ಆನ್ ಆಗುತ್ತಿದ್ದಂತೆ ಅದು ಅಲುಗಾಡಲು ಶುರುಮಾಡಿದೆ.
ಕಲ್ಲು ಒಳಗೆ ತಿರುಗುತ್ತಿದ್ದಂತೆ ವಾಷಿಂಗ್ ಮಷಿನ್ ಯದ್ವಾತದ್ವಾ ಚಲಿಸಿದೆ. ಪರಿಣಾಮ ಯಂತ್ರದ ಭಾಗಗಳು ಒಂದೊಂದಾಗಿ ಒಡೆದು ಸಂಪೂರ್ಣವಾಗಿ ಹಾಳಾಗಿದೆ. ಯಂತ್ರದ ಡ್ರಮ್ ಕೂಡ ಬೇರ್ಪಟ್ಟಿರುವುದನ್ನು (Machine drum separator) ವಿಡಿಯೋದಲ್ಲಿ ನೋಡಬಹುದು.
ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!
ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಕೆಲವರು ಒಂದು ಒಳ್ಳೆಯ ಉಪಕರಣವನ್ನು ಹಾಳು ಮಾಡಿದ್ದಕ್ಕಾಗಿ ಯುವಕನಿಗೆ ಛೀಮಾರಿ ಹಾಕಿದ್ದಾರೆ. ಇನ್ನೂ ಕೆಲವರು ಮಷಿನ್‌ನ ಆತ್ಮವು ದೇಹವನ್ನು ಬಿಟ್ಟು ಹೊರಟು ಹೋಯಿತು ಎಂದು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ಈ ವಿಡಿಯೋದಿಂದ ತಿಳಿಯಬಹುದು.
ಹಿಂದಿನ ಸುದ್ದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : Mobile ಕಸೆದುಕೊಂಡ ಹಿನ್ನಲೆಯಲ್ಲಿ ಅಧ್ಯಾಪಕಿಯನ್ನು ವಿದ್ಯಾರ್ಥಿನಿಯೋರ್ವಳು ಚಪ್ಪಿಲಿಯಿಂದ ಹೊಡೆದ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಗುರು ಮತ್ತು ಶಿಷ್ಯರ ನಡುವಿನ ಸಂಬಂಧವು ಅತ್ಯಂತ ಪ್ರಾಚೀನ ಮತ್ತು ಪವಿತ್ರವಾದದ್ದು. ಇದು ಕೇವಲ ಬೋಧನೆ ಮತ್ತು ಕಲಿಕೆಯ ಸಂಬಂಧವಲ್ಲ, ಬದಲಿಗೆ ಅನ್ಯೋನ್ಯತೆ, ಭಕ್ತಿ ವಿಶ್ವಾಸ ಮತ್ತು ಭಕ್ತಿಯ ಸಂಬಂಧವೂ ಆಗಿದೆ.
ಇದನ್ನು ಓದಿ : Astrology : ಎಪ್ರಿಲ್ 22 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ದೊಡ್ಡವರು ಒಂದು ಮಾತು ಹೇಳಿದ್ದಾರೆ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ. ಹಿಂದೆಲ್ಲಾ ಗುರು ಎಂದರೆ ಭಯ, ಭಕ್ತಿ ಇತ್ತು. ಆದರೆ, ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಅದು ಸಂಪೂರ್ಣ ಕಣ್ಮರೆಯಾಗಿದೆ ಅಂದರೆ ತಪ್ಪಲ್ಲ.
ಇತ್ತೀಚಿನ ದಿನಗಳಲ್ಲಿ ಗುರು-ಶಿಷ್ಯ ಸಂಬಂಧವು ಹಿಂದಿನಂತೆ ಭಾವನಾತ್ಮಕ ಅಥವಾ ಪವಿತ್ರವಾಗಿಲ್ಲ ಎಂಬ ಗ್ರಹಿಕೆ ಬೆಳೆಯುತ್ತಿದೆ, ಆದರೆ ಅದರ ತಾತ್ವಿಕ ಮೌಲ್ಯವು ಇಂದಿಗೂ ಅಸ್ತಿತ್ವದಲ್ಲಿದೆ – ಬದಲಾದ ರೂಪದಲ್ಲಿ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಸದ್ಯ ವಿಡಿಯೋ ಒಂದು ವೈರಲ್ ಆಗಿದ್ದು, ಅದು ಇಂದಿನ ಕೆಲ ವಿದ್ಯಾರ್ಥಿಗಳ ಮನೋಭಾವವನ್ನು ತಿಳಿಸುತ್ತದೆ.
ಇದನ್ನು ಓದಿ : ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಭರ್ಜರಿ ಉದ್ಯೋಗವಕಾಶ : 67000 ರೂ. ಸಂಬಳ.!
ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಮಹಿಳಾ ಉಪನ್ಯಾಸಕಿಯೊಬ್ಬರು ಅದನ್ನು ಗಮನಿಸಿದ್ದಾರೆ. ನಂತರ ವಿದ್ಯಾರ್ಥಿನಿಯನ್ನು ತಡೆದು ಆಕೆಯ ಫೋನ್ ಕಸಿದುಕೊಂಡಿದ್ದಾರೆ.
ಫೋನ್ ಕಸಿದುಕೊಂಡಿದ್ದರಿಂದ ಕೋಪಗೊಂಡ ವಿದ್ಯಾರ್ಥಿನಿ ಸ್ಥಳದಲ್ಲೇ ಉಪನ್ಯಾಸಕಿಯೊಂದಿಗೆ ವಾಗ್ವಾದಕ್ಕಿಳಿದ್ದಾಳೆ. ಈ ವೇಳೆ ವಿದ್ಯಾರ್ಥಿನಿ ಉಪನ್ಯಾಸಕಿಯನ್ನು ತನಗೆ ಫೋನ್ ನೀಡುವಂತೆ ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾಳೆ.
ಇದನ್ನು ಓದಿ : Health : ಕಲ್ಲಂಗಡಿ ತಿಂದ ಬಳಿಕ ಇವುಗಳನ್ನು ಸೇವಿಸಲೇಬೇಡಿ.!
ಅವಾಚ್ಯ ಶಬ್ದಗಳಿಂದ ವಿದ್ಯಾರ್ಥಿನಿ ನಿಂದಿಸಿದ ಪರಿಣಾಮ ಮತ್ತಷ್ಟು ಕೋಪಗೊಂಡ ಉಪನ್ಯಾಸಕಿ ಫೋನ್ ನೀಡಲು ನಿರಾಕರಿಸಿದ್ದಾರೆ. ಆಗ ವಿದ್ಯಾರ್ಥಿನಿ ತನ್ನ ಒಂದು ಚಪ್ಪಲಿಯನ್ನು ತೆಗೆದು ಉಪನ್ಯಾಸಕಿಯ ಮೇಲೆ ಹಲ್ಲೆ ಮಾಡಿದಳು. ಈ ಸಮಯದಲ್ಲಿ, ಉಪನ್ಯಾಸಕಿಯೂ ಆಕೆಯ ವಿರುದ್ಧ ಪ್ರತಿದಾಳಿ ನಡೆಸಿದ್ದಾರೆ.
ವಿದ್ಯಾರ್ಥಿನಿ ಮತ್ತು ಉಪನ್ಯಾಸಕಿ ನಡುವಿನ ಗಲಾಟೆ ಕಂಡು ಸಹ ವಿದ್ಯಾರ್ಥಿಗಳು ಮತ್ತು ಇನ್ನೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಿದರು. ಆ ಸಮಯದಲ್ಲಿ ಅಲ್ಲೇ ಇದ್ದ ಮತ್ತೊಬ್ಬ ವಿದ್ಯಾರ್ಥಿ ಘಟನೆಯನ್ನು ರೆಕಾರ್ಡ್ ಮಾಡಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Real Hero : ವಿದ್ಯುತ್ ಶಾಕ್ನಿಂದ ಬಾಲಕನನ್ನು ರಕ್ಷಿಸಿದ ಯುವಕ, ವಿಡಿಯೋ ವೈರಲ್.!
ಕಾಲೇಜು ಆಡಳಿತ ಮಂಡಳಿ ಇನ್ನೂ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಆದಾಗ್ಯೂ, ನೆಟಿಜನ್‌ಗಳು ಮಾತ್ರ ವಿದ್ಯಾರ್ಥಿನಿಯ ಕ್ರಮವನ್ನು ಟೀಕಿಸುತ್ತಿದ್ದಾರೆ.
రఘు కళాశాలలో టీచర్ విద్యార్థిని మధ్య వాగ్యుద్ధం.. టీచర్ మీద చేయి చేసుకున్న విద్యార్థిని.#RaghuEngineeringCollege #Vizianagaram #Vizag #AndhraPradesh #UANow pic.twitter.com/APzPn1isCK
— ఉత్తరాంధ్ర నౌ! (@UttarandhraNow) April 22, 2025