Friday, September 20, 2024
spot_img
spot_img
spot_img
spot_img
spot_img
spot_img
spot_img

ಫೋನ್‌ನಲ್ಲಿ ಈ ಸೂಚನೆಗಳು ಕಂಡುಬಂದ್ರೆ ನಿಮ್ಮ phone hack ಆಗಿದೆ ಎಂದರ್ಥ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಎಲ್ಲರ ಕೈಯಲ್ಲಿ ಸ್ಮಾರ್ಟ್​ ಫೋನ್ ಗಳು ಇವೆ. ಹಿಂದೆ ಊಟ, ಬಟ್ಟೆ ಮತ್ತು ಮನೆ ಪ್ರಮುಖ ಮೂಲಭೂತ ಅವಶ್ಯಕತೆಗಳಾಗಿದ್ದವು. ಆದರೆ ಇಂದು ಮೊಬೈಲ್ ಕೂಡ ಇದಕ್ಕೆ ಸೇರ್ಪಡೆಯಾಗಿದೆ.

ಆದರೆ ಎಷ್ಟೋ ಜನರಿಗೆ ಹಲವಾರು ಬಾರಿ ತಮ್ಮ ತಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂಬ ಅರಿವೇ ಇರುವುದಿಲ್ಲ. ಆದರೆ ಹ್ಯಾಕರ್‌ಗಳು ಮತ್ತು ಅಪರಾಧಿಗಳು ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದಿಯುತ್ತಾರೆ ಮತ್ತು ಅವರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುವುದು ಇವರ ಗುರಿಯಾಗಿರುತ್ತದೆ.

ಇದನ್ನು ಓದಿ : ಕಾರಿನ ಇಂಜಿನ್ ಲೈಫ್ ದ್ವಿಗುಣವಾಗಬೇಕೆ.? ಸ್ಟಾರ್ಟ್ ಮಾಡುವಾಗ 40 ಸೆಕೆಂಡ್ ಹೀಗೆ ಮಾಡಿ.!

ವಂಚಕರು ಮೊಬೈಲ್ ಬಳಕೆದಾರರಿಗೆ ಬ್ಲ್ಯಾಕ್ ಮೇಲ್ ಮಾಡಿ ಅವರ ವೈಯಕ್ತಿಕ ಡೇಟಾ ಸೋರಿಕೆ ಮಾಡಿ ಹಣ ವಸೂಲಿ ಮಾಡುತ್ತಾರೆ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಈ ಕೆಳಗೆ ಪಟ್ಟಿ ಮಾಡಲಾಗಿರುವ ಸಾಮಾನ್ಯ 3 ಲಕ್ಷಣಗಳು ಕಂಡು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವೆ ಕಂಡುಹಿಡಿಯಬಹುದು.

* ಫೋನ್‌ನಲ್ಲಿ ವಂಚನೆ ಅಪ್ಲಿಕೇಶನ್ ಇದ್ದರೆ ನಿಮ್ಮ ಮೊಬೈಲ್ ಬ್ಯಾಟರಿ ವೇಗವಾಗಿ ಖಾಲಿಯಾಗುವುದು ಹ್ಯಾಕಿಂಗ್‌ನ ಸಂಕೇತವಾಗಿದೆ. ಫೋನ್‌ನ ಬ್ಯಾಟರಿಯು ಸಾಮಾನ್ಯಕ್ಕಿಂತ ವೇಗವಾಗಿ ಖಾಲಿಯಾಗುತ್ತದೆ.

ಇದನ್ನು ಓದಿ : ಅಶ್ಲೀಲ ಕಮೆಂಟ್ ಮಾಡಿದಾತನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೋ Viral.!

ಏಕೆಂದರೆ ಸ್ಕ್ರೀನ್ ಆಫ್ ಆಗುವುದು, ಲೊಕೇಶನ್, ಬ್ಲೂಥೂತ್, ಡೇಟಾ ಅಥವಾ Wi-Fi ಆನ್ ಆಗುವುದು ಈ ರೀತಿ ನಿಮ್ಮ ಡೇಟಾವನ್ನು ಕದಿಯುತ್ತಿರುವಾಗಲೂ ಈ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಕೆಲವು ಸಂದರ್ಭಗಳಲ್ಲಿ ಮೊಬೈಲ್ ಸೆನ್ಸರ್ ಮತ್ತೆ ಮತ್ತೆ ಪತ್ತೆಹಚ್ಚಲು ಪ್ರಾರಂಭಿಸುವುದು ನಿಮ್ಮ ಮೊಬೈಲ್ ಹ್ಯಾಕ್ ಆಗಿರುವ ಸಂಕೇತವಾಗಿದೆ.

* ಅಕೌಂಟ್ ಲಾಗಿನ್ ಬಗ್ಗೆ ಪದೇ ಪದೇ ಮೆಸೇಜ್‌ ಬರುತ್ತಿದ್ದರೂ ಸಹ ಫೋನ್ ಹ್ಯಾಕಿಂಗ್‌ ಆಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ತಕ್ಷಣ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಬೇಕು. ಯಾವುದೇ ಅನುಮಾನಾಸ್ಪದ ಲಾಗಿನ್ ಬಗ್ಗೆ ಮಾಹಿತಿಯನ್ನು ಪಡೆದರೆ ಯಾರಾದರೂ ಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ ಎಂದರ್ಥ.

ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?

ಅನೇಕ ಬಾರಿ ಹ್ಯಾಕರ್‌ಗಳು ಟ್ರೋಜನ್ ಮೆಸೇಜ್‌ಗಳ ಮೂಲಕ ಬಳಕೆದಾರರ ಮೊಬೈಲ್‌ಗಳನ್ನು ಬಲೆಗೆ ಬೀಳಿಸುತ್ತಾರೆ. ಇದಲ್ಲದೆ ಹ್ಯಾಕರ್‌ಗಳು ನಿಮಗೆ ಹತ್ತಿರವಿರುವವರ ಫೋನ್ ಅನ್ನು ಸಹ ಹ್ಯಾಕ್ ಮಾಡಬಹುದು. ಇದರಿಂದ ಅವರು ನಿಮ್ಮ ಡೇಟಾವನ್ನು ಕದಿಯಬಹುದು. ಆದ್ದರಿಂದ ಯಾವುದೇ SMS ನಲ್ಲಿ ಬರುವ ಲಿಂಕ್ ಮೇಲೆ ಎರಡು ಬಾರಿ ಪರಿಶೀಲಿಸಿ ಕ್ಲಿಕ್ ಮಾಡಿ.

* ಇಲ್ಲಿಯವರೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ನಿಮ್ಮ ಫೋನ್ ಇದ್ದಕ್ಕಿದ್ದಂತೆ ನಿಧಾನವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುತ್ತಿದೆ ಎಂದು ಹೇಳುತ್ತಾರೆ ಆದರೆ ಇದು ಹ್ಯಾಂಗಿಂಗ್‌ನಿಂದ ಮಾತ್ರವಲ್ಲದೆ ಹ್ಯಾಕಿಂಗ್‌ನಿಂದಲೂ ಸಂಭವಿಸುತ್ತದೆ. ಪದೇ ಪದೇ ಮೊಬೈಲ್ ಸ್ಕ್ರೀನ್ ಫ್ರೀಜ್ ಅಥವಾ ಹ್ಯಾಂಗ್ ಆಗುವುದು ಮತ್ತು ಫೋನ್ ಕ್ರ್ಯಾಶ್ ಆಗುವುದು ಕೂಡ ನಿಮ್ಮ ಫೋನ್ ಹ್ಯಾಕಿಂಗ್ ಆಗಿದೆ ಎಂದು ತಿಳಿಸುತ್ತದೆ.

 

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img