ಜನಸ್ಪಂದನ ನ್ಯೂಸ್, ಡೆಸ್ಕ್ : ಮಕ್ಕಳೆಂದರೆ ಹಾಗೆ, ನಿಷ್ಕಲ್ಮಶ ಮುಗ್ಧ ಮನಸ್ಸು. ಅವರಿಗೆ ಯಾವುದೇ ನಾಟಕ, ಮೋಸ, ವಂಚನೆ ತಿಳಿದಿರೋದಿಲ್ಲ. ಯಾವುದೇ ವಸ್ತುವನ್ನೇ ಆಗ್ಲಿ, ಯಾವುದೇ ವ್ಯಕ್ತಿಯನ್ನೇ ಆಗ್ಲಿ ಅವರು ಮನಸ್ಪೂರ್ವಕವಾಗಿ ಪ್ರೀತಿಸ್ತಾರೆ. ಅದರಲ್ಲಿಯೂ ಗಣೇಶನೆಂದ್ರೆ ಮಕ್ಕಳಿಗೆ ವಿಶೇಷ ಪ್ರೀತಿ.
ಇದನ್ನು ಓದಿ : Health : ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸ್ಪೂನ್ ತುಪ್ಪ ತಿನ್ನಬೇಕು.? ಜಾಸ್ತಿ ತಿಂದ್ರೆ ಏನಾಗುತ್ತೆ ಗೊತ್ತಾ.?
ಆದರೆ ಇಲ್ಲೊಬ್ಬ ಪುಟಾಣಿ ಮಾತ್ರ ಗಣಪತಿಯನ್ನು ಅತಿಯಾಗಿ ಹಚ್ಕೊಂಡಿದ್ದಾಳೆ. ಗಣಪತಿ ವಿಸರ್ಜನೆ ವಿರೋಧಿಸುವ ಆಕೆಯ ಅಳು, ಮುಗ್ದ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಸದ್ಯ ಮಗ್ಧ ಕಂದಮ್ಮನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸೀರೆಯುಟ್ಟು, ತಲೆಗೆ ದೊಡ್ಡ ಕುಂಕುಮ ಇಟ್ಟು ಗಣೇಶನ ಮುಂದೆ ನಿಂತಿರುವ ಪುಟಾಣಿ ಕೈ ಬೀಸ್ತಾ, ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಗಣೇಶ ವಿಸರ್ಜನೆ ಆಕೆಗೆ ಸ್ವಲ್ಪವೂ ಇಷ್ಟ ಇಲ್ಲ. ಗಣೇಶನನ್ನು ನೀರಲ್ಲಿ ಬಿಟ್ಟು ಹೋಗುವುದು ಬೇಡ ಎಂದು ಕೈ ಬೀಸಿ ವಿನಂತಿಸುತ್ತಿದ್ದಾಳೆ..
ಇದನ್ನು ಓದಿ : Belagavi : ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿತ.!
ಅವಳು ಅಳ್ತಿರೋದನ್ನು ನೋಡಿದ್ರೆ ಎಂತವರ ಮನಸ್ಸು ಕೂಡ ಕರಗುತ್ತೆ. ಮೂರ್ತಿಯಾಗಿ ಕುಳಿತಿರುವ ಗಣೇಶ ಕೂಡ ಪ್ರತಿಕ್ರಿಯೆ ನೀಡ್ತಾನೇನೋ ಅನ್ನಿಸುತ್ತೆ. ಆಗಾಗ ಗಣಪತಿ ಮೂರ್ತಿ, ಆತನ ಕಣ್ಣು, ಕೆನ್ನೆಯನ್ನು ಮುಟ್ಟುವ ಹುಡುಗಿ, ಮೂರ್ತಿಯನ್ನು ತಬ್ಬಿಕೊಂಡು ಅಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
Vineeta Singh ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅತ್ಯಂತ ಕಠಿಣ ವಿದಾಯ. ಶೀಘ್ರವೇ ಇವಳ ಅಮ್ಮನ ಜೊತೆ ಗಣಪತಿ ಬರ್ತಾನೆ ಎಂದು, ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ.
ಇದನ್ನು ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ Upload ಮಾಡ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.
ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋ ಲಕ್ಷಾಂತರ ವೀಕ್ಷಣೆಯಾಗಿದೆ. ಸಾವಿರಾರು ಮಂದಿ ಲೈಕ್ ಮಾಡಿದ್ದು, ನೂರಾರು ಪ್ರತಿಕ್ರಿಯೆ ಬಂದಿದೆ.
ಇದು ಮಗುವಿನ ಪ್ರೀತಿ. ಕಲ್ಮಶವಾದ ಪ್ರೀತಿ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ರೆ, ಭಗವಂತ ಗಣೇಶನ ಕೃಪೆ ಈ ಮಗುವಿನ ಮೇಲೆ ಸದಾ ಇರಲಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
The hardest goodbye 🙏
But Ganpati Bappa will soon come with her Maa ☺😇 pic.twitter.com/yzzbfBKnjE— Vineeta Singh 🇮🇳 (@biharigurl) September 18, 2024