Friday, September 20, 2024
spot_img
spot_img
spot_img
spot_img
spot_img
spot_img
spot_img

ಜನ್ಮ ದಿನಾಂಕದ ಪ್ರಕಾರ ನಿಮಗೆ ಯಾವ ಕಲರ್ Lucky ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಜನರು ಯಾವಾಗಲೂ ಅದೃಷ್ಟ (Luck) ಮತ್ತು ದುರಾದೃಷ್ಟದ ಬಗ್ಗೆ ಲೆಕ್ಕ ಹಾಕೇ ಹಾಕುತ್ತಾರೆ. ಹುಟ್ಟಿದ ದಿನ, ನಕ್ಷತ್ರ, ಗಳಿಗೆಯಿಂದ ಹಿಡಿದು ಜನ್ಮದಿನ, ಬಣ್ಣಗಳವರೆಗೂ ಯಶಸ್ಸಿಗೆ ಯಾವುದು ಒಳ್ಳೆಯದು, ಯಾವುದು ಒಳ್ಳೆದಲ್ಲ ಎಂದು ಪರಿಗಣಿಸುತ್ತಲೇ ಮುಂದುವರೆಯುತ್ತಾರೆ.

ಇನ್ನೂ ಪ್ರತಿಯೊಂದು ಸಂಖ್ಯೆಯು ತನ್ನದೇ ಆದ ಅದೃಷ್ಟದ ಬಣ್ಣವನ್ನು ಹೊಂದಿರುತ್ತದೆ. ಹಾಗಾಗಿ ತಮ್ಮ ಅದೃಷ್ಟದ ಸಂಖ್ಯೆಗೆ ಅನುಗುಣವಾಗಿ ಬಣ್ಣವನ್ನು ಬಳಸಿದರೆ ಜೀವನದಲ್ಲಿ ಎಲ್ಲಾ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ ಜೀವನದಲ್ಲಿ ಅನೇಕ ಜನರು ಅದೃಷ್ಟದ ಬಣ್ಣಗಳ ಬಗ್ಗೆ ಯೋಚಿಸುತ್ತಾರೆ.

ಇದನ್ನು ಓದಿ : Health : ಕಣ್ಣಿನಲ್ಲಿ ಈ ಬದಲಾವಣೆಗಳಾಗುತ್ತಿವೆಯೇ.? ಇವು ಈ ರೋಗದ ಮುನ್ಸೂಚನೆಗಳು..!

ಪ್ರತಿ ಸಂಖ್ಯೆಯು ಒಳಗೊಂಡಿರುವ ಅದೃಷ್ಟದ ಬಣ್ಣಗಳು ಯಾವುವು? ಬಣ್ಣಗಳಿಗಿರುವ ಅರ್ಥವೇನು? ಅಂತಾ ನೋಡೋಣ ಬನ್ನಿ.

ವಿವಿಧ ದಿನಾಂಕಗಳಲ್ಲಿ ಜನಿಸಿದ ಜನರು ತಮ್ಮದೇ ಆದ ಅದೃಷ್ಟದ ಬಣ್ಣಗಳನ್ನು ಹೊಂದಿರುತ್ತಾರೆ. ಒಬ್ಬರು ಅವರ ಜನ್ಮ ದಿನಾಂಕದ ಆಧಾರದ ಮೇಲೆ ಅವರ ಅದೃಷ್ಟದ ಬಣ್ಣವನ್ನು ಲೆಕ್ಕ ಹಾಕಬಹುದು.

ಯಾವುದೇ ತಿಂಗಳ ದಿನಾಂಕ 1, 10, 19 ಮತ್ತು 28 ರಂದು ಜನಿಸಿದ ಜನರಿಗೆ ಕಿತ್ತಳೆ ಅಥವಾ ಕೆಂಪು ಬಣ್ಣ ಲಕ್‌ ತರುತ್ತದೆ.

ಯಾವುದೇ ತಿಂಗಳ ದಿನಾಂಕ 2, 11, 20 ಮತ್ತು 29 ರಂದು ಜನಿಸಿದ ಜನರು ಅದೃಷ್ಟಕ್ಕಾಗಿ ಬಿಳಿ ಬಣ್ಣವನ್ನು ಬಳಸಬೇಕು.

ಯಾವುದೇ ತಿಂಗಳ ದಿನಾಂಕ 1, 12, 21 ಮತ್ತು 30 ರಂದು ಜನಿಸಿದ ಜನರಿಗೆ ಹಳದಿ ಬಣ್ಣ ಅದೃಷ್ಟದ ಬಣ್ಣವಾಗಿದೆ.

ಇದನ್ನು ಓದಿ : “ಪುರಿ ಜಗನ್ನಾಥ”ನ “ರತ್ನ ಭಂಡಾರ”ದ ಬಾಗಿಲು ಓಪನ್ ; ಮೂರ್ಛೆ ಬಿದ್ದ Police Officer.!

ಯಾವುದೇ ತಿಂಗಳ ದಿನಾಂಕ 4, 13, 22 ಮತ್ತು 31 ರಂದು ಜನಿಸಿದ ಜನರು ಅದೃಷ್ಟಕ್ಕಾಗಿ ಬೂದು ಅಥವಾ ಬೂದು-ಕಪ್ಪು ಬಣ್ಣವನ್ನು ಬಳಸಬೇಕು.

ಯಾವುದೇ ತಿಂಗಳ ದಿನಾಂಕ 5, 14 ಮತ್ತು 23 ರಂದು ಜನಿಸಿದ ಜನರನ್ನ ಜನರ ಅದೃಷ್ಟ ಸಂಖ್ಯೆ 5. ಬುಧ ಗ್ರಹದಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಅದೃಷ್ಟದ ಬಣ್ಣ ಹಸಿರು.

ಯಾವುದೇ ತಿಂಗಳ ದಿನಾಂಕ 6, 15 ಮತ್ತು 24 ರಂದು ಜನಿಸಿದ ಜನರ ಲಕ್ಕು ಕಲರ್‌ ಬಿಳಿ ಅಥವಾ ತಿಳಿ ನೀಲಿ ಬಣ್ಣ.

ದಿನಾಂಕ 7, 16 ಮತ್ತು 25 ರಂದು ಜನಿಸಿದ ಜನರ ಸಂಖ್ಯೆ 7. ಇದು ನೆಪ್ಚೂನ್ ಗ್ರಹದಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಅದೃಷ್ಟಕ್ಕಾಗಿ ಸ್ಮೋಕಿ ಬ್ರೌನ್ ಅಥವಾ ಬೂದು ಹಸಿರು ಬಣ್ಣವನ್ನು ಬಳಸಬೇಕು.

ಇದನ್ನು ಓದಿ : ಫೋಸ್ಟ್‌ ಆಫೀಸ್‌ ನಲ್ಲಿ 30,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಭರ್ತಿ ; 10ನೇ ತರಗತಿ ಪಾಸಾಗಿದ್ದರೆ ಸಾಕು.!

ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರ ಅದೃಷ್ಟ ಸಂಖ್ಯೆ 8. ಇದು ಶನಿ ಗ್ರಹದಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಅದೃಷ್ಟಕ್ಕಾಗಿ ಕಡು ನೀಲಿ ಅಥವಾ ಕಪ್ಪು ಬಣ್ಣವನ್ನು ಬಳಸಬೇಕು.

ದಿನಾಂಕ 9, 18 ಮತ್ತು 27 ರಂದು ಜನಿಸಿದ ಜನರು ಅದೃಷ್ಟಕ್ಕಾಗಿ ಕೆಂಪು ಬಣ್ಣವನ್ನು ಬಳಸಬೇಕು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img