Friday, June 14, 2024
spot_img
spot_img
spot_img
spot_img
spot_img
spot_img

Health : ಹೊಟ್ಟೆಯ ಬೊಜ್ಜು ಕರಗಿಸಲು ಬೆಳಿಗ್ಗೆ ಏನು ಮಾಡಬೇಕು ಗೊತ್ತೇ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಹೊಟ್ಟೆ ತುಂಬಾ ಬೊಜ್ಜು (fat) ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವುದು ಸಹಜ.

ಇಂದಿನ ಜೀವನ ಶೈಲಿ (life style) ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿ ಕೊಳ್ಳುವುದು. ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ.

ಇದನ್ನು ಓದಿ : ಬ್ರೇಕಪ್ ಮಾಡ್ಕೊಂಡ ಯುವತಿ ; ಖರ್ಚು ಮಾಡಿದ ಹಣ ಪಾವತಿಸುವಂತೆ ಬಿಲ್ ಕಳುಹಿಸಿದ lover.!

ಬೆಳಿಗ್ಗೆ ಈ ಸರಳ ಕೆಲಸಗಳನ್ನು ಮಾಡಿದರೆ ನಿಮ್ಮ ಹೊಟ್ಟೆಯ ಬೊಜ್ಜು ಕರಗುವುದು.

ಪ್ರೋಟಿನ್​ ಹೆಚ್ಚಿರುವ ಆಹಾರ ಸೇವಿಸುವುದು : ಪ್ರೋಟಿನ್​ ಅಗಾಧ ಪ್ರಮಾಣದಲ್ಲಿರುವ ಆಹಾರವು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ (sugar level control) ಇಡಲು ಸಹಕಾರಿ.

ಅಲ್ಲದೇ ಇದು ಕೂಡ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೊಟ್ಟೆಯ ಬಿಳಿ ಭಾಗ, ಪ್ರೋಟೀನ್​ ಸ್ಮೂದಿ , ವಿವಿಧ ಹಣ್ಣುಗಳನ್ನು ಸಹ ಸೇವಿಸಬಹುದು.

ತಿಂಡಿಗೂ ಮುಂಚೆ ವ್ಯಾಯಾಮ ಮಾಡಿ : ಬೆಳಗ್ಗೆ ತಿಂಡಿ ಸೇವನೆ ಮಾಡುವ ಮುಂಚೆ ದೇಹದಂಡನೆ (body punishment) ಮಾಡಬೇಕು. ಇದರಿಂದಲೂ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಫ್ಯಾಟ್​ ಆಕ್ಸಿಡೇಷನ್​ ಉಂಟಾಗುತ್ತದೆ. ಹೊಟ್ಟೆ ಬೊಜ್ಜು ಕರಗಿಸುವ ವ್ಯಾಯಾಮಗಳನ್ನೇ ಮಾಡಿದರೆ ಉತ್ತಮ.

ತೂಕವನ್ನು ಇಳಿಸುವ ಪ್ರಯತ್ನದಲ್ಲಿರುವವರು ಬೆಳಗ್ಗಿನ ಚಟುವಟಿಕೆಗಳ ಗಮನವನ್ನು ಇರಸಲೇಬೇಕು. ಕಡಿಮೆ ಸಮಯದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬೇಕು ಎಂದುಕೊಂಡಿದ್ದರೆ ಕೆಲವು ಬೆಳಗ್ಗಿನ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು (practice).

ವಿಟಮಿನ್​ ಡಿ :
ತೂಕ ಇಳಿಕೆಗೆ ವಿಟಮಿನ್​ ಡಿ ಸಹಕಾರಿಯಾಗಿದೆ. ಬೆಳಗ್ಗೆ ಸ್ವಲ್ಪ ಸಮಯ ಸೂರ್ಯನ ಬೆಳಕು ಮೈ ಮೇಲೆ ಬೀಳುವಂತೆ ನೋಡಿಕೊಳ್ಳಬೇಕು. ಇದರಿಂದ ನೈಸರ್ಗಿಕವಾಗಿಯೇ ವಿಟಮಿನ್​ ಡಿ ಸಿಗುತ್ತದೆ.

ನಿಂಬು-ಜೇನುತುಪ್ಪ : ಬೆಳಗ್ಗೆ ಎದ್ದು ಹಲ್ಲುಜ್ಜಿದ ತಕ್ಷಣ ನೀರು ಕುಡಿಯುವುದರ ಮೂಲಕ ನಿಮ್ಮ ದಿನವನ್ನು ಆರಂಭಿಸಿ.

ಒಂದು ದೊಡ್ಡ ಲೋಟ ಉಗುರು ಬೆಚ್ಚನೆಯ ನೀರಿಗೆ ನಿಂಬು ಹಾಗೂ ಜೇನುತುಪ್ಪ ಮಿಶ್ರಣ (mix) ಮಾಡಿ ಕುಡಿಯಿರಿ. ಈ ಬೆಳಗ್ಗಿನ ಪಾನೀಯವು ನಿಮ್ಮ ಜೀರ್ಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಹಾಗೂ ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಿದೆ.

ಇದನ್ನು ಓದಿ : Special news : ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ.? ಕಾರಣವೇನು ಗೊತ್ತಾ.?

ಧ್ಯಾನ :
ದಿನನಿತ್ಯದ ಜಂಜಾಟ, ಒತ್ತಡಗಳಿಂದ ಕಲುಷಿತಗೊಂಡ ನಿಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತರಲು ಧ್ಯಾನ (meditation) ಉತ್ತಮ ಆಯ್ಕೆಯಾಗಿದೆ. ಮಾನಸಿಕ ಆರೋಗ್ಯ ಸರಿಯಾಗಿದ್ದಾಗ ಮಾತ್ರ ದೈಹಿಕ ಆರೋಗ್ಯ ಸುಧಾರಿಸಲು ಸಾಧ್ಯವಿದೆ. ಬೆಳಗ್ಗೆ ವ್ಯಾಯಾಮ ಮುಗಿಸಿದ ಬಳಿಕ 15-20 ನಿಮಿಷ ಧ್ಯಾನ ಮಾಡಿ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img