Friday, June 14, 2024
spot_img
spot_img
spot_img
spot_img
spot_img
spot_img

1989ನೇ ಇಸವಿಯಲ್ಲಿ ಬಿಯರ್ ಬೆಲೆ ಎಷ್ಟಿತ್ತು ಗೊತ್ತಾ.? ವೈರಲ್ ಆಗ್ತಿದೆ ಹಳೆಯ Bill.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದು ಎಲ್ಲ ವಸ್ತುಗಳ ಬೆಲೆ ದುಬಾರಿಯಾಗಿದೆ (expensive). ಬೆಳಗ್ಗಿನ ತಿಂಡಿ ಮಾಡಬೇಕೆಂದರೂ ನೂರು ಬಾರಿ ಯೋಚಿಸಬೇಕಾದ ಕಾಲ ಇದು.

ಹಿಂದೆ ಆಹಾರ ಪದಾರ್ಥಗಳ ಬೆಲೆ, ಜನರು ಬಳಸುತ್ತಿದ್ದ ವಿವಿಧ ರೀತಿಯ ವಸ್ತುಗಳ ಬಿಲ್​ (bill) ಜಾಲತಾಣಗಳಲ್ಲಿ ವೈರಲ್ ಆಗಿರುತ್ತವೆ. ಇವುಗಳನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುವದಂತೂ ನಿಜ.

ಇದನ್ನು ಓದಿ : ಬಿಯರ್‌ ಖರೀದಿ ಮಾಡ್ತಿದ್ದ ಮಗನನ್ನು ಚಪ್ಪಲಿಯಿಂದ ಮನಸೋಇಚ್ಛೆ ಹೊಡೆದ ತಂದೆ ; Video Viral.!

ಪ್ರಸ್ತುತ ಬೆಲೆ ಏರಿಕೆಯ (Price rise) ಬಗ್ಗೆ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿರುವುದರ ನಡುವೆಯೇ 1989ನೇ ಇಸವಿಗೆ ಸಂಬಂಧಿಸಿದ ಬಿಲ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಮೆಟ್ರೊ ನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಪಟ್ಟಣಗಳಲ್ಲಿಯೂ ಬಿಯರ್ ಪ್ರಿಯರು (beer lover) ಇದ್ದಾರೆ. ಅಲ್ಲದೆ, ಬೇಸಿಗೆಯಲ್ಲಿ ಬಿಯರ್ ಶಾಪ್‌ಗಳಲ್ಲಿ ಜನಜಂಗುಳಿ ಇರುತ್ತದೆ. ಬಿಯರ್ ಮಾರಾಟ ಹೆಚ್ಚಿರುತ್ತದೆ. ಇದರ ನಡುವೆ ಬಿಯರ್​ ಕೊರತೆಯ ಸುದ್ದಿಯೂ ಆಗಾಗ ಕಾಣಿಸಿಕೊಳ್ಳುತ್ತದೆ.

ಅಂದಿನ ಬೆಲೆಗೂ ಇಂದಿನ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದು ಕಡಿಮೆ ಬೆಲೆಯ ಬಿಯರ್ 100 ರಿಂದ 120 ರೂ.ವರೆಗೂ ದೊರೆಯುತ್ತದೆ.

ಯಾಕೆಂದರೆ 30 ವರ್ಷಗಳ ಹಿಂದೆ ಬಿಯರ್​ ಅಷ್ಟೊಂದು ಜನಪ್ರಿಯವಾಗಿರಲಿಲ್ಲ ಮತ್ತು ಬೆಲೆಯೂ ಬಹಳ ಕಡಿಮೆ ಇತ್ತು. ಸೋಶಿಯಲ್ ಮೀಡಿಯಾ ಬಳಕೆದಾರರು 30 ವರ್ಷ ಹಳೆಯದಾದ ಬಿಯರ್ ಬಿಲ್ ಅನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

ಇದನ್ನು ನೋಡಿದರೆ ಒಂದು ಕ್ಷಣ ಅಚ್ಚರಿಗೊಳಗಾಗುವುದು ಸುಳ್ಳಲ್ಲ. ಏಕೆಂದರೆ, ಇಂದು ಬಾರ್‌ಗಳು ಮತ್ತು ರೆಸ್ಟೋರೆಂಟ್​ಗಳಲ್ಲಿ ಮದ್ಯಪಾನ ಸಪ್ಲೈ ಮಾಡುವ ವೇಟರ್‌ಗಳಿಗೆ ಟಿಪ್ಸ್​ ಅಂತಾನೇ 100 ರೂ. ನೀಡುತ್ತಾರೆ. 30 ವರ್ಷಗಳ ಹಿಂದೆ ಬಿಯರ್ ಎಷ್ಟು ಅಗ್ಗವಾಗಿತ್ತು ಎಂದರೆ ಇಂದು ಸಪ್ಲೈಯರ್​ಗೂ ಅದಕ್ಕಿಂತಲೂ ಹೆಚ್ಚಿನ ಟಿಪ್ಸ್ ನೀಡಲಾಗುತ್ತದೆ.

ನಾವು ಮಾತನಾಡುತ್ತಿರುವುದು 1989ನೇ ಇಸವಿಯ ಬಗ್ಗೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಿಯರ್ ಬಿಲ್​ನಲ್ಲಿ ದಾಖಲಾಗಿರುವ ಒಂದು ಬಿಯರ್​ ಬಾಟಲಿಯ ಬೆಲೆ ಕೇವಲ 33 ರೂಪಾಯಿ.

spot_img
spot_img
- Advertisment -spot_img