Wednesday, May 22, 2024
spot_img
spot_img
spot_img
spot_img
spot_img
spot_img

1963ರಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ.? ; ವೈರಲ್ ಆಗ್ತಿದೆ ಹಳೆಯ Bill.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯವು (everyday) ಹಲವಾರು ರೀತಿಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಶೇಷ ಕಾರಣದಿಂದ ಜಾಲತಾಣದಲ್ಲಿ ಏಕಾಏಕಿ (suddenly) ವೈರಲ್​ ಆಗಿಬಿಡುತ್ತವೆ.

ಈ ಹಿಂದೆ ಹೋಟೆಲ್‌ಗಳಲ್ಲಿನ ಆಹಾರ ಪದಾರ್ಥಗಳ ಬೆಲೆ, ಜನರು ಬಳಸುತ್ತಿದ್ದ ವಿವಿಧ ರೀತಿಯ ವಸ್ತುಗಳ ಬಿಲ್​ (bill) ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಟ್ಟಿರಬಹುದು.

ಇದನ್ನು ಓದಿ : Alert : ನೀವು ಮ್ಯಾಗಿ ಪ್ರಿಯರೇ ; ಹಾಗಿದ್ರೆ ಈ ಸುದ್ದಿ ಓದಿ.!

ಇದೀಗ ಬೆಲೆ ಏರಿಕೆಯ (Price rise) ಕುರಿತು ದೇಶದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಸದ್ಯ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ಗರಿಷ್ಠ ಮಟ್ಟದಲ್ಲೇ ಮುಂದುವರೆದಿದೆ.

ಈ ನಡುವೆಯೇ 1963ನೇ ಇಸವಿಗೆ ಸಂಬಂಧಿಸಿದ ಪೆಟ್ರೋಲ್​ ಬಿಲ್ ಫೋಟೋ (petrol bill photo) ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಸುಮಾರು 50 ವರ್ಷಗಳ ಹಿಂದಿನ ಪೆಟ್ರೋಲ್ ಬಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಲ್​ನಲ್ಲಿ ಪೆಟ್ರೋಲ್​ ಬೆಲೆ ನೋಡಿದವರು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.

ಇದನ್ನು ಓದಿ : ವಿಮಾನದಿಂದ ಪ್ಯಾರಾಚೂಟ್​ ಧರಿಸದೆ 12 ಸಾವಿರ ಅಡಿಗಳಿಂದ ಜಿಗಿದ ಯುವಕ ; ಮುಂದೆನಾಯ್ತು Video ನೋಡಿ.!

ವ್ಯಕ್ತಯೋರ್ವ ಭಾರತ್ ಪೆಟ್ರೋಲ್ ಬಂಕ್‌ನಿಂದ 5 ಲೀಟರ್ ಪೆಟ್ರೋಲ್ ಖರೀದಿಸಿದ್ದಾನೆ. 3 ರೂಪಾಯಿ 60 ಪೈಸೆ ಬಿಲ್​ ಮಾಡಲಾಗಿದೆ. ಇದು ಒಂದು ಲೀಟರ್ ಪೆಟ್ರೋಲ್ ಬೆಲೆಯಲ್ಲ ಬದಲಾಗಿ ಐದು ಲೀಟರ್ ಪೆಟ್ರೋಲ್​ ಬೆಲೆ. ಅಂದರೆ ಇಂದು ಲೀಟರ್ ಪೆಟ್ರೋಲ್ ದರ ಕೇವಲ 72 ಪೈಸೆ. ಕನಿಷ್ಠ ಒಂದು ರೂಪಾಯಿ ಕೂಡ ಇಲ್ಲ.

ಇನ್ನೂ ಈ ಬಿಲ್​ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಕೇವಲ ಒಂದು ರೂಪಾಯಿಗೆ ಇಷ್ಟೊಂದು ಪೆಟ್ರೋಲ್ ಸಿಗ್ತಿತ್ತಾ? ಈಗ ಕೈಯಲ್ಲಿ 100 ರೂಪಾಯಿ ಇದ್ದರೂ ಅಷ್ಟೊಂದು ಲಾಭವಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

spot_img
spot_img
spot_img
- Advertisment -spot_img