Sunday, September 8, 2024
spot_img
spot_img
spot_img
spot_img
spot_img
spot_img
spot_img

ಬಾಯಾರಿಕೆಯಾಗದಿದ್ರೂ ನೀರು ಕುಡಿತೀರಾ.? ಹಾಗಿದ್ರೆ ಈ ಸುದ್ದಿ ಓದಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಾಯಾರಿಕೆಯಾಗದಿದ್ರೂ ನಿತ್ಯವೂ ನಿಯಮಿತ ಅವಧಿಯಲ್ಲಿ ನೀರು ಕುಡಿಯುವ ರೂಢಿ ಮಾಡಿಕೊಳ್ಳಬೇಕು. ಅದರಲ್ಲೂ ಬೇಸಿಗೆಯ ಧಗೆಯಲ್ಲಿ ಶರೀರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವನ್ನು ಒದಗಿಸದಿದ್ದರೆ ಅನೇಕ ಕಾಯಿಲೆಗಳು ಬರಬಹುದು.

ನಾವು ಕನಿಷ್ಠವೆಂದರೂ ಪ್ರತಿದಿನವೂ 2 ಲೀಟರ್ ನೀರನ್ನು ಕುಡಿಯಲೇಬೇಕು. ಇದು ಉತ್ತಮ ಆರೋಗ್ಯವನ್ನು ಹೊಂದಲು ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಲು ಸಹಕಾರಿಯಾಗಿದೆ.

ಇದನ್ನು ಓದಿ : ಕಾಲಿನಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತಿವೆಯೇ ; ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?

ಬಾಯಾರಿಕೆಯಾಗದಿದ್ರೂ ನೀರನ್ನು ಹೆಚ್ಚಾಗಿ ಯಾಕೆ ಕುಡಿಯಬೇಕು.? ಎಂಬುದನ್ನು ತಿಳಿಯೋಣ ಬನ್ನಿ.

ರಕ್ತದೊತ್ತಡ ನಿಯಂತ್ರಣದಲ್ಲಿರಲು :
ಆರೋಗ್ಯಕರ ರಕ್ತದೊತ್ತಡ ಮಟ್ಟವನ್ನು ಹೊಂದುವುದಕ್ಕಾಗಿ ಸಾಕಷ್ಟು ನೀರು ಕುಡಿಯುವುದು ಅತೀ ಅಗತ್ಯವಾಗಿದೆ. ಶರೀರದಲ್ಲಿ ನೀರಿನ ಅಂಶ ಕಡಿಮೆಯಾದಾಗ ಕಡಿಮೆ ರಕ್ತದೊತ್ತಡ, ತಲೆತಿರುಗುವಿಕೆ ಮತ್ತು ಮೂರ್ಛೆ ತಪ್ಪುವಂತಹ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.

ಚರ್ಮದ ಆರೋಗ್ಯ ಕಾಪಾಡಲು :
ಬೇರೆ ಅಂಗಗಳಂತೆ ನಮ್ಮ ಚರ್ಮಕ್ಕೂ ಕೂಡ ನೀರಿನ ಅವಶ್ಯಕತೆ ಹೆಚ್ಚು. ನೀರು ಕುಡಿದರೆ ದೇಹದ ಹಲವು ಬೇಡದಿರುವ ಲವಣಗಳು ಮೂತ್ರದ ಮೂಲಕ ಹೊರ ಹೋಗುವಂತೆ ಚರ್ಮದ ಮೂಲಕವೂ ಬೆವರಾಗಿ ಹೊರಹೋಗುತ್ತದೆ.

ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ನೀರು ಅತ್ಯಗತ್ಯ. ಚರ್ಮದ ಶುಷ್ಕತೆ, ಮಂದತೆ ಮತ್ತು ಚರ್ಮ ಸುಕ್ಕುಗಟ್ಟುವುದನ್ನು ತಡೆಯುವ ಮೂಲಕ ಆರೋಗ್ಯಕರ ಮೈಬಣ್ಣವನ್ನು ಹೊಂದುವಲ್ಲಿ ನೀರು ಸಹಕಾರಿ.

ಸಂಧಿವಾತದಿಂದ ದೂರವಿರಲು :
ಕೀಲುಗಳಲ್ಲಿನ ಕಾರ್ಟಿಲೆಜ್ ಮತ್ತು ಮೂಳೆಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುವಲ್ಲಿ ನಾವು ಕುಡಿಯುವ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಕೀಲುಗಳಲ್ಲಿನ ಬಿಗಿತವನ್ನು ಕಡಿಮೆ ಮಾಡುವುದು ಮತ್ತು ಸಂಧಿವಾತದಂತಹ ಕಾಯಿಲೆಗಳಿಂದ ದೂರವಿರಲು ಇದು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಉತ್ತಮಪಡಿಸಲು :
ಜೀರ್ಣಕ್ರಿಯೆಯ ಮೂಲಕ ಆಹಾರದಿಂದ ಪೋಷಕಾಂಶಗಳನ್ನು ವಿಭಜಿಸಿ, ಅಗತ್ಯ ಅಂಶಗಳನ್ನು ಶರೀರದ ವಿವಿಧ ಅಂಗಗಳಿಗೆ ನೀಡುವುದು ಹಾಗೂ ಅನಗತ್ಯವಾದುವುಗಳನ್ನು ಶರೀರದಿಂದ ಹೊರಹಾಕಲು ನೀರು ನೆರವಾಗುತ್ತದೆ. ಕರುಳಿನ ಚಲನೆಯನ್ನು ನಿರ್ವಹಿಸುವುದು ಹಾಗೂ ಮಲಬದ್ಧತೆಯನ್ನು ತಡೆಗಟ್ಟುವುದಾಗಿದೆ.

ನಿರ್ಜಲೀಕರಣ ತಡೆಯಲು :
ಪ್ರತಿದಿನ ಕನಿಷ್ಠ 2 ಲೀಟರ್ ನೀರನ್ನು ಕುಡಿಯುವುದು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ದೇಹದ ಎಲ್ಲ ಅಂಗಾಂಗಗಳೂ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ.

ದೇಹದ ಉಷ್ಣತೆಯ ನಿಯಂತ್ರಣ :
ಅಗತ್ಯವಾದಷ್ಟು ನೀರಿನ ಅಂಶ ದೇಹಕ್ಕೆ ಸೇರಿಕೊಂಡರೆ ಬೆವರುವಿಕೆ ಸೇರಿದಂತೆ ದೇಹವನ್ನು ತಂಪಾಗಿಸುವ ಹಲವು ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದಾಗ ಅಥವಾ ಕಠಿಣ ಪರಿಶ್ರಮದ ದೈಹಿಕ ಚಟುವಟಿಕೆಗಳ ನಂತರ ದೇಹ ತಂಪಾಗಲು ಇದು ನೆರವಾಗುತ್ತದೆ.

ಇದನ್ನು ಓದಿ : Health : ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img