ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನಲ್ಲಿ ಕಿಟಕಿಯ ಸಲುವಾಗಿ ಮಹಿಳೆಯರು ಬಸ್ ನಲ್ಲಿಯೇ (BMTC Bus) ಚಪ್ಪಲಿಯಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಬಿಎಂಟಿಸಿ ಬಸ್ ಮೆಜೆಸ್ಟಿಕ್ ನಿಂದ (Majestic) ಪೀಣ್ಯಕ್ಕೆ ಹೊರಟಿದ್ದ ಟೈಮ್’ಲ್ಲಿ ಇಬ್ಬರು ಮಹಿಳೆಯರ ನಡುವೆ ಜಗಳವಾಗಿದೆ.
ಇದನ್ನು ಓದಿ : ನಟಿಯ ಬೋಲ್ಡ್ ಪೋಟೋ ವೈರಲ್ ; ಚಡ್ಡಿ ಹಾಕಿದ್ದಿಯೇನಮ್ಮ ಎಂದ ನೆಟ್ಟಿಗರು.!
ಘಟನೆಯ ದೃಶ್ಯವನ್ನು ಸಹ ಪ್ರಯಾಣಿಕರು ವಿಡಿಯೋ ಮಾಡಿದ್ದು, ವೈರಲ್ ಆಗಿದೆ.
ಮುಂದಿನ ಸೀಟ್ ನಲ್ಲಿ ಕುಳಿತಿದ್ದ ಮಹಿಳೆ ಹಾಗೂ ಹಿಂದಿನ ಸೀಟ್ ನಲ್ಲಿ ಕುಳಿತಿದ್ದ ಮಹಿಳೆಯ ಮಧ್ಯೆ ಜಗಳ ಶುರುವಾಗಿದೆ.
ಜಗಳ ತಾರಕಕ್ಕೇರಿ ಮುಂದೆ ಕುಳಿತಿದ್ದ ಮಹಿಳೆಯು ಇನ್ನೋರ್ವ ಮಹಿಳೆಯ ಮೇಲೆ ಏಕಾಏಕಿಯಾಗಿ ಚಪ್ಪಲಿಯಿಂದ (slippers) ಹಲ್ಲೆ ನಡೆಸಿದ್ದಾಳೆ. ನಂತರ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಇದನ್ನು ಓದಿ : ನದಿ ತೀರದಲ್ಲಿ ವಾಮಾಚಾರ ; ನೀರಲ್ಲಿ ತೇಲಿ ಬಂದವು ಶವಗಳು.!
ಇನ್ನು ಈ ವೇಳೆ ಬಸ್ ನಲ್ಲಿದ್ದ ಜನರು ಮುಂದಿನ ಸೀಟ್ ನಲ್ಲಿ ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.