ಜನಸ್ಪಂದನ ನ್ಯೂಸ್, ಚಿಕ್ಕಮಗಳೂರು : ಚಿಕ್ಕಮಗಳೂರಿನ (Chikkamagalur) ಭದ್ರಾ ನದಿಯ ದಡದಲ್ಲಿ ನಡು ರಾತ್ರಿಯ ವೇಳೆ ಭಯಂಕರವಾಗಿ ವಾಮಾಚಾರ (Black Magic) ನಡೆಸಿ, ನಾಲ್ಕು ಕುರಿಗಳನ್ನು ಬಲಿ ಕೊಟ್ಟಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು (Chikamagalore) ಕಳಸ (Kalasa) ತಾಲೂಕಿನಲ್ಲಿರುವ ಕಳಸ-ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಬಳಿಯ ಭದ್ರಾ ನದಿಯ ತೀರದಲ್ಲಿ ಈ ವಾಮಾಚಾರ ಮಾಡಲಾಗಿದೆ.
ಇದನ್ನು ಓದಿ : ಒಬ್ಬನ ಜೊತೆ 3 ಬಾರಿ ಮದುವೆ ; ನಾಲ್ವರೊಂದಿಗೆ ಲವ್ವಿಡವ್ವಿ, ಮುಂದೆ.?
ಕಿಡಿಗೇಡಿಗಳು ರಾತ್ರೋರಾತ್ರಿ ಆಗಮಿಸಿ ನದಿ ತೀರಕ್ಕೆ ಬಂದು ಪೂಜೆ ಮಾಡಿ ಕುರಿ ಬಲಿ ಕೊಟ್ಟಿದ್ದಾರೆ. ಇದನ್ನು ಕಂಡ ಸ್ಥಳೀಯರು (natives), ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ.
ವಾಮಾಚಾರಕ್ಕಾಗಿ ಪೂಜೆ ನಡೆಸಿ ಕುರಿ ಬಲಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಕಿಡಿಗೇಡಿಗಳು ನದಿ ದಂಡೆಯಲ್ಲಿ ಕುರಿ ಕಡಿದು ನದಿಗೆ ಎಸೆದಿದ್ದಾರೆ.
ಭದ್ರಾ ನದಿಯಲ್ಲಿ ನಾಲ್ಕು ಕುರಿಗಳು (Four sheep) ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಅಲ್ಲದೇ ದಂಡೆಯಲ್ಲಿ ಅರಿಶಿಣ, ಕುಂಕುಮ,ಕೂದಲು, ಉಗುರು, ಮಣ್ಣಿನ ಬೊಂಬೆಗಳು, ರಕ್ತ, ಬಟ್ಟೆ, ಮಡಕೆಗಳು ಪತ್ತೆಯಾಗಿವೆ.
ಇದನ್ನು ಓದಿ : ಲಂಚ ಸ್ವೀಕರಿಸುತ್ತಿದ್ದ ವೇಳೆ KSRTC ಡಿಸಿ ಲೋಕಾಯುಕ್ತ ಬಲೆಗೆ.!
ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುರಿಗಳ ಮೃತದೇಹವನ್ನು ಹೊರಕ್ಕೆ ತೆಗೆದಿದ್ದು, ವಾಮಾಚಾರ ಮಾಡಿದವರ ಹುಡುಕಾಟ ಆರಂಭಿಸಿದ್ದಾರೆ.