ಜನಸ್ಪಂದನ ನ್ಯೂಸ್, ಹರಿದ್ವಾರ (ಉತ್ತರಾಖಂಡ) : ಪ್ರಸಿದ್ಧ ಹರ್ ಕಿ ಪೌರಿ ಘಾಟ್‌ನಲ್ಲಿ ಮೂವರು ಮಹಿಳೆಯರ ನಡುವೆ ನಡೆದ ಜಗಳದ (Fight) ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭಕ್ತರಿಗೆ ತಿಲಕ ಹಚ್ಚುವ ವಿಚಾರದಲ್ಲಿ ಆರಂಭವಾದ ವಾಗ್ವಾದ (Fight) ಕೆಲ ಕ್ಷಣಗಳಲ್ಲಿ ತೀವ್ರಗೊಂಡು ಪರಸ್ಪರ ತಳ್ಳಾಟ, ಎಳೆಯಾಟದ ಮಟ್ಟಕ್ಕೆ ತಲುಪಿದೆ.
ಘಟನೆಯ ವಿಡಿಯೋವನ್ನು ಅಜಿತ್ ಸಿಂಗ್ ರಾಥಿ ಎಂಬವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಮೂವರು ಮಹಿಳೆಯರು ಪರಸ್ಪರ ಕೂದಲನ್ನು ಹಿಡಿದು ಎಳೆಯುತ್ತ ಹೊಡೆದಾಡುತ್ತಿದ್ದರು. ಈ ವೇಳೆ ಸ್ಥಳೀಯರು ಅವರ ಕಿತ್ತಾಟ (Fight) ವನ್ನು ಬಿಡಿಸಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ.
BSNL ನಲ್ಲಿ ಖಾಲಿ ಇರುವ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಮಹಿಳೆಯರು ಪರಸ್ಪರ ಕೂದಲನ್ನು ಹಿಡಿದು ಹೊಡೆದಾಡುತ್ತಿರುವ (Fight) ಸ್ಥಳಕ್ಕೆ ತಕ್ಷಣವೇ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪ್ರಾಥಮಿಕ ವಿಚಾರಣೆಯ ಪ್ರಕಾರ, ಹೊಡೆದಾಡುತ್ತಿರುವ (Fight) ಈ ಮೂವರು ಮಹಿಳೆಯರು ಹರ್ ಕಿ ಪೌರಿ ಪ್ರದೇಶಕ್ಕೆ ಆಗಮಿಸುವ ಯಾತ್ರಾರ್ಥಿಗಳಿಗೆ ತಿಲಕ ಹಚ್ಚಿ ಹಣ ಸಂಗ್ರಹಿಸುತ್ತಿದ್ದರೆಂದು ತಿಳಿದುಬಂದಿದೆ.
ಬುಧವಾರ, ಯಾರು ಮೊದಲು ತಿಲಕ ಹಚ್ಚಬೇಕು ಎಂಬ ವಿಚಾರದಲ್ಲಿ ಮೂವರೂ ವಾಗ್ವಾದಕ್ಕೆ ಇಳಿದಿದ್ದು, ಕೊನೆಗೆ ಅದು ಹೊಡೆದಾಟ (Fight) ಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Teacher : ಶಿಕ್ಷಕಿಯ ಮೇಲೆ ಅಮಾನವೀಯ ಕೃತ್ಯ : ಆರೋಪಿ ಪೊಲೀಸ್ ವಶಕ್ಕೆ.!
ನಗರ ಕೋತ್ವಾಲಿ ಉಸ್ತುವಾರಿ ರಿತೇಶ್ ಶಾ ಅವರು, ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ದೃಢಪಡಿಸಿದ್ದಾರೆ. ಘಟನೆಯ ನಂತರ ಪೊಲೀಸರು ಅವರಿಗೆ ಕಾನೂನುಬದ್ಧ ಎಚ್ಚರಿಕೆ ನೀಡಿದ್ದು, ಧಾರ್ಮಿಕ ಸ್ಥಳಗಳಲ್ಲಿ ಅಹಿತಕರ ವರ್ತನೆ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು ಪೊಲೀಸ್ ಕಾಯ್ದೆ ಸೆಕ್ಷನ್ 81 ಅಡಿಯಲ್ಲಿ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಧಾರ್ಮಿಕ ಪ್ರದೇಶಗಳಲ್ಲಿ ಇಂತಹ ಅಸಮರ್ಪಕ ವರ್ತನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಶಾಲಾ ಸಮವಸ್ತ್ರದಲ್ಲೇ ವೈನ್ ಶಾಪ್‌ನಲ್ಲಿ Alcohol ಖರೀದಿಸಿದ ವಿದ್ಯಾರ್ಥಿನಿಯರು ; ಸಿಸಿಟಿವಿ ವಿಡಿಯೋ ವೈರಲ್.!
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ 34 ಸಾವಿರಾರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
- ಕೆಲವರು “ಇಂತಹ ಪವಿತ್ರ ಸ್ಥಳದಲ್ಲಿ ಶಾಂತಿ ಕಾಪಾಡುವುದು ಎಲ್ಲರ ಜವಾಬ್ದಾರಿ” ಎಂದು ಕಾಮೆಂಟ್ ಮಾಡಿದ್ದು,
- ಮತ್ತೊಬ್ಬರು “ಹರ್ ಕಿ ಪೌರಿಯಂತಹ ಆಧ್ಯಾತ್ಮಿಕ ಸ್ಥಳದಲ್ಲಿ ನಿಯಮ ಪಾಲನೆ ಕಡ್ಡಾಯವಾಗಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
Girl : 8ನೇ ತರಗತಿಯ ಬಾಲಕಿಯ ಅಪಹರಣ ಮತ್ತು ದೌರ್ಜನ್ಯ ಪ್ರಕರಣ ; ನಾಲ್ವರು ಆರೋಪಿಗಳಿಗೆ ತೀವ್ರ ಶೋಧ .!
ಪ್ರಸ್ತುತ, ಮೂವರು ಮಹಿಳೆಯರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದು, ಪೊಲೀಸರು ಈ ಪ್ರದೇಶದಲ್ಲಿ ಹೆಚ್ಚುವರಿ ಕಣ್ಗಾವಲು ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದಾರೆ.
ಮಹಿಳೆಯರ ನಡುವೆ ಜಡೆ ಹಿಡಿದು ಕಿತ್ತಾಟ (Fight) ದ ವಿಡಿಯೋ :
श्रद्धालुओं को टीका लगाने की होड़ में हर महिलाओं ने पैड़ी को रणभूमि बना डाला। ऐसे कई मामले हरिद्वार में पहले भी आते रहे हैं, प्रशासन और गंगा सभा को हर की पैड़ी का प्रबंधन बेहतर बनाने के लिए काम करना चाहिए।#harkipaidi #haridwar #uttarakhand pic.twitter.com/Re1amFW1ZU
— Ajit Singh Rathi (@AjitSinghRathi) October 30, 2025
RRB : ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್ ; 5,810 ಹುದ್ದೆಗಳ ಭರ್ತಿ ಅರ್ಜಿ ಆಹ್ವಾನ.!

ಜನಸ್ಪಂದನ ನ್ಯೂಸ್, ನೌಕರಿ : ಭಾರತ ಸರ್ಕಾರದ ರೈಲ್ವೆ ಸಚಿವಾಲಯವು ನಿರುದ್ಯೋಗಿಗಳಿಗೆ ಮತ್ತೊಂದು ದೊಡ್ಡ ಅವಕಾಶ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ದೇಶಾದ್ಯಂತ ವಿವಿಧ ತಾಂತ್ರಿಕೇತರ ಜನಪ್ರಿಯ ವರ್ಗ (NTPC – Non Technical Popular Category) ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಅಧಿಸೂಚನೆಯನ್ನು ಪ್ರಕಟಿಸಿದೆ.
ಈ ನೇಮಕಾತಿಯಡಿ ಒಟ್ಟು 5,810 ಹುದ್ದೆಗಳು ಭರ್ತಿಯಾಗಲಿದ್ದು, ಪದವಿ ವಿದ್ಯಾರ್ಹತೆ ಹೊಂದಿರುವ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
20 ಜನರನ್ನು ಬಲಿ ಪಡೆದ ಕರ್ನೂಲ್ Bus ದುರಂತಕ್ಕೆ ಪಾನಮತ್ತ ಬೈಕ್ ಸವಾರನೇ ಕಾರಣ.?
NTPC ಪದವೀಧರ ಹುದ್ದೆಗಳ ವಿವರ :
ಈ ಅಧಿಸೂಚನೆಯಡಿ ಪ್ರಕಟಿಸಲಾದ ಹುದ್ದೆಗಳಲ್ಲಿ ಮೇಲ್ವಿಚಾರಕ, ಸ್ಟೇಷನ್ ಮಾಸ್ಟರ್, ಗೂಡ್ಸ್ ರೈಲು ವ್ಯವಸ್ಥಾಪಕ, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್, ಹಿರಿಯ ಗುಮಾಸ್ತ ಕಮ್ ಟೈಪಿಸ್ಟು, ಸಂಚಾರ ಸಹಾಯಕ ಮುಂತಾದ ಹುದ್ದೆಗಳು ಒಳಗೊಂಡಿವೆ.
ಪ್ರದೇಶವಾರು ಹುದ್ದೆಗಳ ಸಂಖ್ಯೆ :
ರೈಲ್ವೆ ನೇಮಕಾತಿ ಮಂಡಳಿ (RRB) ಪ್ರಕಾರ ವಿವಿಧ ಪ್ರದೇಶಗಳಲ್ಲಿ ಹುದ್ದೆಗಳ ವಿವರ ಹೀಗಿದೆ:
- ಬೆಂಗಳೂರು – 241
- ಅಹಮದಾಬಾದ್ – 79
- ಅಜ್ಮೀರ್ – 345
- ಭುವನೇಶ್ವರ – 231
- ಬಿಲಾಸ್ಪುರ – 864
- ಚಂಡೀಗಢ – 199
- ಚೆನ್ನೈ – 187
- ಗುವಾಹಟಿ – 56
- ಗೋರಖ್‌ಪುರ – 111
- ಜಮ್ಮು ಮತ್ತು ಶ್ರೀನಗರ – 32
- ಕೋಲ್ಕತ್ತಾ – 685
- ಮಾಲ್ಡಾ – 522
- ಮುಂಬೈ – 596
- ಮುಜಫರ್‌ಪುರ – 21
- ಪಾಟ್ನಾ – 23
- ಪ್ರಯಾಗ್‌ರಾಜ್ – 110
- ರಾಂಚಿ – 651
- ಸಿಕಂದರಾಬಾದ್ – 396
- ಸಿಲಿಗುರಿ – 21
- ತಿರುವನಂತಪುರಂ – 58
ಯಾರದೋ ಲೋಕದಲ್ಲಿ ಕಳೆದುಹೋಗಿದ್ದ Monkey ; ಆಮೇಲೆ ಮಾಡಿದ ಕ್ರಿಯೆ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು.!
ವಿದ್ಯಾರ್ಹತೆ :
- ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪಡೆದಿರಬೇಕು.
ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಮತ್ತು ಸೀನಿಯರ್ ಕ್ಲರ್ಕ್ ಹುದ್ದೆಗಳಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಟೈಪಿಂಗ್ ಪ್ರಾವೀಣ್ಯತೆ ಅಗತ್ಯ.
ವಯೋಮಿತಿ :
18 ರಿಂದ 33 ವರ್ಷ (ಜನವರಿ 1, 2026 ರಂತೆ).
ವಯೋಮಿತಿಯಲ್ಲಿ ಸಡಿಲಿಕೆ :
- OBC ಅಭ್ಯರ್ಥಿಗಳಿಗೆ – 3 ವರ್ಷಗಳು
- SC/ST ಅಭ್ಯರ್ಥಿಗಳಿಗೆ – 5 ವರ್ಷಗಳು
- ದಿವ್ಯಾಂಗ ಅಭ್ಯರ್ಥಿಗಳಿಗೆ – 10 ವರ್ಷಗಳು
Bike ಮೇಲೆ ಹರಿದ ಸ್ಲೀಪರ್ ಬಸ್ ; ಇಬ್ಬರ ಸಾವು ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ.!
RRB ಅರ್ಜಿ ಶುಲ್ಕ ಮತ್ತು ಪಾವತಿ ವಿವರ :
- ಸಾಮಾನ್ಯ, EWS, ಮತ್ತು OBC ಅಭ್ಯರ್ಥಿಗಳಿಗೆ ರೂ.500/- ಶುಲ್ಕ.
- SC, ST, ದಿವ್ಯಾಂಗ, ಮಹಿಳೆ, ಮಾಜಿ ಸೈನಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.250/- ಶುಲ್ಕ.
- ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿದೆ.
RRB ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 20, 2025.
- ಶುಲ್ಕ ಪಾವತಿಸಲು ಕೊನೆಯ ದಿನಾಂಕ : ನವೆಂಬರ್ 22, 2025.
- ಅರ್ಜಿ ಪರಿಷ್ಕರಣೆ ಅವಧಿ : ನವೆಂಬರ್ 23 ರಿಂದ ಡಿಸೆಂಬರ್ 2, 2025.
ಅಪ್ಪಿತಪ್ಪಿಯೂ ಈ ಜನರು Papaya ತಿನ್ನಲೇ ಬೇಡಿ ; ತಿಂದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುಟ್ಟಿ.!
RRB ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದೆ.
1. ಪ್ರಥಮ ಹಂತ (CBT-1) – 100 ಅಂಕಗಳ ಆನ್‌ಲೈನ್ ಪರೀಕ್ಷೆ (90 ನಿಮಿಷ ಅವಧಿ)
- ಸಾಮಾನ್ಯ ಜಾಗೃತಿ – 40 ಪ್ರಶ್ನೆಗಳು (40 ಅಂಕ)
- ಗಣಿತ – 30 ಪ್ರಶ್ನೆಗಳು (30 ಅಂಕ)
- ಬುದ್ಧಿಮತ್ತೆ ಮತ್ತು ತಾರ್ಕಿಕ ಪ್ರಶ್ನೆಗಳು – 30 ಪ್ರಶ್ನೆಗಳು (30 ಅಂಕ)
2. ದ್ವಿತೀಯ ಹಂತ (CBT-2)
- ಟೈಪಿಂಗ್ ಕೌಶಲ್ಯ ಪರೀಕ್ಷೆ / ಆನ್‌ಲೈನ್ ಆಪ್ಟಿಟ್ಯೂಡ್ ಟೆಸ್ಟ್.
- ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ.
RRB ಸಂಬಳ ಮತ್ತು ಭತ್ಯೆಗಳು :
ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಪ್ರಕಾರ ವೇತನ ನೀಡಲಾಗುತ್ತದೆ:
- ಸ್ಟೇಷನ್ ಮಾಸ್ಟರ್ ಮತ್ತು ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ : ರೂ.35,400/- ತಿಂಗಳಿಗೆ.
- ಸಂಚಾರ ಸಹಾಯಕರು : ರೂ.25,500/- ತಿಂಗಳಿಗೆ.
- ಇತರ ಹುದ್ದೆಗಳು : ರೂ.29,200/- ತಿಂಗಳಿಗೆ, ಇವುಗಳ ಜೊತೆಗೆ ಇತರ ಸರ್ಕಾರಿ ಭತ್ಯೆಗಳೂ ಸಿಗಲಿವೆ.





