ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral Newsಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!
spot_img
spot_img
spot_img

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಕೆಲವರು ಅಸಾಧ್ಯವೆನಿಸುವ ಸಮಸ್ಯೆಗಳಿಗೆ ಸಹ ಸರಳ ಪರಿಹಾರಗಳನ್ನು ಕಂಡುಹಿಡಿಯುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ನವೀನ ಪ್ರಯೋಗಗಳು ಪ್ರತಿದಿನವೂ ವೈರಲ್ ಆಗುತ್ತಲೇ ಇರುತ್ತವೆ.

ಇತ್ತೀಚೆಗೆ, ಒಬ್ಬ ಮಹಿಳೆ ತನ್ನ ಬೆರಳಿಗೆ ಚುಚ್ಚಿದ ಮುಳ್ಳ (thorn) ನ್ನು ಅಚ್ಚರಿಯ ರೀತಿಯಲ್ಲಿ ತೆಗೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ವಿಡಿಯೋದಲ್ಲಿ, ಆಕೆಯ ಬೆರಳಿಗೆ ಚಿಕ್ಕ ಮುಳ್ಳು (thorn) ಸಿಲುಕಿಕೊಂಡಿದ್ದು, ಮೊದಲಿಗೆ ಅದನ್ನು ಕೈಯಿಂದ ತೆಗೆಯಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಬಳಿಕ ಆಕೆ ವಿಭಿನ್ನ ವಿಧಾನವನ್ನು ಪ್ರಯೋಗಿಸಲು ನಿರ್ಧರಿಸಿದಳು.

ಅಡುಗೆ ಮನೆಗೆ ತೆರಳಿ ಒಂದು ಬೆಳ್ಳುಳ್ಳಿಯ ತುಂಡನ್ನು ತೆಗೆದು, ಅದರ ಸಿಪ್ಪೆ ತೆಗೆದು, ಮುಳ್ಳು (thorn) ಚುಚ್ಚಿದ ಸ್ಥಳಕ್ಕೆ ಅದನ್ನು ಇಟ್ಟಳು. ನಂತರ ಆ ಸ್ಥಳವನ್ನು ಬ್ಯಾಂಡೇಜ್‌ನಿಂದ ಮುಚ್ಚಿ ಸ್ವಲ್ಪ ಹೊತ್ತಿನವರೆಗೆ ಹಾಗೆಯೇ ಬಿಟ್ಟಳು. ಕೆಲವೇ ಗಂಟೆಗಳಲ್ಲಿ, ಆಕೆ ಬ್ಯಾಂಡೇಜ್ ತೆಗೆದಾಗ ಬೆಳ್ಳುಳ್ಳಿಯ ಜೊತೆ ಮುಳ್ಳು ಸಹ ಹೊರಬಂದಿತ್ತು!

ಈ ವಿಚಿತ್ರ ಪ್ರಯೋಗದ ವಿಡಿಯೋ ಈಗ ಲಕ್ಷಾಂತರ ಬಾರಿ ವೀಕ್ಷಣೆಗೊಂಡಿದ್ದು, ನೆಟ್ಟಿಗರು “ಇದು ನಿಜಕ್ಕೂ ಉಪಯುಕ್ತ ಸಲಹೆ” ಎಂದು ಪ್ರಶಂಸಿಸುತ್ತಿದ್ದಾರೆ. ಕೆಲವರು ಈ ವಿಧಾನವನ್ನು ತಾವೇ ಪ್ರಯೋಗಿಸಿ ಯಶಸ್ವಿಯಾಗಿರುವುದಾಗಿ ಕಾಮೆಂಟ್ ಮಾಡಿದ್ದಾರೆ.

ಆದರೆ, ವೈದ್ಯರು ಎಚ್ಚರಿಕೆ ನೀಡುತ್ತಾ, ಚರ್ಮದೊಳಗೆ ಆಳವಾಗಿ ಹೋದ ಮುಳ್ಳು ಇದ್ದರೆ ಸ್ವಯಂ ಪ್ರಯೋಗಗಳನ್ನು ಮಾಡದೇ ವೈದ್ಯಕೀಯ ಸಲಹೆ ಪಡೆಯುವುದು ಒಳಿತು ಎಂದು ಹೇಳಿದ್ದಾರೆ.

ಬೆಳ್ಳುಳ್ಳಿಯು ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ಇನ್ಪ್‌ಪ್ಲಿಮೇಟರಿ ಗುಣಗಳಿಂದ ಸಮೃದ್ಧವಾಗಿರುವುದರಿಂದ, ಅದು ಚರ್ಮದ ಉರಿಯೂತವನ್ನು ಕಡಿಮೆ ಮಾಡಿ, ಮುಳ್ಳಿನ (thorn) ಸುತ್ತಲಿನ ಭಾಗವನ್ನು ಸಡಿಲಗೊಳಿಸಿ ಮುಳ್ಳನ್ನು ಹೊರತೆಗೆಸಲು ಸಹಾಯಕವಾಗುತ್ತದೆ ಎಂಬ ಅಭಿಪ್ರಾಯವೂ ವೈದ್ಯಕೀಯ ವಲಯದಿಂದ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಇದೀಗ “ನೈಸರ್ಗಿಕ ಚಿಕಿತ್ಸೆ”ಗಳ ಹೊಸ ಮಾದರಿಯಾಗಿ ಜನಮನ ಗೆದ್ದಿದೆ.

ಚುಚ್ಚಿದ ಮುಳ್ಳನ್ನು (thorn) ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌ ವಿಡಿಯೋ

https://twitter.com/i/status/1985403972430283075


Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್‌, ಆರೋಗ್ಯ : ಆರೋಗ್ಯ ಪ್ರಿಯರಿಗೆ ಕಿವಿ ಹಣ್ಣು ಹೊಸದಾಗಿ ಪರಿಚಯವಾದರೂ, ಇದರ ಪೌಷ್ಟಿಕತೆ ಅಚ್ಚರಿ ಮೂಡಿಸುತ್ತದೆ. ಕಿವಿ ಹಣ್ಣು (Kiwi fruites) ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿ-ಆಕ್ಸಿಡೆಂಟ್ಸ್‌ನಿಂದ ತುಂಬಿದ ಹಣ್ಣಾಗಿದ್ದು, ದೇಹದ ಒಟ್ಟು ಆರೋಗ್ಯದ ಜೊತೆಗೆ ಕಣ್ಣುಗಳ ಆರೋಗ್ಯಕ್ಕೂ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ.

ಪ್ರತಿದಿನ ಒಂದು ಕಿವಿ ಹಣ್ಣು (Kiwi fruites) ಸೇವಿಸುವುದರಿಂದ ಕಣ್ಣಿನ ದೃಷ್ಟಿ ಹೀನತೆ, ಕಣ್ಣಿನ ಪೊರೆ ಹಾಗೂ ಅನೇಕ ದೃಷ್ಟಿ ಸಂಬಂಧಿತ ಸಮಸ್ಯೆಗಳನ್ನು ತಡೆಯಬಹುದು. ಕಿವಿಯಲ್ಲಿರುವ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಕಣ್ಣುಗಳ ರಕ್ತ ಪರಿಚಲನೆಯನ್ನು ಉತ್ತಮಗೊಳಿಸಿ ನರಮಂಡಲವನ್ನು ಬಲಪಡಿಸುತ್ತವೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ವಯಸ್ಸಾದಂತೆ ದೃಷ್ಟಿ ಕಡಿಮೆಯಾಗುವುದು ಸಹಜ, ಆದರೆ ಆಹಾರದಲ್ಲಿ ಕಿವಿ ಸೇರಿಸಿಕೊಂಡರೆ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಪೋಷಕಾಂಶಗಳು ಕಣ್ಣುಗಳ ರೆಟಿನಾವನ್ನು ರಕ್ಷಿಸುತ್ತವೆ. ಈ ಪೋಷಕಾಂಶಗಳು ದೃಷ್ಟಿ ಶಕ್ತಿಯನ್ನು ಕಾಪಾಡಿ, ಕಣ್ಣುಗಳನ್ನು ತೇಜಸ್ಸಿನಿಂದ ಕಂಗೊಳಿಸುವಂತೆ ಇಡುತ್ತವೆ.

ಕಿವಿ ಹಣ್ಣಿನ (Kiwi fruites) ರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಕಣ್ಣಿನ ಉರಿಯೂತ, ಕಿರಿಕಿರಿ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತವೆ. ಹಣ್ಣುಗಳಲ್ಲಿ ಕಿತ್ತಳಿಗಿಂತ ಎರಡು ಪಟ್ಟು ಹೆಚ್ಚು ಪ್ರಮಾಣದ ವಿಟಮಿನ್ ಸಿ ಇರುವುದರಿಂದ, ಕಿವಿ ಹಣ್ಣು ಕಣ್ಣಿನ ನೈಸರ್ಗಿಕ ರಕ್ಷಣಾ ಕವಚದಂತಿದೆ.

“ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ಇದಲ್ಲದೆ, ಕಿವಿ ಹಣ್ಣಿನಲ್ಲಿರುವ (Kiwi fruites) ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಿ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಪೊಟ್ಯಾಸಿಯಮ್ ಪ್ರಮಾಣ ಹೆಚ್ಚು ಮತ್ತು ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳುವವರಿಗೂ ಇದು ಉತ್ತಮ ಆಯ್ಕೆ.

ತಾಮ್ರ ಅಂಶ ಹೆಚ್ಚಿರುವುದರಿಂದ ಕಿವಿ ಹಣ್ಣು (Kiwi fruites) ಕಣ್ಣುಗಳ ನರಮಂಡಲಕ್ಕೆ ಶಕ್ತಿ ನೀಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಕಣ್ಣುಗಳ ಊತ ಮತ್ತು ಅಸಹನೆಯನ್ನು ಕಡಿಮೆ ಮಾಡುತ್ತವೆ. ನಿಯಮಿತವಾಗಿ ಕಿವಿ ಸೇವನೆಯಿಂದ ಮಧುಮೇಹ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನೂ ತಡೆಹಿಡಿಯಬಹುದು, ಏಕೆಂದರೆ ಇವುಗಳೆರಡೂ ಕಣ್ಣಿನ ಆರೋಗ್ಯಕ್ಕೆ ನೇರ ಸಂಬಂಧ ಹೊಂದಿವೆ.

ಬೆಳಗಾವಿ : ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ, lathicharge ; ಕಲ್ಲು ತೂರಾಟ.!

ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಕಿವಿ ಹಣ್ಣನ್ನು ಆಹಾರದಲ್ಲಿ ಸೇರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳಿತು.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments