ಜನಸ್ಪಂದನ ನ್ಯೂಸ್, ಡೆಸ್ಕ್ : ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಕೊಲೆ (Murder) ಮಾಡಿ ಬಾವಿಗೆ ಎಸೆದಿರುವ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಾರ್ಕಲಾ ಗ್ರಾಮದಲ್ಲಿ ನಡೆದ ಕ್ರೂರ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರೇಮಿಯೊಂದಿಗೆ ಕಂಡುಬಂದ ಹಿನ್ನೆಲೆಯಲ್ಲಿ, ಆಕೆಯ ಕುಟುಂಬವೇ ಇಬ್ಬರನ್ನೂ ಕೊಂದು (Murder) ಬಾವಿಗೆ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Udupi : ಲಾಡ್ಜ್ ಮೇಲೆ ಪೊಲೀಸರು ದಾಳಿ ; ಮಹಿಳೆ ರಕ್ಷಣೆ, ಓರ್ವ ವ್ಯಕ್ತಿ ಬಂಧನ.!
ಕುಟುಂಬದ ಮೂವರು ಬಂಧನ :
ಈ ಘಟನೆಯಲ್ಲಿ ಮೃತಪಟ್ಟ ವಿವಾಹಿತ ಮಹಿಳೆಯ ತಂದೆ, ಅಜ್ಜ ಮತ್ತು ಮಾವ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶವಗಳನ್ನು ಹೊರತೆಗೆದಾಗ, ಇಬ್ಬರ ಕೈಕಾಲು ಕಟ್ಟಿ ಬಾವಿಯಲ್ಲಿ ಎಸೆದಿರುವುದು ಪತ್ತೆಯಾಗಿದೆ.
ಘಟನೆ ಹೇಗೆ ನಡೆದಿದೆ?
ಮೃತ ಮಹಿಳೆಯ ಮಾವ (ಗಂಡನ ತಂದೆ) ಮಹಿಳೆಯು ಪ್ರೇಮಿಯೊಂದಿಗೆ ಮನೆಯಲ್ಲೇ ಕಂಡು ಬಂದ ತಕ್ಷಣವೇ ಆಕೆಯ ತವರು ಮನೆಯವರಿಗೆ ಕರೆ ಮಾಡಿದರು. ಬಳಿಕ ಮಹಿಳೆಯ ತಂದೆ, ಅಜ್ಜ ಮತ್ತು ಮಾವ ಕಾರ್ಕಲಾ ಗ್ರಾಮಕ್ಕೆ ಬಂದು, ಇಬ್ಬರನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.
ಹಾದಿಯಲ್ಲೇ, ಇಬ್ಬರನ್ನೂ ಬೊರ್ಜುನಿ ಹತ್ತಿರದ ಕಕ್ರಾಲಾ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಮಧ್ಯಾಹ್ನ 2.30ರ ಹೊತ್ತಿಗೆ ಹತ್ಯೆ (Murder) ಗೈದು ಬಾವಿಗೆ ಎಸೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪೊಲೀಸ್ ಮಾಹಿತಿ :
ಘಟನೆಯ ನಂತರ ಮಹಿಳೆಯ ತಂದೆ ನೇರವಾಗಿ ಉಮ್ರಿ ಪೊಲೀಸ್ ಠಾಣೆಗೆ ಬಂದು, ಇಬ್ಬರನ್ನೂ ತಾನೇ ಕೊಂದಿದ್ದೇನೆ (Murder) ಎಂದು ಒಪ್ಪಿಕೊಂಡಿದ್ದಾನೆ. ಆದರೆ ತನಿಖೆಯಲ್ಲಿ, ಈ ಹತ್ಯೆಯಲ್ಲಿ ಆಕೆಯ ಮಾವ ಮತ್ತು ಅಜ್ಜ ಸಹ ಭಾಗಿಯಾಗಿದ್ದಾರೆ ಎಂಬುದು ಬಹಿರಂಗವಾಗಿದೆ.
ಸದ್ಯ ಈ ಮೂವರನ್ನೂ ಬಂಧಿಸಲಾಗಿದ್ದು, ಪ್ರಕರಣದ ಕುರಿತಂತೆ ತನಿಖೆ ಮುಂದುವರೆದಿದೆ ಎಂದಿದ್ದಾರೆ.
Fire : 36 ಲಕ್ಷ ವರದಕ್ಷಿಣೆ ಬೇಡಿಕೆ : ಪತ್ನಿ ಸುಟ್ಟು ಹಾಕಿದ ಪತಿ ; ಸತ್ಯ ಬಿಚ್ಚಿಟ್ಟ ಮಗ.!
ಜನಸ್ಪಂದನ ನ್ಯೂಸ್, ಡೆಸ್ಕ್ : ವರದಕ್ಷಿಣೆ ವಿಚಾರವಾಗಿ ಪತಿಯೋರ್ವ ಪತ್ನಿಗೆ ಬೆಂಕಿ (Fire) ಹಚ್ಚಿ ಕೊಲೆ (Murder) ಮಾಡಿರುವ ಘಟನೆಯೋದು ನಡೆದಿರುವ ಬಗ್ಗೆ ವರದಿಯಾಗಿದೆ.
ಗ್ರೇಟರ್ ನೋಯ್ಡಾದ ಕಸ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿರ್ಸಾ ಗ್ರಾಮದಲ್ಲಿ ನಡೆದ ದಾರುಣ ಘಟನೆಯಲ್ಲಿ, ಬೆಂಕಿ (Fire) ಹಚ್ಚಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ 6 ವರ್ಷದ ಮಗ ನೀಡಿದ ಹೇಳಿಕೆ ಪೊಲೀಸರಿಗೆ ಪ್ರಮುಖ ಸುಳಿವು ಒದಗಿಸಿದೆ.
ಮಗನ ಹೇಳಿಕೆಯ ಪ್ರಕಾರ, ತನ್ನ ಅಪ್ಪನೇ ತಾಯಿಯನ್ನು ತನ್ನ ಮುಂದೆಯೇ ಹಲ್ಲೆ ಮಾಡಿ ಬೆಂಕಿ (Fire) ಹಚ್ಚಿದ್ದಾನೆ. ಆಕೆ ಹಲವು ದಿನಗಳಿಂದ ಹಿಂಸೆಗೆ ಒಳಗಾಗುತ್ತಿದ್ದಾಳೆ ಎಂಬುದನ್ನೂ ಬಾಲಕ ಬಿಚ್ಚಿಟ್ಟಿದ್ದಾನೆ.
Dharmasthala ಪ್ರಕರಣಕ್ಕೆ ಟ್ವಿಸ್ಟ್ : ಸುಜಾತಾ ಭಟ್ ಬಾಯ್ಬಿಟ್ಟ ಸತ್ಯ, ಮಾಸ್ಕ್ ಮ್ಯಾನ್ ಬಂಧನ.!
ಘಟನೆಯ ವಿಡಿಯೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವುಗಳಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ಹಾಗೂ ಬೆಂಕಿ (Fire) ಹೊತ್ತಿಕೊಂಡ ನಂತರ ಆಕೆ ಮೆಟ್ಟಿಲುಳಿದು ಬರುತ್ತಿರುವ ದೃಶ್ಯಗಳು ಕಾಣಿಸಿವೆ.
ಮೃತಳ ಅಕ್ಕ ಕಾಂಚನ್ ಮಾತನಾಡಿ, ತಮ್ಮ ತಂಗಿಯ ಪತಿ ವಿಪಿನ್ ಹಾಗೂ ಆತನ ಮನೆಯವರು 36 ಲಕ್ಷ ರೂ. ವರದಕ್ಷಿಣೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ತಂಗಿ ನಿರಂತರ ಹಿಂಸೆಗೆ ಒಳಗಾಗುತ್ತಿದ್ದರು ಎಂದು ಅವರು ಹೇಳಿದ್ದಾರೆ.
KSCCF : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತದಲ್ಲಿ ಉದ್ಯೋಗವಕಾಶ.!
ಕಾಂಚನ್ ಅವರ ಪ್ರಕಾರ, ತಂಗಿಯನ್ನು ಹಲ್ಲೆ ಮಾಡಿದ ನಂತರ ಬೆಂಕಿ (Fire) ಹಚ್ಚಲಾಯಿತು. ತಂಗಿಯ ಮಕ್ಕಳೂ ಆ ಸಮಯದಲ್ಲಿ ಅಲ್ಲೇ ಇದ್ದರು. ತಮಗೂ ಹಲ್ಲೆ ನಡೆಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.