ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral NewsHeart : ನೀವು ಮಹಿಳೆಯರ ಮನಸ್ಸು ಗೆಲ್ಲಬೇಕೆ? ಈ ಗುಣಗಳಿದ್ದರೆ ಸಾಕು.
spot_img
spot_img
spot_img

Heart : ನೀವು ಮಹಿಳೆಯರ ಮನಸ್ಸು ಗೆಲ್ಲಬೇಕೆ? ಈ ಗುಣಗಳಿದ್ದರೆ ಸಾಕು.

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನೀವು ನಿಜವಾಗಲೂ ಮಹಿಳೆಯರ ಮನಸ್ಸು – ಹೃದಯ (Heart) ಗೆಲ್ಲಬೇಕೆಂದರೆ ನಿಮ್ಮಲ್ಲಿ ಈ ಗುಣಗಳಿದ್ದರೆ ಸಾಕು. ಖಂಡಿತಾ ಮಹಿಳೆಯ ಹೃದಯ (Heart) ಗೆಲ್ಲಬಹುದು. ಬನ್ನಿ ಹಾಗಾದ್ರೆ ಯಾವ ಗುಣಗಳು ಮಹಿಳೆಯನ್ನು ಆಕರ್ಷಿಸುತ್ತವೆ ಅಂತ ತಿಳಿಯೋಣ.!

ಪುರುಷರ ವಿಷಯದಲ್ಲಿ ಬಹುತೇಕ ಜನರು ಮೊದಲಿಗೆ ಬಾಹ್ಯ ಸೌಂದರ್ಯ, ಹಣ-ಹುದ್ದೆ ಅಥವಾ ಇತರ ಭೌತಿಕ ಲಕ್ಷಣಗಳನ್ನು ಗಮನಿಸುತ್ತಾರೆ.

ಆದರೆ ತಜ್ಞರ ಅಭಿಪ್ರಾಯ ಪ್ರಕಾರ, ಮಹಿಳೆಯರು ನಿಜವಾದ ಆಕರ್ಷಣೆ ಅನುಭವಿಸುವುದು ಪುರುಷನ ಆಂತರಿಕ ಗುಣಗಳು, ನಿಷ್ಠೆ ಮತ್ತು ಗೌರವದ ನಡವಳಿಕೆ ಮೇಲೆ ಇರುತ್ತದೆ.

ಈ ಗುಣಗಳನ್ನು ಹೊಂದಿರುವ ಪುರುಷರು, ಮಹಿಳೆಯ ಮನಸ್ಸನ್ನು ಗೆದ್ದುಕೊಳ್ಳುವ ಸಾಧ್ಯತೆಯನ್ನು ಹೆಚ್ಚು ಹೊಂದಿದ್ದಾರೆ ಮತ್ತು ದೀರ್ಘಕಾಲದ ಸಂಬಂಧವನ್ನು ಕಟ್ಟಿಕೊಳ್ಳುತ್ತಾರೆ.

ಇದನ್ನು ಓದಿ : Home ಬಾಡಿಗೆದಾರರಿಗೆ ʼಮನೆ ಸ್ವಾಧೀನʼ ಹೊಂದುವ ಹಕ್ಕಿಲ್ಲ : ಸುಪ್ರೀಂ ಕೋರ್ಟ್ ತೀರ್ಪು.!
ಮಹಿಳೆಯ ಹೃದಯ (Heart) ಗೆಲ್ಲಲು ಮತ್ತು ಸಂಬಂಧವನ್ನು ಗಟ್ಟಿಗೊಳಿಸುವ ಅಂಶಗಳು :

1. ಪ್ರಾಮಾಣಿಕತೆ ಮತ್ತು ನಿಷ್ಠೆ:
ಮಹಿಳೆಯರು ಅತ್ಯಂತ ಮೌಲ್ಯ ನೀಡುವ ಗುಣವೆಂದರೆ ಪುರುಷನ ನಿಷ್ಠೆ. ಸುಳ್ಳು-ಮೋಸವಿಲ್ಲದೆ, ಸತ್ಯವಾಗಿ ಮಾತನಾಡುವ ಮತ್ತು ನಿಷ್ಠಾವಂತ ವರ್ತನೆಯ ಪುರುಷರು ಮಹಿಳೆಯರಲ್ಲಿ ಭರವಸೆ ಮೂಡಿಸುತ್ತಾರೆ. ಈ ನಂಬಿಕೆ ಸಂಬಂಧವನ್ನು ದೀರ್ಘಕಾಲ ಬಲಿಷ್ಠವಾಗಿಸಲು ಸಹಾಯ ಮಾಡುತ್ತದೆ.

2. ಸಂಗಾತಿಯ ಮಾತುಗಳನ್ನು ಆಲಿಸುವ ಗುಣ:
ಅಭಿಪ್ರಾಯಗಳಿಗೆ ಕಿವಿಗೊಡುವ, ನೋವು ಮತ್ತು ಸಂತೋಷವನ್ನು ಹಂಚಿಕೊಳ್ಳುವ ಪುರುಷರತ್ತ ಮಹಿಳೆಯರು ಸಹಜವಾಗಿ ಆಕರ್ಷಿತರಾಗುತ್ತಾರೆ. ಸಂಗಾತಿಯ ಭಾವನೆಗಳಿಗೆ ಪ್ರಾಮುಖ್ಯತೆ ನೀಡುವವರು ದೀರ್ಘಕಾಲಕ್ಕೆ ಸಂಬಂಧವನ್ನು ಸುದೃಢವಾಗಿಸಬಹುದು.

3. ಉತ್ತಮ ವ್ಯಕ್ತಿತ್ವ:
ಬಾಹ್ಯ ಸೌಂದರ್ಯದ ಬದಲು, ಶಾಂತ, ಸ್ಪಷ್ಟ ನಿರ್ಧಾರಗಳಿರುವ ಮತ್ತು ಮೌಲ್ಯ-ತತ್ವಗಳನ್ನು ಪಾಲಿಸುವ ಪುರುಷರ ವ್ಯಕ್ತಿತ್ವ ಮಹಿಳೆಯರಿಗೆ ಹೆಚ್ಚು ಗಮನ ಸೆಳೆಯುತ್ತದೆ. ಉತ್ತಮ ವ್ಯಕ್ತಿತ್ವವು ಮಹಿಳೆಯ ಹೃದಯದ ಹತ್ತಿರ ಹೋಗಲು ಪ್ರಮುಖ ಕಾರಣವಾಗುತ್ತದೆ.

ಇದನ್ನು ಓದಿ : ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ; 20ಕ್ಕೂ ಹೆಚ್ಚು Tractors ಟ್ರಾಲಿಗಳಿಗೆ ಬೆಂಕಿ.!

4. ಗೌರವ ಮತ್ತು ಪ್ರೀತಿ:
ಪರಸ್ಪರ ಗೌರವ ನೀಡುವ ಸಂಬಂಧವೇ ದೀರ್ಘಕಾಲ ಉಳಿಯುತ್ತದೆ. ಸಂಗಾತಿಯ ಅಭಿಪ್ರಾಯಗಳಿಗೆ ಮೌಲ್ಯ ನೀಡುವ, ಸಣ್ಣ ವಿಚಾರಗಳನ್ನೂ ಗಮನಿಸುವ ಪುರುಷರು ಮಹಿಳೆಯ ಹೃದಯದಲ್ಲಿ ವಿಶೇಷ ಸ್ಥಾನ ಪಡೆಯುತ್ತಾರೆ.

ಈ ರೀತಿಯ ಗುಣಗಳು ಪುರುಷನನ್ನು ಕೇವಲ ಆಕರ್ಷಕವನ್ನಲ್ಲದೆ, ದೀರ್ಘಕಾಲದ ಸಂಬಂಧಕ್ಕಾಗಿ ನಂಬಿಗಸ್ತ ಸಹಗಾಮಿ ಎಂದು ತೋರಿಸುತ್ತವೆ. ಸಾಮಾಜಿಕ ಸಮೀಕ್ಷೆ ಮತ್ತು ತಜ್ಞರ ಅಭಿಪ್ರಾಯಗಳು ಸಹ ಈ ವಿಚಾರವನ್ನು ಒಪ್ಪಿವೆ.


ಮಹಿಳೆಗೆ ಬಲವಂತವಾಗಿ Drinks ಕುಡಿಸಿ ಸಾಮೂಹಿಕ ಅತ್ಯಾಚಾರ ; 4 ಜನರ ಬಂಧನ.

woman-forced-drinks-group-rape-four-arrested

ಜನಸ್ಪಂದನ ನ್ಯೂಸ್‌, ಯಲಬುರ್ಗಾ : ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ 36 ವರ್ಷದ ಮಹಿಳೆಯೊಂದರ ಮೇಲೆ ಗ್ರಾಮ ಒಂದರಲ್ಲಿ ಮತ್ತು ಬರಿಸುವ ಡ್ರಿಂಕ್ಸ್‌ (Drinks) ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿ ಯಲಬುರ್ಗಾ ಪೊಲೀಸರು ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಲಕ್ಷ್ಮಣ , ಬಸವರಾಜ, ಭೀಮಪ್ಪ ಮತ್ತು ಶಾಹಿಕುಮಾರ ಎಂದು ಪೊಲೀಸರು ತಿಳಿಸಿದ್ದರು.

ಮಹಿಳೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು. ಬಾಕಿ ಹಣವಿದ್ದುದರಿಂದ ಪರಿಚಯಸ್ಥನಾದ ಲಕ್ಷ್ಮಣ ಸಂತ್ರಸ್ತೆಯನ್ನು ಕುಷ್ಟಗಿಗೆ ಕರೆಸಿಕೊಂಡು, ನಂತರ ಇತರ ಮೂವರು ಆರೋಪಿಗಳ ಜೊತೆ ಸೇರಿ ಬೈಕ್‌ನಲ್ಲಿ ಗ್ರಾಮ ಒಂದರ ಕಡೆಗೆ ಕರೆದೊಯ್ದರು.

ಇದನ್ನು ಓದಿ : ಪೋಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿಗಳ ಕಾಲಿಗೆ Shot.

ಅಲ್ಲಿ ಅವರು ಮತ್ತು ಬರಿಸುವ ಜ್ಯೂಸ್ (Drinks) ಮತ್ತು ಇತರ ಪಾನೀಯ (Drinks) ಗಳನ್ನು ಬಲವಂತವಾಗಿ ಕುಡಿಸಿದರು. ನಂತರ ಪಾಳುಬಿದ್ದ ಮನೆಯೊಂದರಲ್ಲಿ ಮಹಿಳೆಗೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

ಸಂತ್ರಸ್ತೆಯನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸಂಬಂಧಿತ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದ್ದು, ಹೆಚ್ಚಿನ ಆರೋಪಿಗಳನ್ನು ಹಿಡಿಯಲು ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : ತಿರುವಿನಲ್ಲಿ ಬಾಲಕನ ಮೇಲೆ ಹರಿದ Lorry ; ಮನಕಲಕುವ ವಿಡಿಯೋ ವೈರಲ್.!

ಸುರಕ್ಷತಾ ಸೂಚನೆ : ಅಧಿಕಾರಿಗಳು ನಾಗರಿಕರಿಗೆ ಯಾವುದೇ ಅನಿರೀಕ್ಷಿತ ಸ್ಥಳಗಳಲ್ಲಿ ಶಾರೀರಿಕ ಅಥವಾ ಪಾನೀಯ ಸಂಬಂಧಿತ ಅಪಾಯಗಳನ್ನು ತಪ್ಪಿಸಲು ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments