ಗುರುವಾರ, ಡಿಸೆಂಬರ್ 4, 2025

Janaspandhan News

HomeCrime Newsಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ Wife.
spot_img
spot_img
spot_img

ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ Wife.

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನ ಜೊತೆ ಸೇರಿ ಪತ್ನಿಯೋರ್ವಳು (Wife) ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಪರಿಹಾರ ಕಂಡಿರುವ ಪೊಲೀಸರು, ಇದು ಸುಟ್ಟ ಶವವಲ್ಲ, ಇದೊಂದು ಯೋಜಿತ ಕೊಲೆ  (Planed Murder) ಎಂದು ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ.

ಮೃತನನ್ನು ಯಾದಗಿರಿ ಮೂಲದ ಬಸವರಾಜು (28) ಎಂದು ಗುರುತಿಸಲಾಗಿದೆ. ಈ ಭೀಕರ ಕೊಲೆ ಪ್ರಕರಣದಲ್ಲಿ ಬಸವರಾಜು ಪತ್ನಿ (Wife)  ಶರಣಮ್ಮ (25), ಆಕೆಯ ಪ್ರಿಯಕರ ವೀರಭದ್ರ (19) ಹಾಗೂ ಸಹಾಯಕ ಅನಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎನ್ನುವ ಕಾರಣಕ್ಕೆ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿಸಿದ್ದಾಳೆ ಎಂಬ ಸತ್ಯ ತನಿಖೆಯಲ್ಲಿ ಬಯಲಾಗಿದೆ.

ಇದನ್ನು ಓದಿ : Crime : ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಇಂಜಿನಿಯರ್ ಅನುಮಾನಸ್ಪದ ಸಾವು ; ಕಾರಣ ನಿಗೂಢ.!
ಅಕ್ರಮ ಸಂಬಂಧವೇ ಕೊಲೆಗೆ ಕಾರಣ :

ನಾಲ್ಕು ವರ್ಷಗಳ ಹಿಂದೆ ಮದುವೆಯಾದ ಬಸವರಾಜು–ಶರಣಮ್ಮ ದಂಪತಿ, ತಿಗಳರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿತ ವೀರಭದ್ರನ ತಂದೆಯ ಬಳಿ ದಂಪತಿಗಳು ಗಾರೆ ಕೆಲಸದಲ್ಲಿ ತೊಡಗಿದ್ದರು. ವೀರಭದ್ರನ ತಂದೆ ಕೆಲಸಗಾರರ ಮೇಲ್ವಿಚಾರಣೆ ನೋಡಿಕೊಳ್ಳುವ ಜವಾಬ್ದಾರಿ ನೀಡಿದ್ದರು.

ಹೀಗೆ ಕೆಲಸದ ಸ್ಥಳದಲ್ಲಿ ಕೆಲಸಗಾರರ ಮೇಲ್ವಿಚಾರಣೆ ಮಾಡುತ್ತಿದ್ದ ವೀರಭದ್ರ ಮತ್ತು ಶರಣಮ್ಮ ನಡುವೆ ನಿಧಾನವಾಗಿ ಸಲುಗೆ ಬೆಳೆದಿದ್ದು, ನಂತರ ಅದು ಅಕ್ರಮ ಸಂಬಂಧಕ್ಕೆ ಮಾರ್ಪಟ್ಟಿದೆ.

ಕೊಲೆ ಕ್ರೂರತೆ :

ಘಟನೆಯ ದಿನ ಪತ್ನಿ (Wife) ಶರಣಮ್ಮನ ಪತಿ ಮದ್ಯಪಾನ ಮಾಡಿ ಮಲಗಿದ್ದಾಗ, ವೀರಭದ್ರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರೂ ಸೇರಿ ಬಸವರಾಜುವಿನ ತಲೆಗೆ ಕಲ್ಲಿನಿಂದ ಹೊಡೆದು, ನಂತರ ಅವನಿಗೆ ನೇಣು ಬಿಗಿದು ಕೊಲೆ ಮಾಡಿದ್ದಾರೆ. ನಂತರ ಶವವನ್ನು ಬೇರೆಡೆ ಸಾಗಿಸಲು ಅನಿಲ್ ಸಹಾಯ ಮಾಡಿದ್ದಾನೆ.

ಇದನ್ನು ಓದಿ : Crime : ಕರ್ನಾಟಕದ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್​​​ ಅವರ ಕಗ್ಗೊಲೆ.!
ಶವ ಸುಟ್ಟು ನಾಶಪಡಿಸಿದ ಆರೋಪಿಗಳು :

ಬಸವರಾಜುವಿನ ಶವವನ್ನು ಬಿಳಿ ಬಣ್ಣದ ಕಾರಿನಲ್ಲಿ ಗಂಗೊಂಡಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ಸುಟ್ಟ ಮರು ದಿನವೇ ಆರೋಪಿಗಳು ಅದೇ ಸ್ಥಳಕ್ಕೆ ಬಂದು ಶವದ ಸ್ಥಿತಿಯನ್ನು ಪರಿಶೀಲಿಸಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ನಾಟಕ : ‘ಗಂಡ ಕಾಣೆಯಾಗಿದ್ದಾನೆ’ ಎಂದು ಪೊಲೀಸರಿಗೆ ದೂರು ನೀಡಿದ್ದ ಪತ್ನಿ (Wife) :

ಶವ ಸುಟ್ಟ ಒಂದು ದಿನದ ನಂತರ ಪತ್ನಿ (Wife) ಶರಣಮ್ಮ ಮನೆಗೆಲ್ಲಿದ್ದ ನೆತ್ತರು ತೊಳೆಯುವ ಮೂಲಕ ಸುಳಿವು ಅಡಗಿಸಲು ಯತ್ನಿಸಿದ್ದಾಳೆ. ನಂತರ, “ನನ್ನ ಗಂಡ ಕಾಣೆಯಾಗಿದ್ದಾನೆ, ಹುಡುಕಿಕೊಡಿ” ಎಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಹೋಗಿ ನಾಟಕ ವಾಡಿದ್ದಾಳೆ.

ಆದರೆ, ಈ ವೇಳೆಗೆ ಸಿಸಿಟಿವಿ ದೃಶ್ಯಗಳು, ಕಾಲ್ ಡೀಟೇಲ್ಸ್ ಹಾಗೂ ತನಿಖಾ ಮಾಹಿತಿ ಪೊಲೀಸರಿಗೆ ತಲುಪಿದ್ದರಿಂದ, ಶರಣಮ್ಮನ ಹೇಳಿಕೆಯಲ್ಲಿ ಸಂಶಯ ಮೂಡಿತ್ತು.

ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ
ಸಿಸಿಟಿವಿ ದೃಶ್ಯವೇ ಮುಖ್ಯ ಸುಳಿವು :

ಮೃತದೇಹವನ್ನು ಕಾರಿನಲ್ಲಿ ಸಾಗಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಆಧಾರದ ಮೇಲೆ ಹುಡುಕಾಟ ಮುಂದುವರಿಸಿದ ಪೊಲೀಸರು, ಆರೋಪಿಗಳಾದ ಪತ್ನಿ (Wife) ಮತ್ತು ಪ್ರಿಯಕರನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.


ಹೆದ್ದಾರಿಯಲ್ಲೇ ಮಲಗಿದ್ದ Tiger ; 30 ನಿಮಿಷ ವಾಹನ ಸಂಚಾರ ಸ್ಥಗಿತ!

tiger rests on highway

ಜನಸ್ಪಂದನ ನ್ಯೂಸ್‌, ಮುಂಬೈ : ಮಹಾರಾಷ್ಟ್ರದ ಚಂದ್ರಾಪುರ–ಮುಲ್ ಹೆದ್ದಾರಿಯಲ್ಲಿ ಅಚ್ಚರಿ ಹುಟ್ಟಿಸುವ ಘಟನೆ ದಾಖಲಾಗಿದೆ. ಬೃಹತ್ ಗಾತ್ರದ ಹುಲಿ (Tiger) ಎರಡು ಎತ್ತುಗಳನ್ನು ಬೇಟೆಯಾಡಿದ ನಂತರ, ಹೆದ್ದಾರಿಯಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಿದ್ದುದನ್ನು ಸ್ಥಳೀಯರು ಕಂಡು ಬೆಚ್ಚಿಬಿದ್ದರು.

ಈ ಪ್ರದೇಶವು ತಡೋಬಾ–ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ (TATR) ಬಫರ್ ವಲಯಕ್ಕೆ ಹೊಂದಿಕೊಂಡಿದ್ದು, ಇಲ್ಲಿ ವನ್ಯಜೀವಿಗಳ ಸಂಚಾರ ಸಾಮಾನ್ಯವಾಗಿದ್ದರೂ, ರೋಡ್ ಮಧ್ಯೆ ಕುಳಿತುಕೊಳ್ಳುವ ಘಟನೆ ವಿರಳ.

ಇದನ್ನು ಓದಿ : ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder.
‘ಮಾಮಾ ಮೆಲ್’ ಹೆಸರಿನ ಹುಲಿ – ದಿಟ್ಟ ಸ್ವಭಾವಕ್ಕೆ ಪ್ರಸಿದ್ಧ :

ಮಾಮಾ ಮೆಲ್’ ಎಂಬ ಹೆಸರಿನ ಈ ಹುಲಿ (Tiger), ತನ್ನ ಬಲಿಷ್ಠ ದೇಹ ಹಾಗೂ ನಿರ್ಭಯ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ರಸ್ತೆ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೂ, ಜನರ ಶಬ್ದ ಅಥವಾ ಚಲನೆ ಈ ಹುಲಿಗೆ ಯಾವುದೇ ತೊಂದರೆ ಆಗಲಿಲ್ಲ. ಅದು ಸಮಯದಲ್ಲಿ ನಿರಾಳವಾಗಿ ರಸ್ತೆಯ ಮಧ್ಯೆ ಮಲಗಿ ವಿಶ್ರಾಂತಿ ಮುಂದುವರಿಸಿತು.

ವಾಹನ ಸಂಚಾರ ಅರ್ಧ ಗಂಟೆ ಸ್ಥಗಿತ :

ಹುಲಿ (Tiger) ರಸ್ತೆ ಮಧ್ಯೆ ಕುಳಿತಿದ್ದರಿಂದ, ಚಂದ್ರಾಪುರದಿಂದ ಮುಲ್ ಹಾಗೂ ಮುಲ್‌ನಿಂದ ಚಂದ್ರಾಪುರಕ್ಕೆ ಹೋಗುವ ವಾಹನಗಳ ಸಂಚಾರವನ್ನು ಅರಣ್ಯ ಅಧಿಕಾರಿಗಳು ತಾತ್ಕಾಲಿಕವಾಗಿ ನಿಲ್ಲಿಸಿದರು.

  • ವಾಹನಗಳ ಮತ್ತು ಹುಲಿಯ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಯಿತು
  • ಜನರು ಮೊಬೈಲ್‌ ತೆಗೆದು ಹತ್ತಿರ ಹೋಗದಂತೆ ಎಚ್ಚರಿಸಲಾಯಿತು
  • ಪ್ರಾಣಿಗೆ ಅಡ್ಡಿಯಾಗದಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ
ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!
ಹುಲಿ (Tiger) ವಿಡಿಯೋ :
ತಾನಾಗಿಯೇ ಕಾಡಿಗೆ ಮರಳಿದ ಹುಲಿ :

ಸುಮಾರು 30 ನಿಮಿಷಗಳ ಕಾಲ ಹೆದ್ದಾರಿ ಸಂಪೂರ್ಣ ನಿಶ್ಶಬ್ದವಾಗಿತ್ತು. ಬಳಿಕ ಹುಲಿ ನಿಧಾನವಾಗಿ ಎದ್ದುಕೊಂಡು, ತನ್ನಷ್ಟಕ್ಕೆ ತಾನೇ ಕಾಡಿನ ದಿಕ್ಕಿಗೆ ನಡೆದು ಹೊಗಿತು. ಅರಣ್ಯ ಇಲಾಖೆ ಹುಲಿ (Tiger) ಯ ಚಲನವಲನವನ್ನು ಗಮನಿಸಿ, ಪ್ರಯಾಣಿಕರಿಗೆ ಸುರಕ್ಷತೆ ನೀಡಿದ ಬಳಿಕ ಸಂಚಾರವನ್ನು ಮರು ಪ್ರಾರಂಭಿಸಿತು.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments