ಜನಸ್ಪಂದನ ನ್ಯೂಸ್, ಡೆಸ್ಕ್ : ಪತ್ನಿ (Wife) ಯೋರ್ವಳು, ತನ್ನ ಪತಿಯನ್ನು ಹತ್ಯೆಗೈದು ನಂತರ ಮೃತದೇಹವನ್ನು ಮನೆ ಮುಂದೆ ಎಸೆದು ಹೋದ ಮಾನವೀಯತೆಯ ಹದಗೆಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಇಂತಹ ಹದಗೆಟ್ಟ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಇಲ್ಲಿ ಪತ್ನಿ (Wife) ಯೊಬ್ಬಳು ತನ್ನ ತಮ್ಮನ ಸಹಾಯದಿಂದ ಗಂಡನನ್ನು ಭೀಕರವಾಗಿ ಹತ್ಯೆ ಮಾಡಿ, ನಂತರ ಆತನ ಮೃತದೇಹವನ್ನು ನೇರವಾಗಿ ಗಂಡನ ಮನೆಯ ಮುಂದೆ ಎಸೆದಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಇದನ್ನು ಓದಿ : Indian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!
ಮೃತ ದುರ್ದೈವಿ ಪತಿಯನ್ನು ನಂದ್ಯಾಲ ಜಿಲ್ಲೆಯ ನೂನೆಪಲ್ಲೆ ಗ್ರಾಮದ ನಿವಾಸಿ ರಾಮಣಯ್ಯ (50) ಎದು ಗುರುತಿಸಲಾಗಿದ್ದು, ಪತ್ನಿ (Wife) ರಮಣಮ್ಮ ಮತ್ತು ಆಕೆಯ ತಮ್ಮ ರಾಮಯ್ಯ ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗುತ್ತಿದೆ.
ಘಟನೆ ಹೀಗಿದೆ :
ರಾಮಣಯ್ಯ ಕಳೆದ 20 ವರ್ಷಗಳಿಂದ ಪಿಡುಗುರಲ್ಲ ಗ್ರಾಮದ ರಮಣಮ್ಮ ಎಂಬುವವರೊಂದಿಗೆ ವಿವಾಹಿತರಾಗಿದ್ದು, ದಂಪತಿಗಳಿಗೆ ಜ್ಯೋತಿ, ಚಂದನ ಮತ್ತು ಸಾಯಿ ಎಂಬ ಮೂರು ಮಕ್ಕಳು. ಕೆಲ ವರ್ಷಗಳಿಂದ ದಂಪತಿಯ ನಡುವೆ ಗಂಭೀರ ಮನಸ್ತಾಪ ಉಂಟಾಗಿದ್ದ ಹಿನ್ನೆಲೆಯಲ್ಲಿ, ರಮಣಮ್ಮ ತನ್ನ ತವರುಮನೆ ಪಿಡುಗುರಲ್ಲ ಗ್ರಾಮದಲ್ಲಿ ವಾಸಿಸುತ್ತಿದ್ದಳು.
ಇತ್ತೀಚೆಗೆ ಪತ್ನಿ (Wife) ಯನ್ನು ಮನೆಗೆ ಕರೆತರಲು ರಾಮಣಯ್ಯ ಪಿಡುಗುರಲ್ಲ ಗ್ರಾಮಕ್ಕೆ ಹೋಗಿದ್ದ. ಅಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಪತ್ನಿ (Wife) ರಮಣಮ್ಮ ಮತ್ತು ಆಕೆಯ ಸಹೋದರ ರಾಮಯ್ಯ ಇಬ್ಬರು ರಾಮಣಯ್ಯನ ಮೇಲೆ ಕಣ್ಣಿಗೆ ಕಾರದ ಪುಡಿ ಎರಚಿ, ನಂತರ ಕತ್ತು ಹಿಸುಕಿಕೊಂಡು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : BSF : 3,588 ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹತ್ಯೆಯ ಬಳಿಕ ಅವರು ರಾಮಣಯ್ಯನ ಮೃತದೇಹವನ್ನು ನಂದ್ಯಾಲದ ರಾಮಣಯ್ಯನ ಮನೆಯ ಎದುರು ಎಸೆದು ಪರಾರಿಯಾದ್ದಾರೆ. ಘಟನೆ ಕಂಡ ಮಕ್ಕಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು (Wife & brother in law) ಇಬ್ಬರನ್ನೂ ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”
ಜನಸ್ಪಂದನ ನ್ಯೂಸ್, ಅರೋಗ್ಯ : ಬೆಳಿಗ್ಗೆಯ ಈ 4 ಲಕ್ಷಣಗಳು ಕಂಡು ಬಂದರೆ ಅವುಗಳನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಅವು ಮೂತ್ರಪಿಂಡ (Kidney) ದ ಆರಂಭಿಕ ಸಮಸ್ಯೆಯ ಸೂಚನೆಗಳಾಗಿರಬಹುದು.! ಹಾಗಾದ್ರೆ ಆ ಲಕ್ಷಣಗಳಾವವು.? ಬನ್ನಿ ಅದರ ಬಗ್ಗೆ ತಿಳಿಯೋಣ.