Tuesday, September 17, 2024
spot_img
spot_img
spot_img
spot_img
spot_img
spot_img
spot_img

ಹಾವು-ಮುಂಗುಸಿ ಬದ್ಧವೈರಿಗಳಾಗಲು ಕಾರಣವೇನು.? ; ಹಾವು-ಮುಂಗುಸಿ ಕಾದಾಟದ Video ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹಾವು-ಮುಂಗುಸಿ (Snake-mongoose) ಆ ಜನ್ಮದ ಶತ್ರುಗಳೆಂದೇ ಹೆಸರು ಪಡೆದಿವೆ. ಇವು ಯಾವುದೇ ಕ್ಷಣದಲ್ಲಿ ಎದುರು-ಬದುರಾದರೆ ಸಾಕು ಅಲ್ಲೊಂದು ಯುದ್ಧ ನಡೆದೇ ತೀರುತ್ತದೆ.

ಸದ್ಯ ಹಾವು ಹಾಗೂ ಮುಂಗುಸಿ ಪರಸ್ಪರ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ. ಈ ವಿಡಿಯೋ ಸದ್ಯ ಟ್ರೆಂಡಿಂಗ್ ನಲ್ಲಿದ್ದು ಇದುವರೆಗೆ 13 ಮಿಲಿಯನ್ ವೀಕ್ಷಣೆ ಪಡೆದಿದೆ.

ಇದನ್ನು ಓದಿ : ಮೊಬೈಲ್‌ನಲ್ಲಿ ಮಾತನಾಡುತ್ತಾ ತರಕಾರಿ ಬದಲಿಗೆ ಹೆತ್ತ ಮಗುವನ್ನೇ ಫ್ರಿಡ್ಜ್‌ನಲ್ಲಿಟ್ಟ ಮಹಾತಾಯಿ ; ಭಯಾನಕ Video viral.!

ಇವುಗಳು ದ್ವೇಷಿಸಲು ವೈಜ್ಞಾನಿಕ ಕಾರಣ :

ಸರ್ವೈವಲ್ ಆಫ್ ಫಿಟ್ಟೆಸ್ಟ್ ಎಂಬ ಚಾರ್ಲ್ಸ್​ ಡಾರ್ವಿನ್​ ಸಿದ್ಧಾಂತದ (Charles Darwin’s theory) ಪ್ರಕಾರ ತಮ್ಮ ಪ್ರಾಣ ಉಳಿಸಿಕೊಳ್ಳಲು ಈ ಪ್ರಾಣಿಗಳು ಪರಸ್ಪರ ಆಕ್ರಮಣ ಮಾಡುತ್ತವೆ.

ಹಾವು ಮುಂಗುಸಿಯನ್ನು ಕೊಂದು ಬದುಕಲು ಬಯಸುತ್ತದೆ. ಅಂತೆಯೇ, ಮುಂಗುಸಿಯು ಹಾವನ್ನು ಕೊಲ್ಲಲು (kill) ಬಯಸುತ್ತದೆ. ಹಾವುಗಳು ಮತ್ತು ಮುಂಗುಸಿಗಳು ನೈಸರ್ಗಿಕ ಶತ್ರುಗಳು ಎಂದು ಹೇಳಲಾಗಿದೆ.

ಇನ್ನೂ ಹಾವು ಹೆಚ್ಚಾಗಿ ಮುಂಗುಸಿಯ ಮರಿಗಳನ್ನು ತಿನ್ನುವುದರಿಂದ ಮುಂಗುಸಿಯ ಮರಿಗಳು ಹಾವಿಗೆ ಬಲಿಯಾಗುತ್ತವೆ. ಆದ್ದರಿಂದ, ಮುಂಗುಸಿಯು ತನ್ನ ಮರಿಗಳನ್ನು ರಕ್ಷಿಸಲು ಹಾವಿನ ಮೇಲೆ ದಾಳಿ (attack) ಮಾಡುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಇವೆರಡರಲ್ಲಿ ಮುಂಗುಸಿಯು ಚುರುಕಾದ ಪ್ರಾಣಿಯಾಗಿದೆ (smart animal). ಅದು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು. ಹಾವು ಮತ್ತು ಮುಂಗುಸಿಯ ನಡುವಿನ ಕಾದಾಟದಲ್ಲಿ ಮುಂಗುಸಿಯು ಶೇ. 80 ರಷ್ಟು ಸಮಯವನ್ನು ಗೆಲ್ಲುತ್ತದೆ ಎಂದು ನಂಬಲಾಗಿದೆ.

ಇದನ್ನು ಓದಿ : ಚಿರತೆ ಜೊತೆ Selfie ತೆಗೆದುಕೊಂಡ ಯುವಕ ; ಮುಂದೆನಾಯ್ತು, ಈ ವಿಡಿಯೋ ನೋಡಿ.!

ಮುಂಗುಸಿಯು ಹಾವಿನ ಬಗ್ಗೆ ಸದಾ ಎಚ್ಚರಿಕೆಯಿಂದಿರುತ್ತದೆ. ಹಾವನ್ನು ಕಂಡ ತಕ್ಷಣ ಅಥವಾ ಹಾವಿನ ಚಲನೆಯ ಶಬ್ದವನ್ನು ಕೇಳಿದ ತಕ್ಷಣ ಅಥವಾ ತನ್ನ ಮರಿಗಳು ಸೂಚಿಸುವ ಅಪಾಯದ ಸಂಜ್ಞೆಗಳನ್ನು (Danger signs) ತಿಳಿದ ತಕ್ಷಣವೇ ಜಾಗರೂಕವಾಗಿ ಹಾವಿನ ಮೇಲೆ ದಾಳಿ ನಡೆಸುತ್ತದೆ.

ಮುಂಗುಸಿಯು ಬಹಳ ಚಾಕಚಕ್ಯತೆಯಿಂದ ಹಾವಿನ ಕಡಿತದಿಂದ ಪಾರಾಗಲು ಹೋರಾಡುತ್ತದೆ. ಕೆಲವೇ ಸಮಯದಲ್ಲಿ ಹಾವಿನ ದೇಹದ ಯಾವುದಾದರೊಂದು ಭಾಗವನ್ನು ತನ್ನ ಹಲ್ಲುಗಳಿಂದ ಬಲವಾಗಿ ಕಚ್ಚಿ ಹಾವಿಗೆ ಭಯ ಹುಟ್ಟಿಸುತ್ತದೆ.

ಇದನ್ನು ಓದಿ : Health : ಬೇಸಿಗೆಯಲ್ಲಿ ಕಬ್ಬಿನ ರಸ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

ಒಂದು ವೇಳೆ ಹಾವಿನ ಕಡಿತಕ್ಕೆ ಮುಂಗುಸಿಯೇ ಒಳಗಾದರೆ ಹಾವಿನ ವಿಷದಿಂದ ಪಾರಾಗುವ ಸಸ್ಯವನ್ನು ತಿಂದು ಬಚಾವಾಗುತ್ತದೆ ಎಂದೂ ಸಹ ಹೇಳಲಾಗುತ್ತದೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img