Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಉಗುರಿನ ಮೇಲೆ ಬಿಳಿ ಚುಕ್ಕೆಗಳು ಈ ಗಂಭೀರ ಕಾಯಿಲೆಗಳ ಲಕ್ಷಣಗಳಾಗಿವೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ವೈದ್ಯರ ಪ್ರಕಾರ, ಲ್ಯುಕೋನಿಚಿಯಾ ಎಂದೂ ಕರೆಯಲ್ಪಡುವ ಉಗುರುಗಳ ಮೇಲಿನ ಬಿಳಿ ಚುಕ್ಕೆಗಳ ಸಾಮಾನ್ಯ ಕಾರಣವೆಂದರೆ ಉಗುರುಗಳ ಗಾಯವಾಗಿದೆ. ನಿಮ್ಮ ಉಗುರು ಅಥವಾ ಬೆರಳಿನ ಮೇಲೆ ಗಾಯಗಳಾದಾಗ ಈ ರೀತಿಯ ಕಲೆಗಳು ಹುಟ್ಟಿಕೊಳ್ಳುತ್ತವೆ.

ಲ್ಯುಕೋನಿಚಿಯಾ ಎನ್ನುವುದು ಬೆರಳಿನ ಉಗುರುಗಳು ಅಥವಾ ಕೆಲವೊಮ್ಮೆ ಕಾಲ್ಬೆರಳ ಉಗುರುಗಳ ಮೇಲೆ ಬಿಳಿ ಗೆರೆಗಳು ಅಥವಾ ಚುಕ್ಕೆಗಳು ಕಾಣಿಸಿಕೊಳ್ಳುವ ಸ್ಥಿತಿಯಾಗಿದೆ. ಬೆರಳಿನ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳು ತಿಳಿ ಗುಲಾಬಿ ಬಣ್ಣವನ್ನು ಹೊಂದಿರಬೇಕು ಮತ್ತು ಕೆಲವೊಮ್ಮೆ ಈ ಬಿಳಿ ಚುಕ್ಕೆಗಳು ಸಹ ಕಾಣಿಸಿಕೊಳ್ಳಬಹುದು. ಉಗುರುಗಳ ಮೇಲಿನ ಈ ಕಲೆಗಳು ಯಕೃತ್ತಿನ ಕಾಯಿಲೆ ಅಥವಾ ರಕ್ತಹೀನತೆಯಂತಹ ಆಧಾರವಾಗಿರುವ ಆರೋಗ್ಯ ಪರಿಸ್ಥಿತಿಗಳನ್ನು ಸಹ ಸೂಚಿಸಬಹುದು.

ಇದನ್ನು ಓದಿ : LIC ಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್’ನಲ್ಲಿ ಜೂನಿಯರ್ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇನ್ನೂ ನಿಮ್ಮ ಉಗುರುಗಳ ಮೇಲೆ ಈ ಅಸಾಮಾನ್ಯ ಕಲೆಗಳಿಗೆ ಕಾರಣವಾಗುವ ಹಲವಾರು ಇತರ ಕಾರಣಗಳಿವೆ

* ನಮ್ಮ ದೇಹಕ್ಕೆ ಸಮರ್ಪಕವಾಗಿ ಪೌಷ್ಟಿಕಾಂಶಗಳು ಎಲ್ಲಾ ರೀತಿಯಲ್ಲೂ ಸಿಗಬೇಕು. ಒಂದು ವೇಳೆ ಸಿಗದಿದ್ದರೆ ಅದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಎದುರಾಗುತ್ತವೆ. ವಿಶೇಷವಾಗಿ ಜಿಂಕ್, ವಿಟಮಿನ್ ಡಿ, ಸೆಲಿನಿಯಂ ಇತ್ಯಾದಿ ಅಂಶಗಳು.

ಇವುಗಳ ಕೊರತೆ ಉಗುರುಗಳ ಮೇಲೆ ಬಿಳಿ ಬಣ್ಣದ ಮಚ್ಚೆಗಳು ಕಾಣಿಸುವಂತೆ ಮಾಡುತ್ತವೆ. ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳುವುದರಿಂದ ಇದರಿಂದ ಪಾರಾಗಬಹುದು.

* ನಿಮಗೆ ಉಗುರು ಸುತ್ತು ಗೊತ್ತಿರಬಹುದು. ಇದು ಒಂದು ರೀತಿಯ ಫಂಗಲ್ ಸೋಂಕು. ಇದರ ಪ್ರಭಾವದಿಂದ ಕೂಡ ಉಗುರುಗಳ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಮಚ್ಚೆಗಳು ಕಂಡು ಬರುತ್ತವೆ.
ಸರಿಯಾದ ಚಿಕಿತ್ಸೆ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವುದು ಈ ಸಂದರ್ಭದಲ್ಲಿ ಅನಿವಾರ್ಯವಾಗುತ್ತದೆ. ಹೀಗೆ ಮಾಡಿದರೆ ಕ್ರಮೇಣವಾಗಿ ಉಗುರು ಸುತ್ತು ಮಾಯವಾಗುತ್ತದೆ ಮತ್ತು ಉಗುರುಗಳ ಮೇಲೆ ಕಂಡುಬಂದಿರುವ ಮಚ್ಚೆಗಳು ಸಹ ಹೊರಟು ಹೋಗುತ್ತವೆ.​

ಇದನ್ನು ಓದಿ : BSNLಗೆ ಪೋರ್ಟ್ ಆಗ್ತೀರಾ.? ನಿಮ್ಮ ಸುತ್ತಮುತ್ತ ಟವರ್ ಇದೆಯಾ ಅಥವಾ ಇಲ್ವಾ ಅಂತ ಚೆಕ್ ಮಾಡಿಕೊಳ್ಳಿ.

* ಲಿವರ್ ನಮ್ಮ ದೇಹದ ಬಹುತೇಕ ಕಾರ್ಯ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಳ್ಳುತ್ತದೆ. ಅದರಲ್ಲಿನ ತೊಂದರೆ ಉಗುರುಗಳ ಮೇಲೆ ಬಿಳಿ ಮಚ್ಚೆ ಗಳು ಕಂಡು ಬರುವ ಹಾಗೆ ಮಾಡುತ್ತದೆ.

* ಸಕ್ಕರೆ ಕಾಯಿಲೆ ಇರುವ ಜನರಿಗೂ ಕೂಡ ಉಗುರುಗಳಲ್ಲಿ ಬಿಳಿ ಮಚ್ಚೆಗಳು ಕಾಣಿಸುತ್ತಿವೆ. ಬ್ಲಡ್ ಶುಗರ್ ಲೆವೆಲ್ ಜಾಸ್ತಿಯಾದಾಗ ಅದರ ಪರಿಣಾಮ ದಿಂದ ಕೈ ಬೆರಳುಗಳ ಎಲ್ಲಾ ಉಗುರುಗಳಲ್ಲಿ ಅಥವಾ ಕೆಲವು ಬೆರಳುಗಳ ಉಗುರುಗಳಲ್ಲಿ ಸಣ್ಣ ಸಣ್ಣದಾಗಿ ಬಿಳಿ ಬಣ್ಣದ ಮಚ್ಚೆಗಳು ಕಾಣಿಸುತ್ತಿವೆ.

* ಯಾವುದೋ ಸಂದರ್ಭದಲ್ಲಿ ನಮಗೆ ಗೊತ್ತಿರದೆ ಮಾಡಿ ಕೊಂಡಂತಹ ಉಗುರುಗಳ ಪೆಟ್ಟು ಅವುಗಳ ಸೌಂದರ್ಯ ವನ್ನು ಹಾಳುಮಾಡುತ್ತದೆ. ಉಗುರುಗಳ ಮೇಲೆ ಬಿಳಿ ಮಚ್ಚೆ ಕಂಡು ಬರುವಂತೆ ಮಾಡುತ್ತದೆ.

* ಮೂತ್ರ ಪಿಂಡಗಳು ನಮ್ಮ ದೇಹದಿಂದ ಬೇಡದ ತ್ಯಾಜ್ಯ ವನ್ನು ಮೂತ್ರದ ರೂಪದಲ್ಲಿ ಹೊರ ಹಾಕುತ್ತವೆ. ಆದರೆ ಕಿಡ್ನಿಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಆಗದೆ ಇದ್ದರೆ, ಅಂತಹ ಸಂದರ್ಭದಲ್ಲಿ ನಮ್ಮ ಉಗುರುಗಳ ಮೇಲ್ಭಾಗದಲ್ಲಿ ಮಚ್ಚೆಗಳು ಕಾಣಿಸುತ್ತವೆ.

* ನಮ್ಮ ಮೂಳೆಗಳ ಅಭಿವೃದ್ಧಿಯಲ್ಲಿ ನೆರವಾಗುವ ಕ್ಯಾಲ್ಸಿಯಂ ಉಗುರುಗಳ ಆರೋಗ್ಯವನ್ನು ಸಹ ಕಾಪಾಡುತ್ತದೆ. ಆದರೆ ನಮ್ಮ ರಕ್ತದಲ್ಲಿ ಕ್ಯಾಲ್ಸಿಯಂ ಕೊರತೆ ಕಂಡು ಬಂದರೆ ಅದರಿಂದ ಉಗುರುಗಳ ಆರೋಗ್ಯ ಹಾಳಾಗುತ್ತದೆ. ಉಗುರುಗಳ ಮೇಲೆ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.

ಇದನ್ನು ಓದಿ : 3 ತಿಂಗಳ ಫ್ರೀ ರಿಚಾರ್ಜ್ ಲಭ್ಯ.! ಈ ಮೆಸೇಜ್ ನಿಮ್ಗೂ ಬಂತಾ.? Click ಮಾಡೋದಕ್ಕಿಂತ ಮುಂಚೆ ಈ ಸುದ್ದಿ ಓದಿ.

* ಹೃದಯದಲ್ಲಿ ಏನಾದರೂ ತೊಂದರೆ ಇದ್ದರೆ ಅದು ಸರಿಯಾದ ರೀತಿಯಲ್ಲಿ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ.
ಇದರಿಂದ ಉಗುರುಗಳ ಭಾಗದ ಚರ್ಮಕ್ಕೂ ರಕ್ತ ಸಂಚಾರ ಕಡಿಮೆ ಇರುತ್ತದೆ. ಹೀಗಾಗಿ ಉಗುರುಗಳ ಮೇಲೆ ಮಚ್ಚೆಗಳು ಕಂಡುಬರುತ್ತವೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img