Sunday, September 8, 2024
spot_img
spot_img
spot_img
spot_img
spot_img
spot_img
spot_img

ಬೋಟನ್ನೇ ಪಲ್ಟಿ ಮಾಡಿದ ದೈತ್ಯ ತಿಮಿಂಗಿಲ ; ಮೈ ಜುಮ್ಮೆನ್ನಿಸುತ್ತೆ ಈ Video..!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬೃಹತ್ ಗಾತ್ರದ ತಿಮಿಂಗಿಲವೊಂದು ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಮೀನುಗಾರಿಕಾ ಬೋಟನ್ನು ಬುಡಮೇಲು ಮಾಡಿದ ಘಟನೆ ಅಮೆರಿಕಾದ ನ್ಯೂ ಇಂಗ್ಲೆಂಡ್‌ನ ನ್ಯೂ ನ್ಯೂ ಹಂಪ್ಶೈರ್‌ ಸಮೀಪವಿರುವ ಪೋರ್ಟ್‌ಸ್ಮೂತ್‌ ಹರ್ಬರ್‌ ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Nurse ಜೊತೆ ಹೆಡ್ ಕಾನ್ಸ್‌ಟೇಬಲ್ ಅಕ್ರಮ ಸಂಬಂಧ ; ರೆಡ್ ಹ್ಯಾಂಡ್ಆಗಿ ಹಿಡಿದ ಕಾನ್ಸ್‌ಟೇಬಲ್ ಪತ್ನಿ.!

ಈ ಘಟನೆ ನಡೆದ ವೇಳೆ ಸೋದರರಾದ 16 ವರ್ಷದ ಕೊಲಿನ್ ಯಗೇರ್ ಹಾಗೂ ಆತನ ಅಣ್ಣ 19 ವರ್ಷದ ವ್ಯಾಟ್ ಜೊತೆಗಿದ್ದರು ಎಂದು ವರದಿಯಾಗಿದೆ. ಬೋಟ್‌ನಲ್ಲಿ ಇವರಿಬ್ಬರು ಇದ್ದು ಅವರು ಸಮುದ್ರಕ್ಕೆ ಬಿದ್ದಿದ್ದಾರೆ.

ಸಮುದ್ರದಲ್ಲಿ ಬೋಟು ಸಾಗುತ್ತಿದ್ದಾಗ ಒಮ್ಮೆಲೇ ತಿಮಿಂಗಿಲ ಮೇಲೇರಿ ಬಂದಿದ್ದು, ಪರಿಣಾಮ ಬೋಟ್ ತಲೆಕೆಳಗಾಗಿದೆ. ಬೋಟ್‌ನಲ್ಲಿದ್ದವರೆಲ್ಲೂ ಸಮುದ್ರಕ್ಕೆ ಬಿದ್ದಿದ್ದಾರೆ.

ಇತರ ಬೋಟ್‌ಗಳಲ್ಲಿದ್ದ ಜನರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

ಇದನ್ನು ಓದಿ : ಜಮೀನಿಗೆ ಹೋಗಿದ್ದ ಮಹಿಳೆಯರ ಜೀವಂತ ಸಮಾಧಿಗೆ ಯತ್ನ : ಎಲ್ಲೆಡೆ ಭಾರೀ ವಿರೋಧ ; ಹೃದಯ ವಿದ್ರಾವಕ ಘಟನೆಯ video ವೈರಲ್.!

ನೀರಿನಿಂದ ಮೇಲೆದ್ದ ತಿಮಿಂಗಿಲ ಬೋಟ್‌ ಸಮೀಪದಲ್ಲೇ ಮೇಲೆ ಜಿಗಿದಿದ್ದು, ಇದರ ರಭಸಕ್ಕೆ ಬೋಟ್ ಅಡಿ ಮೇಲಾಗಿದೆ.

ಇನ್ನೊಂದು ಬೋಟ್‌ನಲ್ಲಿದ್ದವರು ಕೂಡಲೇ ತಮ್ಮ ಮೊಬೈಲ್‌ನಲ್ಲಿ ಈ ಭಯಾನಕ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅಲ್ಲದೇ ಕೂಡಲೇ ಸಮುದ್ರಕ್ಕೆ ಬಿದ್ದ ಮೀನುಗಾರರ ನೆರವಿಗೆ ಧಾವಿಸಿದ್ದಾರೆ.

ಘಟನೆ ನಡೆಯುವ ವೇಳೆ ಬೋಟ್‌ನಲ್ಲಿದ್ದ ಓರ್ವ ನೀರಿಗೆ ಹಾರಿದ್ದರೆ, ಮತ್ತೋರ್ವ ಜಂಪ್ ಮಾಡಲು ಸಾಧ್ಯವಾಗದೆ, ಬೋಟ್ ಮಗುಚಿದ ನಂತರ ಕೂಡಲೇ ನೀರಿನ ಮೇಲ್ಭಾಗಕ್ಕೆ ಈಜುತ್ತಾ ಬಂದು ಪಾರಾಗಿದ್ದಾನೆ ಎಂದು WMTW-TV ವರದಿ ಮಾಡಿದೆ.

ಇದನ್ನು ಓದಿ : WhatsApp ಬಳಕೆದಾರರಿಗೆ ಗುಡ್‌ ನ್ಯೂಸ್ ; ಇನ್ಮುಂದೆ ಇಂಟರ್ನೆಟ್ ಇಲ್ಲದೆಯೇ ಕಳುಹಿಸಬಹುದು ಫೋಟೋ, ಫೈಲ್.!

ಇನ್ನೂ ಘಟನೆಯಲ್ಲಿ ಯಾರೊಬ್ಬರಿಗೂ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾದ ಕೋಸ್ಟ್ ಗಾರ್ಡ್‌ಗಳು ಕೂಡ ಎರಡು ಬೋಟ್‌ಗಳ ಸಿಬ್ಬಂದಿ ಕೂಡ ಯಾವುದೇ ಹಾನಿ ಇಲ್ಲದೇ ಪಾರಾಗಿದ್ದಾರೆ.

ತಿಮಿಂಗಿಲಗಳು ನ್ಯೂ ಹಂಪ್ಶೈರ್‌ ನ ನೀರಿನಲ್ಲಿ ಸಾಮಾನ್ಯವೆನಿಸಿದ್ದು, ವಿಶೇಷವಾಗಿ ಜೂನ್ ಹಾಗೂ ಆಗಸ್ಟ್ ತಿಂಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಪ್ರಕರಣದಲ್ಲಿ ಕಾಣಿಸಿಕೊಂಡ ತಿಮಿಂಗಿಲವೇ ಈ ಹಿಂದೆ ನಡೆದ ಇಂತಹ ಕೆಲ ಘಟನೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಈ ಬಗ್ಗೆ ಗಮನಿಸಿದ ಸ್ಥಳೀಯರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img