ಜನಸ್ಪಂದನ ನ್ಯೂಸ್, ಬೆಂಗಳೂರು : ನಮ್ಮ ವಾಹನಗಳ ನಂಬರ್ ಪ್ಲೇಟ್ (Number Plate) ಮೇಲೆ ಹೆಸರು, ಲೋಗೋ ಅಥವಾ ಲಾಂಛನಗಳನ್ನು ಹಾಕತ್ತಿರಾ.? ಸದ್ಯ ಸಾರಿಗೆ ಇಲಾಖೆ ಸ್ಪಷ್ಟವಾಗಿ ವಾಹನಗಳ ನಂಬರ್ ಪ್ಲೇಟ್ (Number Plate) ಮೇಲೆ ಹೆಸರು, ಲೋಗೋ ಅಥವಾ ಲಾಂಛನಗಳನ್ನು ನಿಷೇಧಿಸಿದೆ.
ಒಂದು ವೇಳೆ ಯಾರಾದರೂ ಈ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!
2019ರಿಂದ 15 ಸಾವಿರಕ್ಕೂ ಹೆಚ್ಚು ವಾಹನಗಳಿಗೆ ದಂಡ :
ಅಧಿಕೃತ ದತ್ತಾಂಶದ ಪ್ರಕಾರ, ಡಿಸೆಂಬರ್ 28, 2019 ರಿಂದ ಜುಲೈ 31, 2025 ರವರೆಗೆ ಒಟ್ಟು 14,982 ವಾಹನ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ರೂ.1,20,61,097 ದಂಡವನ್ನು ಸಂಗ್ರಹಿಸಲಾಗಿದೆ. ಅನಧಿಕೃತ ಲಾಂಛನಗಳು, ಹೆಸರುಗಳು ಹಾಗೂ ಲೋಗೋಗಳನ್ನು ನಂಬರ್ ಪ್ಲೇಟ್ (Number Plate) ನಲ್ಲಿ ಹಾಕಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ನಂಬರ್ ಪ್ಲೇಟ್‌ಗಳ ದುರುಪಯೋಗ :
ವಾಹನ ಚಾಲಕರು ವಾಹನಗಳ ನಂಬರ್ ಪ್ಲೇಟ್ (Number Plate) ಮೇಲೆ ಸರ್ಕಾರದ ಇಲಾಖೆಗಳು, ಮಂಡಳಿಗಳು ಅಥವಾ ಸಂಘಗಳ ಲಾಂಛನಗಳನ್ನು ಅನುಮತಿಯಿಲ್ಲದೆ ಬಳಸುವುದು ಸಾಮಾನ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ, ಸರಕಾರೇತರ ಸಂಸ್ಥೆಗಳ ಹೆಸರುಗಳು, ಲೋಗೋಗಳು ಮತ್ತು ವೈಯಕ್ತಿಕ ಪದನಾಮಗಳನ್ನು ಹಾಕುವುದನ್ನೂ ನಿಷೇಧಿಸಲಾಗಿದೆ.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಕಾನೂನು ಪ್ರಕಾರ ಉಲ್ಲಂಘನೆ :
ಸಂಖ್ಯೆ ಫಲಕದಲ್ಲಿ ಅನಧಿಕೃತ ಹೆಸರು ಅಥವಾ ಚಿಹ್ನೆಗಳನ್ನು ಹಾಕುವುದು ಕೇಂದ್ರ ಮೋಟಾರು ವಾಹನ ನಿಯಮಗಳು, 1989 (ನಿಯಮ 50 ಮತ್ತು 51) ಹಾಗೂ ಲಾಂಛನಗಳು ಮತ್ತು ಹೆಸರುಗಳ ಅನುಚಿತ ಬಳಕೆ ತಡೆಗಟ್ಟುವ ಕಾಯಿದೆ, 1950 ಉಲ್ಲಂಘನೆಯಾಗಿದೆ.
ಮಾನದಂಡ ಪಾಲನೆ ಅಗತ್ಯ :
ಸಾರಿಗೆ ಇಲಾಖೆ ಪ್ರಕಾರ, ನಂಬರ್ ಪ್ಲೇಟ್‌ಗಳನ್ನು (Number Plate) ನಿಗದಿತ ಮಾದರಿಯಲ್ಲಿಯೇ ಬಳಸಬೇಕು. ಫ್ಯಾನ್ಸಿ ಫಾಂಟ್‌ಗಳು, ಅಸ್ಪಷ್ಟ ಅಕ್ಷರಗಳು ಮತ್ತು ಅಲಂಕಾರಿಕ ವಿನ್ಯಾಸಗಳಿಗೂ ನಿಷೇಧ ಜಾರಿಯಲ್ಲಿದೆ.
ದಂಡದ ಮೊತ್ತ :
- ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದರೆ : ರೂ.500 ದಂಡ.
- ಪದೇಪದೇ ಉಲ್ಲಂಘನೆ ಮಾಡಿದರೆ : ರೂ.1,000 ದಂಡ.
ಮದುವೆ ಭರವಸೆ ನೀಡಿ ಮೋಸ ಮಾಡಿದ ಯುವಕ : ಆತ್ಮಹತ್ಯೆಗೆ ಯತ್ನಿಸಿದ Young woman ; ‘ಲೈವ್ ಸೂಸೈಡ್’ ವಿಡಿಯೋ ವೈರಲ್”
👉 ವಾಹನ ಮಾಲೀಕರು ನಿಯಮ ಉಲ್ಲಂಘನೆ ಮಾಡಿದರೆ ತಕ್ಷಣವೇ ದಂಡ ವಿಧಿಸಲಾಗುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
KSP : ರಾಜ್ಯದಲ್ಲಿ 4656 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.!
ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) 2025ರಲ್ಲಿ ದೊಡ್ಡ ಮಟ್ಟದ ನೇಮಕಾತಿ ಆರಂಭಿಸಲು ಸಿದ್ಧವಾಗಿದೆ. ಈ ಮೂಲಕ ಒಟ್ಟು 4656 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSP ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
Tantrik : ತಂತ್ರ-ಮಂತ್ರದಲ್ಲಿ ಪರಿಣಿತ ಎಂದು ಹೇಳಿಕೊಂಡ ವ್ಯಕ್ತಿಯಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ.!
ಅಧಿಕೃತ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ksp recruitment.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
- ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
- ಒಟ್ಟು ಹುದ್ದೆಗಳು : 4656.
- ಹುದ್ದೆಗಳ ಹೆಸರು : ಪೊಲೀಸ್ ಕಾನ್ಸ್‌ಟೇಬಲ್.
- ಉದ್ಯೋಗ ಸ್ಥಳ : ಕರ್ನಾಟಕ.
- ಅರ್ಜಿಯ ವಿಧಾನ : ಆನ್‌ಲೈನ್.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳ ಆಯ್ಕೆ ಹಂತಗಳು ಹೀಗಿವೆ,
- ಲಿಖಿತ ಪರೀಕ್ಷೆ.
- ಸಹಿಷ್ಣುತೆ ಪರೀಕ್ಷೆ (Endurance Test).
- ದೈಹಿಕ ಗುಣಮಟ್ಟ ಪರೀಕ್ಷೆ (Physical Standard Test).
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿ.
- ಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ.
- ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿದ್ದಲ್ಲಿ ಶುಲ್ಕವನ್ನು ಪಾವತಿಸಿ.
- ಫೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
- ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
- ಅಂತಿಮವಾಗಿ ಪ್ರಿಂಟ್ ತೆಗೆದುಕೊಳ್ಳಿ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲೇ.
ಪ್ರಮುಖ ಲಿಂಕ್‌ಗಳು :
- ಕಿರು ಅಧಿಸೂಚನೆ (Notification) : ಶೀಘ್ರದಲ್ಲಿ ಲಭ್ಯ.
- ಅರ್ಜಿಗೆ ಲಿಂಕ್ (Apply Online) : ಶೀಘ್ರದಲ್ಲಿ ಸಕ್ರಿಯ.
- ಅಧಿಕೃತ ವೆಬ್‌ಸೈಟ್ : ksp-recruitment.in
Disclaimer : This article is based on reports and information available on the internet. Janaspandhan News is not affiliated with it and is not responsible for it.